
ನವದೆಹಲಿ(ಫೆ.06): ಕೇಂದ್ರದ ಮಧ್ಯಂತರ ಬಜೆಟ್ ಮಂಡನೆ ಬಳಿಕ ಜನಸಾಮಾನ್ಯ ಕೊಂಚ ನಿರಾಳವಾಗಿದ್ದಾನೆ. ಯಾವುದೇ ರೀತಿಯ ಹೊಸ ತೆರಿಗೆ ಭಾರ ಇಲ್ಲದೇ, ತೆರಿಗೆ ಮಿತಿ ಹೆಚ್ಚಳ ಕಂಡು ಹಿರಿಹಿರಿ ಹಿಗ್ಗುತ್ತಿದ್ದಾನೆ.
ಈ ಮಧ್ಯೆ ಬಜೆಟ್ ಬಳಿಕ ತೈಲ ದರದಲ್ಲಿನ ಏರಿಳಿತ ಕೊಂಚ ಹತೋಟಿಗೆ ಬಂದಿದ್ದು, ದೈನಂದಿನ ಬದಲಾವಣೆಗಳ ಹೊರತಾಗಿಯೂ ಸ್ಥಿರತೆಯನ್ನು ಕಾಯ್ದುಕೊಂಡಿದೆ.
ಅದರಂತೆ, ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ..
ರಾಷ್ಟ್ರ ರಾಜಧಾನಿ ನವದೆಹಲಿ:
ಪೆಟ್ರೋಲ್ ದರ: 70.44 ರೂ.
ಡೀಸೆಲ್ ದರ: 65.51 ರೂ.
ವಾಣಿಜ್ಯ ರಾಜಧಾನಿ ಮುಂಬೈ:
ಪೆಟ್ರೋಲ್ ದರ: 76.08 ರೂ.
ಡೀಸೆಲ್ ದರ: 68.59 ರೂ.
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:
ಪೆಟ್ರೋಲ್ ದರ: 72.55 ರೂ.
ಡೀಸೆಲ್ ದರ: 67.29 ರೂ.
ತಮಿಳುನಾಡು ರಾಜಧಾನಿ ಚೆನ್ನೈ:
ಪೆಟ್ರೋಲ್ ದರ: 73.11 ರೂ.
ಡೀಸೆಲ್ ದರ: 69.20 ರೂ.
ರಾಜ್ಯ ರಾಜಧಾನಿ ಬೆಂಗಳೂರು:
ಪೆಟ್ರೋಲ್ ದರ: 72.76 ರೂ.
ಡೀಸೆಲ್ ದರ: 67.67 ರೂ.
ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 3850 ರೂ.ಗೆ ತಲುಪಿದೆ.
ಏರುತ್ತಿದೆ ಪೆಟ್ರೋಲ್ ದರ: ಮೋದಿ ಮರೆತರಾ ತಮ್ಮ ಪ್ರಾಮಿಸ್?
‘ಆಪರೇಶನ್ ಫ್ಯುಯಲ್’: ಅಯ್ಯೋ ಡೀಸೆಲ್, ಅಯ್ಯೋ ಪೆಟ್ರೋಲ್!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.