11 ಕೋಟಿಗಳ ಒಡೆಯನಾದ್ರೂ ಕಾಡ್ತಿದೆ ನಿವೃತ್ತಿಗೆ ಭಯ - 48 ವರ್ಷದ ವ್ಯಕ್ತಿ ಕಥೆ ವೈರಲ್

Published : Jul 09, 2026, 03:10 PM IST
Retirement

ಸಾರಾಂಶ

Social Media Viral News : 11 ಕೋಟಿ ಮೌಲ್ಯದ ಆಸ್ತಿ ಇದ್ರೂ ಮತ್ತೆ ನೌಕರಿ ಮಾಡ್ಬೇಕಾ? ನಿವೃತ್ತಿ ತೆಗೆದುಕೊಂಡು ಮನೆಯಲ್ಲಿರ್ಬಹುದಲ್ಲ? ಇಲ್ಲ ಅಂತಿರುವ ಈ ಟೆಕ್ಕಿ ಅಭಿಪ್ರಾಯ ಏನು?

ಉದ್ಯೋಗ ಸಿಗ್ತಿದ್ದಂತೆ ಕೋಟ್ಯಾಧಿಪತಿಯಾಗ್ಬೇಕು ಅಂತ ಪ್ರತಿಯೊಬ್ಬ ಬಯಸ್ತಾನೆ. ಕೋಟಿ ಹಣ ಖಾತೆ ಸೇರ್ತಿದ್ದಂತೆ ಈ ಟೆನ್ಷನ್ ಕೆಲ್ಸಕ್ಕೆ ಗುಡ್ ಬೈ ಹೇಳಿ ನಿವೃತ್ತಿ ಘೋಷಣೆ ಮಾಡ್ತೇನೆ ಅಂತ ಪ್ಲಾನ್ ಕೂಡ ಮಾಡಿರ್ತಾರೆ. ಆದ್ರೆ ಕೋಟಿ ಹಣ ಖಾತೆ ಸೇರಿದ್ಮೇಲೆ ಹೊಸ ಟೆನ್ಷನ್ ಶುರುವಾಗುತ್ತೆ. ಸಣ್ಣ ವಯಸ್ಸಿನಲ್ಲೇ ನಿವೃತ್ತಿ ಪಡೆಯೋದು ಸುಲಭವಲ್ಲ. ಅದಕ್ಕೆ 11 ಕೋಟಿ ಹಣವಿದ್ರೂ ನಿವೃತ್ತಿಗೆ ಭಯ ಪಡ್ತಿರುವ ಈ ವ್ಯಕ್ತಿ ಕಥೆ ಉತ್ತಮ ನಿದರ್ಶನ.

11 ಕೋಟಿ ಹಣವಿದ್ರೂ ನಿವೃತ್ತಿ ಭಯ 

48 ವರ್ಷ ವಯಸ್ಸಿನ ಟೆಕ್ ವೃತ್ತಿಪರರೊಬ್ಬರು ಕಠಿಣ ಪರಿಶ್ರಮ ಮತ್ತು ಬುದ್ಧಿವಂತ ಹೂಡಿಕೆಗಳ ಮೂಲಕ ಸುಮಾರು 11 ಕೋಟಿ ನಿವ್ವಳ ಮೌಲ್ಯ ಸಂಪಾದನೆ ಮಾಡಿದ್ದಾರೆ. ಇಷ್ಟು ಹಣವಿದ್ರೂ ಅವರಿಗೆ ಕೆಲಸ ಬಿಡಲು ಧೈರ್ಯ ಸಾಲ್ತಿಲ್ಲ. ಹಣದ ಕೊರತೆ ಅವ್ರ ಟೆನ್ಷನ್ ಅಲ್ವೇ ಅಲ್ಲ, ಭವಿಷ್ಯದ ಚಿಂತೆ ಅವರ ಭಯಕ್ಕೆ ಕಾರಣ.

55 ರೂ.ಯ Jio ಪ್ಲಾನ್‌ಗೆ ಏರ್‌ಟೆಲ್‌ನಿಂದ 15 ರೂ. ಪ್ಯಾಕ್; 168GB ಡೇಟಾ, 18 OTTಗೆ ಆಕ್ಸೆಸ್

ಸೋಶಿಯಲ್ ಮೀಡಿಯಾದಲ್ಲಿ ಅವರು ತಮ್ಮ ಕಥೆ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸ ಸಂಪೂರ್ಣವಾಗಿ ಸುರಕ್ಷಿತವಲ್ಲ. ಐಟಿ ಉದ್ಯಮದಲ್ಲಿ ಉದ್ಯೋಗಿಗಳ ವಜಾ ಹೆಚ್ಚಾಗ್ತಿದೆ. ಕಂಪನಿಗಳು ಇದ್ದಕ್ಕಿದ್ದಂತೆ ಉದ್ಯೋಗಿಗಳನ್ನು ಕೆಲ್ಸದಿಂದ ತೆಗೆಯುತ್ತಿವೆ. ಇಂಥ ಟೈಂನಲ್ಲಿ ಕೇವಲ ಹಣ ಸಾಲೋದಿಲ್ಲ. ನಿವೃತ್ತಿಗೆ ಮಾನಸಿಕವಾಗಿ ಸಿದ್ಧರಾಗಿರುವುದು ಸಹ ಮುಖ್ಯ ಅಂತ ಬರೆದುಕೊಂಡಿದ್ದಾರೆ. ಈ ವ್ಯಕ್ತಿ ವಾರ್ಷಿಕ ಸಂಬಳ ಸುಮಾರು 55 ಲಕ್ಷ ರೂಪಾಯಿ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಓದುತ್ತಿದ್ದಾರೆ. ಒಬ್ಬ11 ನೇ ತರಗತಿಯಲ್ಲಿ ಮತ್ತು ಇನ್ನೊಬ್ಬ 3 ನೇ ತರಗತಿ ವಿದ್ಯಾರ್ಥಿ. ಮಕ್ಕಳ ಶಿಕ್ಷಣ, ಕುಟುಂಬದ ಅಗತ್ಯತೆಗಳು ಮತ್ತು ಭವಿಷ್ಯದ ಜವಾಬ್ದಾರಿಗಳ ಒತ್ತಡ ಇದೆ. ಹಾಗಾಗಿ ನಿವೃತ್ತಿ ನಿರ್ಧಾರ ಸಾಧ್ಯವಿಲ್ಲ ಎಂದಿದ್ದಾರೆ.

ಕೋಟ್ಯಂತರ ಉದ್ಯೋಗಿಗಳಿಗೆ ಸಂತಸದ ಸುದ್ದಿ, ಜುಲೈ 15ಕ್ಕೆ ಅಕೌಂಟ್‌ಗೆ ಜಮೆ ಆಗಲಿದೆ 1.44 ಲಕ್ಷ ಕೋಟಿ PF ಬಡ್ಡಿ

ವಿವಿಧ ಸ್ಥಳದಲ್ಲಿ ಹೂಡಿಕೆ

ಅವರು ನೀಡಿರೋ ಮಾಹಿತಿ ಪ್ರಕಾರ, ಕೋಟ್ಯಾಧಿಪತಿ ತಮ್ಮ ಹಣವನ್ನು ವಿವಿಧ ಸ್ಥಳಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಸುಮಾರು 4.5 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಅವರು ಇಪಿಎಫ್ನಲ್ಲಿ ಸುಮಾರು 70 ಲಕ್ಷ ಠೇವಣಿ ಇಟ್ಟಿದ್ದಾರೆ. ಅವರು ಮ್ಯೂಚುವಲ್ ಫಂಡ್ಗಳಲ್ಲಿ ಸುಮಾರು 1.1 ಕೋಟಿ ಹೂಡಿಕೆ ಮಾಡಿದ್ದಾರೆ. ಅವರು ಸುಮಾರು 6.5 ಕೋಟಿ ಮೌಲ್ಯದ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಸಹ ಹೊಂದಿದ್ದಾರೆ. ಆದ್ರೆ ಸುಮಾರು 1.8 ಕೋಟಿ ಮೌಲ್ಯದ ಮನೆ ಸಾಲ ಬಾಕಿ ಇದೆ. ಇಷ್ಟು ಆಸ್ತಿ ಹೊಂದಿದ್ರೂ, ಆರ್ಥಿಕವಾಗಿ ಸ್ವತಂತ್ರರಾಗಿದ್ದರೂ, ಅವರು ಇನ್ನೂ ನಿವೃತ್ತಿಗೆ ಮಾನಸಿಕವಾಗಿ ಸಿದ್ಧವಾಗಿಲ್ಲ. ಉದ್ಯೋಗ ಕೇವಲ ಆದಾಯದ ಮೂಲವಲ್ಲ, ಅದು ದೈನಂದಿನ ಜೀವನಕ್ಕೆ ಉದ್ದೇಶವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾ ಕಮೆಂಟ್

ಸಾವಿರಾರು ಜನರು ಅವರ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ಹಣವಿದ್ದಿದ್ದರೆ ತಕ್ಷಣ ಕೆಲ್ಸ ಬಿಡ್ತಿದ್ದೆ ಅಂತ ಕೆಲವರು ಹೇಳಿದ್ರೆ ಮತ್ತೆ ಕೆಲವರು ಹೆಚ್ಚುತ್ತಿರುವ ಹಣದುಬ್ಬರ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚಗಳು ಮತ್ತು ಭವಿಷ್ಯದ ಬಗ್ಗೆ ಚಿಂತಿಸಿದ್ರೆ ಅವರ ನಿರ್ಧಾರ ತಪ್ಪಲ್ಲ ಎಂದಿದ್ದಾರೆ. ನಿವೃತ್ತಿ ಎಂದರೆ ಕೆಲಸ ಬಿಡುವುದು ಎಂದರ್ಥವಲ್ಲ. ಆರ್ಥಿಕವಾಗಿ ಸದೃಢವಾಗಿದ್ದರೂ ಕೆಲ್ಸ ಮಾಡಬಹುದು ಆದ್ರೆ ಒತ್ತಡದ ಕೆಲ್ಸವಾಗಿದ್ದರೆ ಅದನ್ನು ಬಿಟ್ಟು ಸ್ವಂತ ಕೆಲ್ಸ ಶುರು ಮಾಡ್ಬಹುದು ಅಂತ ಬಳೆಕದಾರರು ಸಲಹೆ ನೀಡಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

55 ರೂ.ಯ Jio ಪ್ಲಾನ್‌ಗೆ ಏರ್‌ಟೆಲ್‌ನಿಂದ 15 ರೂ. ಪ್ಯಾಕ್; 168GB ಡೇಟಾ, 18 OTTಗೆ ಆಕ್ಸೆಸ್
ಭಾರತದ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ನಮ್ಮ ಬೆಂಗಳೂರು ಅಲ್ಲ, ಮುಂಬೈ ಕೂಡಾ ಅಲ್ಲ..!