ದುಬಾರಿ ಕ್ಯಾನ್ಸರ್ ಔಷಧಿಗಳಿನ್ನು ಕೊಂಚ ಅಗ್ಗ - ರೋಗಿಗಳಿಗೆ ರಿಲೀಫ್‌

Kannadaprabha News   | Kannada Prabha
Published : Feb 02, 2026, 07:05 AM IST
  medicine

ಸಾರಾಂಶ

17 ಕ್ಯಾನ್ಸರ್ ಔಷಧಗಳ ಮೇಲಿನ ಕನಿಷ್ಠ ಸೀಮಾ ಸುಂಕವನ್ನು ತೆಗೆದು ಹಾಕಿರುವುದಾಗಿ ಹಣಕಾಸು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದರಿಂದಾಗಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ವಿದೇಶಿ ಔಷಧಗಳ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ತುಸು ರಿಲೀಫ್‌ ಸಿಕ್ಕಿದೆ.

17 ಕ್ಯಾನ್ಸರ್ ಔಷಧಗಳ ಮೇಲಿನ ಕನಿಷ್ಠ ಸೀಮಾ ಸುಂಕವನ್ನು ತೆಗೆದು ಹಾಕಿರುವುದಾಗಿ ಹಣಕಾಸು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದರಿಂದಾಗಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ವಿದೇಶಿ ಔಷಧಗಳ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ತುಸು ರಿಲೀಫ್‌ ಸಿಕ್ಕಿದೆ.

ವಿದೇಶದಿಂದ ಆಮದು ಮಾಡಿಕೊಳ್ಳಬೇಕು

ಮುಂದುವರಿದ ಹಾಗೂ ಸಂಕೀರ್ಣ ಚಿಕಿತ್ಸಾ ಘಟ್ಟದಲ್ಲಿ ದುಬಾರಿ ಕ್ಯಾನ್ಸರ್ ಔಷಧಗಳನ್ನು ಬಳಸಲಾಗುತ್ತದೆ. ಈ ಔಷಧಗಳು ಭಾರತದಲ್ಲಿ ಹೆಚ್ಚು ಉತ್ಪಾದನೆಯಾಗುವುದಿಲ್ಲ. ವಿದೇಶದಿಂದ ಆಮದು ಮಾಡಿಕೊಳ್ಳಬೇಕು. ಏಕೆಂದರೆ, ಅಂತಹ ಔಷಧಗಳು ತಯಾರಾಗುವುದು ಅಮರಿಕ ಹಾಗೂ ಯುರೋಪ್‌ನಂತಹ ದೇಶಗಳಲ್ಲಿ. ದುಬಾರಿ ಔಷಧದ ಮೇಲೆ ಸೀಮಾ ಸುಂಕ ಹೇರುವುದರಿಂದ ರೋಗಿಗಳಿಗೆ ಮತ್ತಷ್ಟು ಹೊರೆ ಆಗುತ್ತಿತ್ತು. ಸುಂಕ ಕಡಿತದಿಂದ ರೋಗಿಗಳಿಗೆ ಅನುಕೂಲವಾಗಲಿದೆ.

ಕೊನೆಯ ಹಂತದ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ  2ರಿಂದ 10 ಲಕ್ಷ

ಆಸ್ಪತ್ರೆಗಳ ಒಂದು ಅಂದಾಜಿನ ಪ್ರಕಾರ, ಕೊನೆಯ ಹಂತದ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕೆಲವು ಬಾರಿ ಚಿಕಿತ್ಸಾ ವೆಚ್ಚವೇ ತಿಂಗಳಿಗೆ 2ರಿಂದ 10 ಲಕ್ಷ ರು.ವರೆಗೂ ಆಗುತ್ತದೆ. ರೋಗಿಗಳ ಕುಟುಂಬದವರಿಗೆ ಔಷಧವನ್ನು ಪೂರೈಸುವುದೇ ದೊಡ್ಡ ಆರ್ಥಿಕ ಸವಾಲು ಆಗಿರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅಭಿವೃದ್ಧಿಯ ಪಯಣಕ್ಕೆ ವೇಗ ನೀಡಿದ ಬಜೆಟ್‌ ಎಂದ ಬಿ.ವೈ. ರಾಘವೇಂದ್ರ! ಕೇಂದ್ರ ಬಜೆಟ್ ಬಗ್ಗೆ ಶಿವಮೊಗ್ಗ ನಾಯಕರು, ಉದ್ಯಮಿಗಳು ಹೇಳಿದ್ದೇನು?
ವಿದೇಶಿ ಆಸ್ತಿ ಘೋಷಣೆಗೆ 6 ತಿಂಗಳು ಟೈಂ - ನೀವೇ ಬಹಿರಂಗಪಡಿಸಿ ದಂಡ ಕಟ್ಟಿ