ಮೂಲ ತೆರಿಗೆದಾರರ ಸಂಖ್ಯೆ ಆರಂಭದಲ್ಲಿ ಇದ್ದ 65 ಲಕ್ಷದಿಂದ 1.24 ಕೋಟಿ ರು.ಗಳಿಗೆ ಏರಿಕೆ | ಜಿಎಸ್‌ಟಿ ತೆರಿಗೆ ದರ ಇಳಿಕೆ: 1.24 ಕೋಟಿ ತೆರಿಗೆದಾರರು ಸೇರ್ಪಡೆ|
ನವದೆಹಲಿ(ಆ.25): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ತೆರಿಗೆ ದರಗಳನ್ನು ಕಡಿತಗೊಳಿಸಿದ್ದರಿಂದ ಮೂಲ ತೆರಿಗೆದಾರರ ಸಂಖ್ಯೆ ಆರಂಭದಲ್ಲಿ ಇದ್ದ 65 ಲಕ್ಷದಿಂದ 1.24 ಕೋಟಿ ರು.ಗಳಿಗೆ ಏರಿಕೆ ಆಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜಿಎಸ್‌ಟಿ ಜಾರಿಗೊಳಿಸಲು ಕಾರಣಕರ್ತರಾದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೊದಲ ಪುಣ್ಯತಿಥಿಯ ಸ್ಮರಣಾರ್ಥ ಸರಣಿ ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ, ಜಿಎಸ್‌ಟಿ ಮಂಡಳಿ ತೆರಿಗೆ ದರಗಳನ್ನು ಹಂತ ಹಂತವಾಗಿ ಕಡಿಮೆ ಮಾಡುವ ಮೂಲಕ ಹೆಚ್ಚಿನ ಜನರನ್ನು ತೆರಿಗೆ ವ್ಯಾಪ್ತಿಗೆ ಸೇರಿಸಿಕೊಂಡಿದೆ.
ಇದನ್ನೂ ಓದಿ | ಕೊರೋನಾತಂಕ ನಡುವೆ ಹೀಗಿದೆ ಚಿನ್ನದ ದರ, ಈಗ ಖರೀದಿಸಿದ್ರೆ ಲಾಭ!...
ಅತ್ಯಧಿಕ ಶೇ.28ರಷ್ಟುತೆರಿಗೆ ದರವನ್ನು ಕೇವಲ ಐಷಾರಾಮಿ ವಸ್ತುಗಳ ಮೇಲೆ ಮಾತ್ರ ಉಳಿಸಿಕೊಳ್ಳಲಾಗಿದೆ. ಶೇ.28ರಷ್ಟುತೆರಿಗೆ ಇದ್ದ 230 ವಸ್ತುಗಳ ಪೈಕಿ 200 ವಸ್ತುಗಳನ್ನು ಕೆಳಗಿನ ಸ್ತರಕ್ಕೆ ಇಳಿಸಲಾಗಿದೆ. ವಸತಿ ವಲಯವನ್ನು ಶೇ.5ರ ತೆರಿಗೆ ದರಲ್ಲಿ ತರಲಾಗಿದೆ. ಕೈಗೆಟುಕುವ ಮನೆಗಳ ಮೇಲಿನ ತೆರಿಗೆಯನ್ನು ಶೇ.1ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!...