ಜುಲೈ 1ರಿಂದಲೇ ಕೇಂದ್ರದ ನೌಕರರ DA ಶೇ.31ಕ್ಕೆ ಹೆಚ್ಚಳ: ವಿತ್ತ ಸಚಿವಾಲಯ!

By Suvarna NewsFirst Published Oct 27, 2021, 9:08 AM IST
Highlights

*ಕೆಂದ್ರ ಸಂಪುಟದಿಂದ ತುಟ್ಟಿ ಭತ್ಯೆ  3%  ಹೆಚ್ಚಿಸಲು ಅಸ್ತು   
*ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ
*ಜು.1ರಿಂದಲೇ ಕೇಂದ್ರದ ನೌಕರರ ಡಿಎ ಶೇ.31ಕ್ಕೆ ಹೆಚ್ಚಳ!

ನವದೆಹಲಿ(ಅ. 27 ): 2021ರ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.28 ರಿಂದ ಶೇ.31ಕ್ಕೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ (Ministry of Finance) ಹೇಳಿದೆ. ಕೇಂದ್ರ ಸರ್ಕಾರಿ ನೌಕರರ ಮೂಲದ ವೇತನದ ಶೇ.28ರಷ್ಟು ಇದ್ದ ತುಟ್ಟಿಭತ್ಯೆಯನ್ನು ಶೇ.31ಕ್ಕೆ ಹೆಚ್ಚಿಸುವ ಮತ್ತು ತುಟ್ಟಿಭತ್ಯೆ ಪರಿಹಾರ ಹೆಚ್ಚಿಸುವ ನಿರ್ಧಾರವನ್ನು ಕಳೆದ ವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 

ಕೆನರಾ ಬ್ಯಾಂಕ್‌ ನಿವ್ವಳ ಲಾಭ ಶೇ. 200ರಷ್ಟು ಹೆಚ್ಚಳ

ನಾಗರಿಕ ಸೇವೆಗಳಿಗಾಗಿ ಭದ್ರತಾ ಸೇವೆಗಳ ಇಲಾಖೆಯಿಂದ ಪಾವತಿಸಲಾಗುವ ನಾಗರಿಕ ಸಿಬ್ಬಂದಿಗೂ ಇದು ಅನ್ವಯವಾಗಲಿದೆ. ಅಲ್ಲದೆ ರೈಲ್ವೆ ಸಿಬ್ಬಂದಿ, ಸೇನಾ ಪಡೆಗಳ ಸಿಬ್ಬಂದಿಯ ಡಿಎ ಕುರಿತಾಗಿ ರಕ್ಷಣಾ ಸಚಿವಾಲಯ ಮತ್ತು ರೈಲ್ವೆ ಇಲಾಖೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಿವೆ. ಸರ್ಕಾರದ ಈ ಕ್ರಮದಿಂದ 47.14 ಲಕ್ಷ ಮಂದಿ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಮಂದಿ ಪಿಂಚಣಿದಾರರಿಗೆ ನೆರವಾಗಲಿದೆ. "... ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ತುಟ್ಟಿಭತ್ಯೆಯನ್ನು ಪ್ರಸ್ತುತ ಇರುವ ಶೇಕಡಾ 28 ರಿಂದ ಶೇಕಡಾ 31 ಕ್ಕೆ ಹೆಚ್ಚಿಸಿ, ಜುಲೈ 1, 2021 ರಿಂದ ಜಾರಿಗೆ ತರಲಾಗುವುದು  "ಎಂದು ವಿತ್ತ ಸಚಿವಾಲಾಯ  ತಿಳಿಸಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ್ದ ಅನುರಾಗ್‌ ಠಾಕೂರ್‌!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರ ಶೇ. 3ರಷ್ಟು  ತುಟ್ಟಿ ಭತ್ಯೆ (Dearness allowance) ಹೆಚ್ಚಳಕ್ಕೆ ಕೇಂದ್ರ ಸಂಪುಟ ಗ್ರೀನ್‌ ಸಿಗ್ನಲ್ ನೀಡಿತ್ತು. ಈ ಹೆಚ್ಚಳದ ನಂತರ ಒಟ್ಟು ತುಟ್ಟಿ ಭತ್ಯೆ 31% ಆಗಲಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಭತ್ಯೆ ಪರಿಹಾರದ ಹೆಚ್ಚಳದಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು  68.62 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಇದರಿಂದ ಕೇಂದ್ರದ ಖಜಾನೆ ಮೇಲೆ ಪ್ರತಿ ವರ್ಷ 34,400 ಕೋಟಿ ಹೊರೆಯಾಗಲಿದೆ. ಜುಲೈ 1, 2021 ರಿಂದ ಈ ಭತ್ಯೆ ಅನ್ವಯಿಸುತ್ತದೆ ಎಂದು ಕೇಂದ್ರ ಮಂತ್ರಿ ಅನುರಾಗ್‌ ಠಾಕೂರ್‌ (Anuragh Thakur) ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು. 

ದೀಪಾವಳಿ ಪ್ರಯುಕ್ತ ಸರ್ಕಾರಿ ನೌಕರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್‌ !

ಕೊರೋನಾ ವೈರಸ್‌ (Coronavirus) ಕಾರಣದಿಂದಾಗಿ ಕೇಂದ್ರ ಸರ್ಕಾರಿ ನೌಕರರು (Central govt employees) ಮತ್ತು ಪಿಂಚಣಿದಾರರು  ಜನವರಿ 1 2020, ಜುಲೈ 1 2020 ಮತ್ತು ಜನವರಿ 1 2021 ಒಟ್ಟು ಮೂರು ಕಂತಿನ ತುಟ್ಟಿಭತ್ಯೆ (ಡಿಎ) ಹಾಗೂ ತುಟ್ಟಿ ಭತ್ಯೆ ಪರಿಹಾರ (ಡಿಆರ್‌) ಮೊತ್ತವನ್ನು ತಡೆಹಿಡಿಯಲಾಗಿತ್ತು. ಒಂದು ವರ್ಷದ ನಂತರ ಜುಲೈ ತಿಂಗಳನಲ್ಲಿ  ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುವ ಡಿಯರ್ನೆಸ್ ಅಲಾವೆನ್ಸ (DA) ಮತ್ತು ಡಿಯರ್ನೆಸ್ ರಿಲೀಫ್ (DR) ಅನ್ನು ಶೇ .17 ರಿಂದ 28 ಕ್ಕೆ ಹೆಚ್ಚಿಸಲು ಕೇಂದ್ರವು ಅನುಮೋದನೆ ನೀಡಿತ್ತು.  

click me!