
ನವದೆಹಲಿ (ಜ.31): ಹೆಚ್ಚುತ್ತಿರುವ ಲಾಭ ಮತ್ತು ಕುಸಿಯುತ್ತಿರುವ ಸಂಬಳದ ನಡುವಿನ ವ್ಯತ್ಯಾಸವು ಎಷ್ಟು ಸ್ಪಷ್ಟವಾಗಿತ್ತೆಂದರೆ, ಸರ್ಕಾರವು ಇನ್ನು ಮುಂದೆ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ದೇಶದ ನಿಗಮಗಳು ವೇತನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಅದರಲ್ಲೂ, ವಿಶೇಷವಾಗಿ ಸಮಾಜದ ಮಧ್ಯಮ ಮತ್ತು ಕಡಿಮೆ ಆದಾಯದ ಸ್ತರಗಳಲ್ಲಿ ಬಳಕೆ ತೀವ್ರವಾಗಿ ಕುಸಿದಿರುವ ಸಮಯದಲ್ಲಿ ಅವರು ಈ ಮನವಿ ಮಾಡಿದ್ದಾರೆ. 'ದೀರ್ಘಕಾಲದ ಚಿಂತನೆಯು ಉದ್ಯೋಗದಾತರು ಸುರಕ್ಷಿತ, ಸುಭದ್ರ ಮತ್ತು ತೃಪ್ತಿದಾಯಕ ಕೆಲಸದ ಸ್ಥಳವು ದೀರ್ಘಾವಧಿಯ ಉದ್ಯೋಗಿ ನೈತಿಕತೆ ಮತ್ತು ಉತ್ಪಾದಕತೆಗೆ ಪ್ರಮುಖವಾಗಿದೆ ಎಂದು ಅರಿತುಕೊಳ್ಳುವ ಅಗತ್ಯವಿದೆ" ಎಂದು ವಾರ್ಷಿಕ ಆರ್ಥಿಕ ಸಮೀಕ್ಷೆ 2025 ಹೇಳಿದೆ.
ಕೇಂದ್ರ ಬಜೆಟ್‌ಗೆ ಒಂದು ದಿನ ಮೊದಲು ಸಂಸತ್ತಿನಲ್ಲಿ ಮಂಡಿಸಲಾದ ವರದಿಯಲ್ಲಿ, ದೇಶದ ಕಾರ್ಪೋರೇಟ್ ಕಂಪನಿಗಳ ಲಾಭವು ಕಳೆದ 15 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಹೋಗಿದೆ. ಆದರೆ, ಉದ್ಯೋಗಿಗಳ ವೇತನದ ವಿಚಾರದಲ್ಲಿ ನಿಶ್ಚಲತೆ ಕಾಣುತ್ತಿದೆ ಎಂದು ಹೇಳಿದೆ. ಎಸ್‌ಬಿಐ ಮಾಡಿರುವ ರಿಸರ್ಚ್ ಪ್ರಕಾರ, 2004ರಲ್ಲಿ 4 ಸಾವಿರ ಲಿಸ್ಟೆಡ್ ಕಂಪನಿಗಳ ಸರಾಸರಿ ಉದ್ಯೋಗಿ ವೆಚ್ಚಗಳು ಶೇ. 13ರಷ್ಟು ಮಾತ್ರವೇ ಬೆಳೆದಿದ್ದರೆ, ತೆರಿಗೆ ನಂತರದ ಲಾಣವಿ ಶೇ. 31.7ರಷ್ಟು ಏರಿಕೆಯಾಗಿದೆ.
"ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಕಂಪನಿಗಳು ಸ್ಥಿರವಾದ EBITDA ಲಾಭವನ್ನು 22% ಸಾಧಿಸಿದ್ದರೂ, ವೇತನ ಬೆಳವಣಿಗೆಯು ಮಧ್ಯಮವಾಗಿದೆ. ಈ ಅಸಮಾನ ಬೆಳವಣಿಗೆಯ ಕಳವಳಗಳನ್ನು ಹುಟ್ಟುಹಾಕುತ್ತದೆ. ವೇತನ ನಿಶ್ಚಲತೆಯು, ವಿಶೇಷವಾಗಿ ಆರಂಭಿಕ ಹಂತದ ಐಟಿ ಹುದ್ದೆಗಳಲ್ಲಿ ಪ್ರಮುಖವಾಗಿ ಕಾಣುತ್ತಿದೆ" ಎಂದು ವರದಿ ತಿಳಿಸಿದೆ. ಇಬಿಐಟಿಡಿಎ ಎಂದರೆ, ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯಕ್ಕೆ ಮುಂಚಿನ ಗಳಿಕೆಯಾಗಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಸುರ್ಜಿತ್ ಭಲ್ಲಾ, "ಕ್ಯಾಶುವಲ್ ಕಾರ್ಮಿಕರ ನೈಜ ವೇತನದಲ್ಲಿ ಬಹಳ ಘನ ಬೆಳವಣಿಗೆ ಕಂಡುಬಂದಿದೆ, ಆದರೆ ಮೂಲತಃ ಮಧ್ಯಮ ವರ್ಗದ ಸಂಬಳ ಪಡೆಯುವ ಕಾರ್ಮಿಕರ ನೈಜ ವೇತನದಲ್ಲಿ ಬಹುತೇಕ ಶೂನ್ಯ ನೈಜ ಬೆಳವಣಿಗೆ ಕಂಡುಬಂದಿದೆ' ಎಂದಿದ್ದಾರೆ.
Economic Survey 2025: ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಬೆಲೆಯಲ್ಲಿ ಏರಿಕೆ ಎಂದ ಆರ್ಥಿಕ ಸಮೀಕ್ಷೆ!
ಕಾರ್ಪೊರೇಟ್ ಲಾಭಗಳು ಗಗನಕ್ಕೇರಿದ್ದರೂ, ಭಾರತದ ಗೃಹ ಬಜೆಟ್ ಅದರಲ್ಲೂ ಪ್ರಮುಖವಾಗಿ ಆರ್ಥಿಕತೆಯ ಏಣಿಯಲ್ಲಿ ಕೆಳಸ್ಥಾನದಲ್ಲಿರುವವರು ನಿಧಾನಗತಿಯ ಆದಾಯ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಂದ ಕುಗ್ಗಿದೆ. ಗ್ರಾಹಕ ವೆಚ್ಚದಲ್ಲಿನ ಕುಸಿತವು ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ಇತ್ತೀಚಿನ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು 5.4% ಕ್ಕೆ ಸೀಮಿತಗೊಳಿಸಿದೆ. ಖಾಸಗಿ ಬಳಕೆಯು ದೇಶದ ಆರ್ಥಿಕತೆಯ ಶೇ. 60 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ, ಇದು ಸರ್ಕಾರಕ್ಕೆ ತೀವ್ರ ಸವಾಲನ್ನು ಒಡ್ಡುತ್ತಿದೆ, ಏಕೆಂದರೆ ಸರ್ಕಾರವು ಈಗಾಗಲೇ ಮೂಲಸೌಕರ್ಯಗಳ ಮೇಲಿನ ಬಂಡವಾಳ ವೆಚ್ಚವನ್ನು ಕಡಿಮೆ ಮಾಡಿದೆ.
ನಾಳೆ ನಿರ್ಮಲಾ ಸತತ 8ನೇ ಬಜೆಟ್: ಮುಂಗಡಪತ್ರದಲ್ಲಿ ಏನಿರಲಿದೆ ಎಂಬ ಬಗ್ಗೆ ಕುತೂಹಲ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.