ಹೂಡಿಕೆ ಮಾಡೋ ಮುನ್ನ ಟ್ರೆಂಡ್ ತಿಳಿದುಕೊಳ್ಳಿ; ಎಲ್ಲಿ ಹೂಡಿಕೆ ಮಾಡೋದು ಬೆಸ್ಟ್?

By Suvarna News  |  First Published Apr 28, 2023, 11:54 AM IST

ಹೂಡಿಕೆ ಮಾಡುವಾಗ ಪ್ರಸಕ್ತ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು,ರಿಸ್ಕ್ ಗಳು ಹಾಗೂ ಅದರೊಂದಿಗೆ ಲಿಂಕ್ ಆಗಿರುವ ಲಾಭದ ಬಗ್ಗೆ ಕೂಡ ಹೂಡಿಕೆದಾರರು ಮಾಹಿತಿ ಕಲೆ ಹಾಕುವುದು ಅಗತ್ಯ. ಆಗ ಮಾತ್ರ ಹೂಡಿಕೆಯಿಂದ ಉತ್ತಮ ರಿಟರ್ನ್ಸ್ ಪಡೆಯಲು ಸಾಧ್ಯವಾಗುತ್ತದೆ. ಹಾಗಾದ್ರೆ ಪ್ರಸಕ್ತ ಮಾರುಕಟ್ಟೆ ಟ್ರೆಂಡ್ ಹೇಗಿದೆ? ಇಲ್ಲಿದೆ ಮಾಹಿತಿ.
 


Business Desk: ಹೂಡಿಕೆ ವಲಯ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಈ ಹಿಂದೆ ಷೇರುಗಳು, ಬಾಂಡ್ ಗಳು ಹಾಗೂ ಮ್ಯೂಚುವಲ್ ಫಂಡ್ ಗಳಂತಹ ಸಾಂಪ್ರದಾಯಿಕ ಹೂಡಿಕೆಗಳು ಹೆಚ್ಚಿನ ಜನಪ್ರಿಯತೆ ಗಳಿಸಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ನೂತನ ಹೂಡಿಕೆ ವಿಧಾನಗಳು ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ. ಅಲ್ಲದೆ, ಈ ಹಿಂದಿಗಿಂತ ಈಗ ಹೂಡಿಕೆಯತ್ತ ಒಲವು ತೋರುತ್ತಿರೋರ ಸಂಖ್ಯೆ ಕೂಡ ಹೆಚ್ಚಿದೆ. ಇನ್ನು ಹೂಡಿಕೆಗೆ ಸಂಬಂಧಿಸಿದ ಜ್ಞಾನ ಕೂಡ ಹೆಚ್ಚಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು, ರಿಸ್ಕ್ ಗಳು ಹಾಗೂ ಅದರೊಂದಿಗೆ ಲಿಂಕ್ ಆಗಿರುವ ಲಾಭದ ಬಗ್ಗೆ ಕೂಡ ಹೂಡಿಕೆದಾರರು ಮಾಹಿತಿ ಕಲೆ ಹಾಕುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಳ ಸೇರಿದಂತೆ ವಿವಿಧ ನೈಸರ್ಗಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ಪರಿಸರ ಕಾಳಜಿಯುಳ್ಳ ಹೂಡಿಕೆಯತ್ತ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ. ಹೂಡಿಕೆ ಮಾಡುವ ಮುನ್ನ ಹಾಗೂ ಈಗಾಗಲೇ ಹೂಡಿಕೆ ಮಾಡಿರೋರು ಪ್ರಸಕ್ತ ಮಾರುಕಟ್ಟೆಯ ಟ್ರೆಂಡ್ ಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಪ್ರಸಕ್ತ ಸನ್ನಿವೇಶದಲ್ಲಿ ಹೂಡಿಕೆ ಮಾರುಕಟ್ಟೆಯ ಟ್ರೆಂಡ್ ಹೇಗಿದೆ? ಇಲ್ಲಿದೆ ಮಾಹಿತಿ.

ಸುಸ್ಥಿರ ಹೂಡಿಕೆ
ಇತ್ತೀಚಿನ ವರ್ಷಗಳಲ್ಲಿ ಸುಸ್ಥಿರ ಹೂಡಿಕೆ ಅಂದರೆ ಇಎಸ್ ಜಿ (ಪರಿಸರ, ಸಾಮಾಜ ಹಾಗೂ ಆಡಳಿತ) ಹೂಡಿಕೆ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ಹೂಡಿಕೆಯತ್ತ ಹೆಚ್ಚಿನ ಜನರು ಆಸಕ್ತಿ ತೋರುತ್ತಿದ್ದಾರೆ.  ಹವಾಮಾನ ಬದಲಾವಣೆ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಸ್ಥಿರ ಅಭ್ಯಾಸಗಳನ್ನು ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಲ್ಲಿ ಬಯಕೆ ಹೆಚ್ಚುತ್ತಿದೆ. ಕಾರ್ಬನ್ ಹೊರಸೂಸುವಿಕೆ, ಸಾಮಾಜಿಕ ಜವಾಬ್ದಾರಿ ಹಾಗೂ ಮಂಡಳಿ ವೈವಿಧ್ಯತೆಯನ್ನು ಸುಸ್ಥಿರ ಹೂಡಿಕೆಗೆ ಕಂಪನಿಗಳ ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗುತ್ತದೆ.ಅತ್ಯುತ್ತಮ ಇಎಸ್ ಜಿ ಅಭ್ಯಾಸಗಳನ್ನು ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಸುದೀರ್ಘ ಅವಧಿಯ ಗಳಿಕೆಯ ಜೊತೆಗೆ ಸಕಾರಾತ್ಮಕ ಸಾಮಾಜಿಕ ಹಾಗೂ ಪರಿಸರ ಸಂಬಂಧಿ ಫಲಿತಾಂಶಗಳನ್ನು ನಿರೀಕ್ಷಿಸಬಹುದು.  

Tap to resize

Latest Videos

ಮೊಬೈಲ್ ನಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಪರ್ಯಾಯ ಹೂಡಿಕೆ
ಖಾಸಗಿ ಈಕ್ವಿಟಿ, ಹೆಡ್ಜ ಫಂಡ್ಸ್, ರಿಯಲ್ ಎಸ್ಟೇಟ್ ಹಾಗೂ ಕಮೋಡಿಟೀಸ್ ಮುಂತಾದ ಪರ್ಯಾಯ ಹೂಡಿಕೆಗಳು ಕೂಡ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಈ ಹೂಡಿಕೆಗಳು ಸ್ಟ್ಯಾಂಡರ್ಡ್ ಹೂಡಿಕೆಗಳಿಗಿಂತ ಅಧಿಕ ಕನಿಷ್ಠ ಹೂಡಿಕೆ ಅಗತ್ಯಗಳನ್ನು ಹೊಂದಿವೆ.  ಅಧಿಕ ರಿಟರ್ನ್ಸ್ ಗೆ ಅವಕಾಶಗಳಿರುವ ಕಾರಣ ಹಾಗೂ ವೈವಿಧ್ಯತೆಯ ಪ್ರಯೋಜನದ ಹಿನ್ನೆಲೆಯಲ್ಲಿ ಪರ್ಯಾಯ ಹೂಡಿಕೆಗಳು ಜನಪ್ರಿಯತೆ ಗಳಿಸುತ್ತಿದೆ. 

ತಂತ್ರಜ್ಞಾನ ಆಧರಿತ ಹೂಡಿಕೆ
ಹೂಡಿಕೆ ವಲಯದಲ್ಲಿನ ಇನ್ನೊಂದು ಟ್ರೆಂಡ್ ತಂತ್ರಜ್ಞಾನ ಆಧಾರಿತ ಹೂಡಿಕೆ. ತಂತ್ರಜ್ಞಾನದಲ್ಲಿ ಮುಂದುವರಿದ ಉದ್ಯಮಗಳಾದ ಸೈಬರ್ ಸೆಕ್ಯುರಿಟಿ, ಕ್ಲೋಡ್ ಕಂಪ್ಯೂಟಿಂಗ್ ಹಾಗೂ ಕೃತಕ ಬುದ್ಧಿಮತ್ತೆ ಉದ್ಯಮಗಳಲ್ಲಿ ಹೂಡಿಕೆ ಮಾಡೋದು ಈಗಿನ ಟ್ರೆಂಡ್ ಆಗಿದೆ. ಹಣಕಾಸು ತಂತ್ರಜ್ಞಾನ ಸಂಸ್ಥೆಗಳ ಬೆಳವಣಿಗೆ ಷೇರು ಮಾರುಕಟ್ಟೆ ಸಂಪರ್ಕ ಹೊಂದಲು ಹಾಗೂ ತಂತ್ರಜ್ಞಾನ ಕಂಪನಿಗಳಲ್ಲಿ ಹೂಡಿಕೆ ಮಾಡಲು ಖಾಸಗಿ ಹೂಡಿಕೆದಾರರಿಗೆ ನೆರವು ನೀಡುತ್ತಿದೆ. ಅಲ್ಲದೆ, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಕೂಡ.

ಮಕ್ಕಳ ಭವಿಷ್ಯಕ್ಕೆ ಯಾವ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡೋದು ಬೆಸ್ಟ್? ಇಲ್ಲಿದೆ ಮಾಹಿತಿ

ಕ್ರಿಪ್ಟೋಕರೆನ್ಸಿ
ಹೂಡಿಕೆ ವಲಯದಲ್ಲಿ ಕ್ರಿಪ್ಟೋ ಕರೆನ್ಸಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಟ್ರೆಂಡ್ ಆಗಿದೆ. ಇದು ಬಿಟ್ ಕಾಯಿನ್ ಹಾಗೂ ಇಥೆರಿಯಂ ಡಿಜಿಟಲ್ ಕರೆನ್ಸಿಗಳಿಂದ ಪ್ರಭಾವಿಸಲ್ಪಟ್ಟಿದೆ ಕೂಡ. ಕ್ರಿಪ್ಟೋ ಕರೆನ್ಸಿ ಹೂಡಿಕೆಯಲ್ಲಿ ಸಾಕಷ್ಟು ಸವಾಲುಗಳಿದ್ರೂ ಹೂಡಿಕೆಗೆ ಅನೇಕ ಅವಕಾಶಗಳಿವೆ.ಹೀಗಾಗಿ ಇತ್ತೀಚಿನ ದಿನಗಳಲ್ಲಿ ಹೂಡಿಕೆ ಕ್ಷೇತ್ರದಲ್ಲಿ ಕ್ರಿಪ್ಟೋ ಕರೆನ್ಸಿ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. 

click me!