2,000 ರೂಪಾಯಿ ನೋಟಿನ ಕತೆ ಏನು? RBI ವಾರ್ಷಿಕ ವರದಿ ಬಿಡುಗಡೆ!

By Suvarna NewsFirst Published Aug 25, 2020, 7:51 PM IST
Highlights

2019-20ರ ವಾರ್ಷಿಕ ವರದಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ. ಈ ವರದಿಯಲ್ಲಿ ಡಿಮಾನಿಟೈಸೇಶನ್ ಬಳಿಕ ಬಿಡುಗಡೆಯಾದ 2,000 ರೂಪಾಯಿ ನೋಟಿನ ಕತೆಯನ್ನು ವಿವರಿಸಲಾಗಿದೆ. 

ನವದೆಹಲಿ(ಆ.25):  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವಾರ್ಷಿಕ ವರದಿ ಪ್ರಕಟಗೊಂಡಿದೆ. ಈ ವರದಿಯಲ್ಲಿ ಡಿಮಾನಿಟೈಸೇಶನ್ ಬಳಿಕ ಚಲಾವಣೆಗೆ ಬಂದ 2,000 ರೂಪಾಯಿ ನೋಟನ್ನು 2019-20ರಲ್ಲಿ ಪ್ರಿಂಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.  ವರ್ಷದಿಂದ ವರ್ಷಕ್ಕೆ 2,000 ರೂಪಾಯಿ ನೋಟು ಚಲಾವಣೆ ಪ್ರಮಾಣ ಕಡಿಮೆ ಮಾಡಲಾಗಿದೆ. ಜೊತೆಗೆ ಹೊಸ ನೋಟು ಪ್ರಿಂಟ್ ಮಾಡಿಲ್ಲ ಎಂದು RBI ಹೇಳಿದೆ.

"

ಜಿಎಸ್‌ಟಿ ತೆರಿಗೆ ದರ ಇಳಿಕೆ: 1.24 ಕೋಟಿ ತೆರಿಗೆದಾರರು ಸೇರ್ಪಡೆ!.

2018ರಲ್ಲಿ ಮಾರ್ಚ್ ಅಂತ್ಯಕ್ಕೆ 2,000 ನೋಟುಗಳ ಚಲಾವಣೆ 33,632 ಲಕ್ಷಕ್ಕೆ ಇಳಿದಿತ್ತು. ಇನ್ನು 2019ರ ಮಾರ್ಚ್ ಅಂತ್ಯದ ವೇಳೆಗೆ ಈ ಸಂಖ್ಯೆ 32,910ಕ್ಕೆ ಇಳಿದಿತ್ತು. ಮಾರ್ಚ್ 2020ರ ಅಂತ್ಯದ ವೇಳಗೆ 2,000 ರೂಪಾಯಿ ನೋಟುಗಳ ಚಲಾವಣೆ 27,398ಕ್ಕೆ ಇಳಿದಿದೆ ಎಂದು  RBI ತನ್ನ ವರದಿಯಲ್ಲಿ ಹೇಳಿದೆ.

ಫೋನ್‌ ಕರೆ ಮಾಡಿದ್ರೆ ಮನೆ ಬಾಗಿಲಿಗೇ ಎಟಿಎಂ: 20 ಸಾವಿರವರೆಗೆ ವಿತ್‌ಡ್ರಾ!

2020 ರ ಮಾರ್ಚ್ ಅಂತ್ಯದ ವೇಳೆಗೆ 2,000 ರೂಪಾಯಿ ಮುಖಬೆಲೆಯ ನೋಟುಗಳ ಪ್ರಮಾಣ ಶೇಕಡಾ 2.4 ರಷ್ಟಿದೆ. ಇದು 2019ರಲ್ಲಿ 3.3ರಷ್ಟಿತ್ತು. ಮೌಲ್ಯದ ದೃಷ್ಟಿಯಿಂದಲೂ, ಈ ಷೇರು 2020ರ ಮಾರ್ಚ್ ಅಂತ್ಯದ ವೇಳೆ ಶೇಕಡಾ 22,6ಕ್ಕೆ ಇಳಿದಿದೆ.  2019ರ ಅಂತ್ಯದ ವೇಳೆ 31.2 ಮತ್ತು 2018ರ ಮಾರ್ಚ್ ಅಂತ್ಯದ ವೇಳೆಗೆ 37.3 ಶೇಕಡ ಇತ್ತು.

2019-20ರಲ್ಲಿ ಹೊಸ 2,000 ನೋಟುಗಳ ಮುದ್ರಣ ಮಾಡಿಲ್ಲ, ಜೊತೆಗೆ ಪೂರೈಕೆಯನ್ನು ಮಾಡಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಆದರೆ 500 ಮತ್ತು 200ರ ನೋಟು ಚಲಾವಣೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದಿದೆ.

click me!