Credit Card Spend: ಅಕ್ಟೋಬರ್ ತಿಂಗಳಲ್ಲಿ 1 ಲಕ್ಷ ಕೋಟಿ ರೂಪಾಯಿ ದಾಖಲೆ ವ್ಯವಹಾರ!

By Suvarna News  |  First Published Dec 4, 2021, 10:38 AM IST

*ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ವ್ಯವಹಾರ 1 ಟ್ರಿಲಿಯನ್!
*ಸೆಪ್ಟೆಂಬರ್‌ಗಿಂತ ಶೇಕಡಾ 25 ಕ್ಕಿಂತ ಹೆಚ್ಚಿನ ಬೆಳವಣಿಗೆ
*ಆರ್ಥಿಕ ಚೇತರಿಕೆ ಬೆನ್ನಲ್ಲೇ  ವ್ಯವಹಾರದಲ್ಲಿ ಸಾಕಷ್ಟು ಅಭಿವೃದ್ಧಿ


ನವದೆಹಲಿ(ಡಿ. 04): ಕಳೆದ ಕೆಲವು ತಿಂಗಳುಗಳಲ್ಲಿ ಸಾಲು ಸಾಲು ಹಬ್ಬಗಳು  ಹಾಗೂ ಕೊರೋನಾ ಭೀತಿ (Corona Virus) ಕೊಂಚ ಕಡಿಮೆಯಾಗಿದ್ದ ಬೆನ್ನಲ್ಲೇ ವ್ಯಾಪಾರ ವಹಿವಾಟುಗಳಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ವ್ಯವಹಾರ (Credi Card Spend) 1 ಟ್ರಿಲಿಯನ್ ರೂಪಾಯಿಗಳನ್ನು (1 ಲಕ್ಷ ಕೋಟಿ ರೂಪಾಯಿ) ದಾಟಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಗುರುವಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ.

ಸೆಪ್ಟೆಂಬರ್‌ಗಿಂತ  ಅಕ್ಟೋಬರ್‌ನಲ್ಲಿನ ಕ್ರೆಡಿಟ್‌ ಕಾರ್ಡ್ ವ್ಯವಹಾರ ಶೇಕಡಾ 25 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ. ವರ್ಷದಿಂದ-ವರ್ಷದ ಆಧಾರದ ಮೇಲೆ, ಕ್ರೆಡಿಟ್ ಕಾರ್ಡ್ ವೆಚ್ಚಗಳು 56 ಪ್ರತಿಶತದಷ್ಟು ಏರಿಕೆ ಕಂಡಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಕ್ರೆಡಿಟ್ ಕಾರ್ಡ್ ಖರ್ಚು 64,891.96 ಕೋಟಿ ರೂ ಆಗಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ವ್ಯವಹಾರ 80,477.18 ಕೋಟಿ ರೂ.ಗಳಷ್ಟಿತ್ತು. ಹಿಂದಿನ ತಿಂಗಳು ಅಗಸ್ಟ್‌ನಲ್ಲಿ ಸುಮಾರು 77,981 ಕೋಟಿ ರೂ. ಗಳಷ್ಟಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ದಾಖಲಾದ ಖರ್ಚುಗಳು 2020 ರ ಜನವರಿ ಮತ್ತು ಫೆಬ್ರವರಿಯಲ್ಲಿ ಅಂದರೆ ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ಮೊದಲಿದ್ದ  ಮಟ್ಟಕ್ಕಿಂತ ಹೆಚ್ಚಿದೆ. 2020 ರ ಜನವರಿ ಹಾಗೂ ಫೆಬ್ರಯವರಿಯಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚಗಳು ಕ್ರಮವಾಗಿ 67,402.25 ಕೋಟಿ ಮತ್ತು 62,902.93 ಕೋಟಿ ರೂ. ನಷ್ಟಿತ್ತು.

Tap to resize

Latest Videos

undefined

National Pension Scheme : ಕೆಲಸ ಇರಲಿ, ಬಿಡಲಿ 60ರ ನಂತರದ ಚಿಂತೆ ಬಿಡಿ! ಇಲ್ಲಿ ಸಿಗಲಿದೆ ಪಿಂಚಣಿ

ಎಚ್‌ಡಿಎಫ್‌ಸಿ ಬ್ಯಾಂಕ್ (HDFC Babk)ದೇಶದಲ್ಲಿ ಕ್ರೆಡಿಟ್ ಕಾರ್ಡ್‌ಗಳ ಅತಿದೊಡ್ಡ ವಿತರಕವಾಗಿದ್ದು ಅಕ್ಟೋಬರ್‌ನಲ್ಲಿ 258,285 ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿದೆ.  ಐಸಿಐಸಿಐ  ಬ್ಯಾಂಕ್ (ICICI Bank) 278,189 ಕಾರ್ಡ್‌ಗಳನ್ನು ಆಕ್ಸಿಸ್ ಬ್ಯಾಂಕ್ (Axis Bank) 219,533 ಕಾರ್ಡ್‌ಗಳು ಮತ್ತು ಎಸ್‌ಬಿಐ (SBI) 183,960 ಕಾರ್ಡ್‌ಗಳು ವಿತರಿಸಿದೆ. 

ಆರ್ಥಿಕ ಚೇತರಿಕೆ ಬೆನ್ನಲ್ಲೇ  ವ್ಯವಹಾರ ಸಾಕಷ್ಟು ಅಭಿವೃದ್ಧಿ!

"ಕಳೆದ ಕೆಲವು ತಿಂಗಳುಗಳಲ್ಲಿ ಆರ್ಥಿಕ ಮರುಕಳಿಸುವಿಕೆಯಿಂದಾಗಿ ಕ್ರೆಡಿಟ್ ಕಾರ್ಡ್ ಖರ್ಚುಗಳಲ್ಲಿನ ವ್ಯವಹಾರ ಸಾಕಷ್ಟು ಅಭಿವೃದ್ಧಿ ಹೊಂದಿದೆ  ಅಲ್ಲದೆ  ಅಕ್ಟೋಬರ್ ಹಬ್ಬದ ತಿಂಗಳು (Festival Month ಹಾಗಾಗಿ ಅದು ಕ್ರೆಡಿಟ್ ಕಾರ್ಡ್ ವೆಚ್ಚದಲ್ಲಿ ಹೆಚ್ಚಿನ ಬೆಳವಣಿಗೆಗೆ ಅದೂ ಕಾರಣವಾಗಿರಬಹುದು ಎಂದು ಮ್ಯಾಕ್ವಾರಿ ಕ್ಯಾಪಿಟಲ್‌ನ (Macquarie Capital) ಸಹಾಯಕ ನಿರ್ದೇಶಕ ಸುರೇಶ್ ಗಣಪತಿ ಹೇಳಿದ್ದಾರೆ.

ATM Transactions: ಜ.1ರಿಂದ ಎಟಿಎಂ ಹಣ ವಿತ್ ಡ್ರಾ ಶುಲ್ಕ ಹೆಚ್ಚಳ

ಆನ್‌ಲೈನ್ ಖರ್ಚುಗಳ ಹೊರತಾಗಿ, ಭೌತಿಕ ಖರ್ಚು ಕೂಡ ಈ ಹಬ್ಬದ ಋತುವಿನಲ್ಲಿ ಹೆಚ್ಚಾಗಿದೆ.  ಕ್ರೆಡಿಟ್ ಕಾರ್ಡ್ ಮಾರುಕಟ್ಟೆ ಮತ್ತು ಡಿಜಿಟಲ್ ಪೇಮೆಂಟ್ ಬೆಳವಣಿಗೆಯ ವೇಗ ಗಮನಿಸಿದರೆ ಈ ಟ್ರೆಂಡ್‌ ಹೀಗೆ ಮುಂದುವರೆಯಲಿದೆ.  “ಚಿಲ್ಲರೆ ಸಾಲಗಳು ಬೆಳೆಯುತ್ತಿವೆ ಮತ್ತು ಕ್ರೆಡಿಟ್ ಕಾರ್ಡ್‌ಗಳ ವೆಚ್ಚವೂ ಹೆಚ್ಚುತ್ತಿದೆ. ಇದು ಸ್ಥಿರವಾದ ಏರಿಕೆಯಾಗಿದೆ, ಹಾಗಾಇ ಅಚ್ಚರಿ ಪಡಬೆಕಾಗಿಲ್ಲ ಎಂದು ಫೆಡರಲ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮ್ ಶ್ರೀನಿವಾಸನ್ ಹೇಳಿದ್ದಾರೆ.

ಭಾರತದಲ್ಲಿಎಟಿಎಂ ವಿತ್ ಡ್ರಾಕ್ಕಿಂತ ಮೊಬೈಲ್ ಪಾವತಿಯೇ ಹೆಚ್ಚು

ಭಾರತದಲ್ಲಿ ಕಳೆದ ವರ್ಷ ಮೊಬೈಲ್ ಪಾವತಿಗಳ (Mobile Payments) ಪ್ರಮಾಣ ಎಟಿಎಂನಲ್ಲಿ(ATM) ಹಣ ವಿತ್ ಡ್ರಾ (Withdraw) ಮಾಡಿದ್ದಕ್ಕಿಂತ ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಣಕಾಸು ತಂತ್ರಜ್ಞಾನ - ಫಿನ್ ಟೆಕ್((fintech) ) ಕುರಿತ ಚಿಂತನಾ ನಾಯಕತ್ವ ವೇದಿಕೆ - ಇನ್ಫಿನಿಟಿ ಫೋರಂ (InFinity Forum) ಅನ್ನು ವಿಡಿಯೋ ಕಾನ್ಫರೆನ್ಸ್ (Video Conference)ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,' ಕಳೆದ ವರ್ಷ ಆನ್ ಲೈನ್ ಪಾವತಿಗಳಲ್ಲಾದ ಬೆಳವಣಿಗೆಗಳನ್ನು ಶ್ಲಾಘಿಸಿದರು. ಅಲ್ಲದೆ, ಮೊಬೈಲ್ ಪಾವತಿಗಳು ಹೇಗೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ ಪ್ರಮಾಣವನ್ನು ಮೀರಿಸಿವೆ ಎಂಬುದನ್ನು ವಿವರಿಸಿದರು.

click me!