ಕೊರೋನೊತ್ತರ ಭಾರತದಲ್ಲಿ ಅಂಬಾನಿ-ಅದಾನಿ ಏಕಸ್ವಾಮ್ಯ?

By Suvarna NewsFirst Published Aug 25, 2020, 7:03 PM IST
Highlights

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಭಾರತದಲ್ಲಿ  ಹಲವು ಉದ್ಯಮಗಳು ನೆಲಕಚ್ಚಿದೆ. ಆದರೆ ಮುಖೇಷ್ ಅಂಬಾನಿ ಹಾಗೂ ಗೌತಮ ಅದಾನಿ ವ್ಯವಹಾರ ಹಾಗೂ ಆದಾಯ ದ್ವಿಗುಣಗೊಂಡಿದೆ. ಇದಕ್ಕೆ ಹಲವು ಕಾರಣಗಳೂ ಇದೆ. ಆದರೆ ಕೊರೋನೊತ್ತರ ಭಾರತದಲ್ಲಿ ಅಂಬಾನಿ ಹಾಗೂ ಅದಾನಿ ಸಾಮ್ರಾಜ್ಯ ಏಕಸ್ವಾಮ್ಯ ಸಾಧಿಸಲಿದೆ ಅನ್ನೋ  ಮಾತುಗಳು ಕೇಳಿ ಬರುತ್ತಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು(ಆ.25); ಎರಡು ವರ್ಷಗಳ ಹಿಂದೆ ಭಾರತದ ಸಣ್ಣ ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡವು ಯೋಜನೆಯೊಂದನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. ಆದರೆ ಜಾರಿಯಾಗಿರುವುದು ಭಾರತದ ವಿಮಾನ ನಿಲ್ದಾಣಗಳ ಖಾಸಗೀಕರಣ. ವಿಮಾ ನಿಲ್ದಾಣ ಖಾಸಗೀಕರಣದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಒಂದು ಹೆಸರು ಗುಜರಾತ್ ಉದ್ಯಮಿ ಗೌತಮ್ ಅದಾನಿ. 

ತಿರುವನಂತಪುರಂ ವಿಮಾನ ನಿಲ್ದಾಣ ಖಾಸಗೀಕರಣ: ಕೇಂದ್ರ ನಿರ್ಧಾರ ವಿರುದ್ಧ ಸಿಡಿದೆದ್ದ ಕೇರಳ ಸರ್ಕಾರ!...

ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣ ಖಾಸಗೀಕರಣ ಮಾಡಲಾಗಿದ್ದು ಗೌತಮ್ ಅದಾನಿ ಕಂಪನಿಗೆ ಗುತ್ತಿಗೆ ನೀಡಿದೆ. ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ಇಂದು ಒಂದು ಊದಾಹರಣೆ ಮಾತ್ರ. ಈಗಾಗಲೇ 6 ವಿಮಾನ ನಿಲ್ದಾಣಗಳು ಖಾಸಗೀಕರಣ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಖಾಸಗಿ ವ್ಯಕ್ತಿಗಳು ವಿಮಾನ ನಿಲ್ದಾಣವನ್ನು ನಿಯಂತ್ರಿಸುವು ಕೇಂದ್ರ ನಿರ್ಧಾರದಿಂದ ಭಾರತದಲ್ಲಿ ಅದಾನಿ ಗ್ರೂಪ್ ಏಕಸ್ವಾಮ್ಯ ಸಾಧಿಸುತ್ತಿದೆ ಅನ್ನೋ ಆರೋಪಗಳು ಇವೆ.

ಇನ್ನಷ್ಟು ವಿಮಾನ ನಿಲ್ದಾಣ ಖಾಸಗಿ ಸಂಸ್ಥೆಗೆ ವಹಿಸಲು ಕೇಂದ್ರ ಆಸಕ್ತಿ!

ಭಾರತದಲ್ಲಿ 8 ರಿಂದ 10 ವಿಮಾನ ನಿಲ್ದಾಣಗಳನ್ನು ಖಾಸಗಿ ವ್ಯಕ್ತಿಗಳು ನಿಯಂತ್ರಣ ಮಾಡುವು ಹಂತದಲ್ಲಿದ್ದಾರೆ. ಇನ್ನು 6 ವಿಮಾನ ನಿಲ್ದಾಣಗಳು ಸೇರಿಕೊಳ್ಳುತ್ತಿದೆ. ಇದು ಏರ್‌ಲೈನ್ಸ್ ಸೇರಿದಂತೆ ಅದರೊಂದಿಗೆ ವ್ಯವಹಾರ ನಡೆಸುತ್ತಿರುವ ಉದ್ಯಮಕ್ಕೆ ಸಿಹಿ ಸುದ್ದಿಯಲ್ಲ ಅನ್ನೋದು ಕೆಲವರ ಅಭಿಮತ.

ವಿದ್ಯುತ್, ಸೇರಿದಂತೆ ಹಲವು ಕ್ಷೇತ್ರದಲ್ಲಿ ಗೌತಮ್ ಅದಾನಿ ಗ್ರೂಪ್ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ ವೇಳೆ ಬಹುತೇಕ ಸಂಸ್ಥೆಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದ ಅದಾನಿ ಗ್ರೂಪ್ ಕೊರೋನೋತ್ತರ ಭಾರತದಲ್ಲಿ ಏಕಸ್ವಾಮ್ಯ ಪ್ರಭುತ್ವ ಸ್ಥಾಪಿಸಲಿದೆ. ಇನ್ನುಳಿದ ಎಲ್ಲಾ ಉದ್ಯಮಿಗಳು ಹಾಗೂ ಉದ್ಯಮಗಳು ನೆಲಕಚ್ಚಲಿದೆ ಅನ್ನೋದು ತಜ್ಞರ ಆತಂಕ.

ಇತ್ತೀಚಿನ ವರ್ಷಗಳಲ್ಲಿ ಅದಾನಿ ಗ್ರೂಪ್‌ಗೂ ಮೊದಲು ಭಾರತದಲ್ಲಿ ಸಂಚಲನ ಮೂಡಿಸಿದ ಪಟ್ಟಿಯಲ್ಲಿ ಅಂಬಾನಿ ಗ್ರೂಪ್ ಮೊದಲ ಸ್ಥಾನದಲ್ಲಿದೆ. ಮಖೇಶ್ ಅಂಬಾನಿ ನೇತೃತ್ವದ ಜಿಯೋ ಭಾರತದ ಟಿಲಿಕಾಂ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ದರದಲ್ಲಿ 4G ಸೇವೆ ನೀಡಿ, ಇತಿಹಾಸ ರಚಿಸಿದ ರಿಲಾಯನ್ಸ್ ಜಿಯೋ ಇದೀಗ ಭಾರತದಲ್ಲಿ ಬಹುತೇಕ ಉದ್ದಿಮೆ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸುತ್ತಿದೆ. 

ಟಿಲಿಕಾಂ ಕ್ಷೇತ್ರದಲ್ಲಿ ಇತರ ಸ್ಪರ್ಧಿಗಳನ್ನೇ ಮುಗಿಸುತ್ತಿರುವ ಜಿಯೋ, ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಬಂಡವಾಳ ಹೂಡಿಕೆ ದಾರರನ್ನು ಆಕರ್ಷಿಸಿ ಹೊಸ ಉದ್ದಿಮೆಯತ್ತ ತೆರೆದುಕೊಂಡಿದೆ. ಭಾರತದ ಹಳ್ಳಿ ಹಳ್ಳಿಗೂ, ಮಾಲ್, ಸ್ಟೋರ್‌ನಿಂದ ಹಿಡಿದು ಕಿರಾಣಿ ಅಂಗಡಿವರೆಗೂ ಅಂಬಾನಿ ಗ್ರೂಪ್ ಲಗ್ಗೆ ಇಡುತ್ತಿದೆ. ಕೊರೋನೋತ್ತರ ಭಾರತದ ಉದ್ಯಮ ಕ್ಷೇತ್ರದಲ್ಲಿ ಅಂಬಾನಿ ಹಾಗೂ ಅದಾನಿ ಎರಡೇ ಹೆಸರು ಉಳಿಯಲಿದೆ ಅನ್ನೋ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.

ಏಕಸ್ವಾಮ್ಯದಿಂದ ಭಾರತದಲ್ಲಿ ಇತರ ಎಲ್ಲಾ ಉದ್ದಿಮೆಗಳು, ಉದ್ಯಮಿಗಳು ನೆಲಕಚ್ಚಲಿದ್ದಾರೆ. ಸಣ್ಣ ಸಣ್ಣ ಉದ್ದಿಮೆಗಳು ಆರಂಭದಲ್ಲೇ ಮಕಾಡೆ ಮಲಗಲಿದೆ. ಇದು ಆತಂಕಕಾರಿ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಎಡವುತ್ತಿದೆಯಾ? ಇದು ಚರ್ಚಿತ ವಿಚಾರ. 

click me!