
ನವದೆಹಲಿ (ಜ.31): ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ 2025 ರ ಆರ್ಥಿಕ ಸಮೀಕ್ಷೆಯು 2025 ರಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ತಿಳಿಸಿದೆ. ವಿಶ್ವ ಬ್ಯಾಂಕಿನ ಅಕ್ಟೋಬರ್ 2024 ರ ಸರಕು ಮಾರುಕಟ್ಟೆಗಳ ಮುನ್ನೋಟವನ್ನು ಉಲ್ಲೇಖಿಸಿ, ಸಮೀಕ್ಷೆಯು ಸರಕುಗಳ ಬೆಲೆಗಳಲ್ಲಿ ಸಾಮಾನ್ಯ ಕುಸಿತ ಆಗಬಹುದು ಎಂದು ನಿರೀಕ್ಷೆ ಮಾಡಿದೆ. 2025 ರಲ್ಲಿ 5.1% ಮತ್ತು 2026 ರಲ್ಲಿ 1.7% ರಷ್ಟು ಇಳಿಕೆ ನಿರೀಕ್ಷಿಸಲಾಗಿದೆ. ಈ ಕುಸಿತಗಳು ಹೆಚ್ಚಾಗಿ ತೈಲ ಬೆಲೆಗಳು ಕುಸಿಯುವುದರಿಂದ ಉಂಟಾಗುತ್ತವೆ, ಹಾಗಿದ್ದರೂ, ನೈಸರ್ಗಿಕ ಅನಿಲ ಬೆಲೆಗಳು ಏರಿಕೆಯಾಗುವ ನಿರೀಕ್ಷೆಯಿದೆ ಮತ್ತು ಲೋಹಗಳು ಮತ್ತು ಕೃಷಿ ಕಚ್ಚಾ ವಸ್ತುಗಳು ಸ್ಥಿರತೆಯನ್ನು ಕಾಯ್ದುಕೊಳ್ಳುತ್ತವೆ ಎಂದು ಹೇಳಿದೆ.
ಲೋಹಗಳು ಮತ್ತು ಖನಿಜಗಳು, ವಿಶೇಷವಾಗಿ ಕಬ್ಬಿಣದ ಅದಿರು ಮತ್ತು ಸತುಗಳ ಬೆಲೆಯಲ್ಲಿ ಇಳಿಕೆಯಾಗುವ ಮುನ್ಸೂಚನೆಯನ್ನು ಸಮೀಕ್ಷೆಯು ನೀಡಿದೆ. "ಸಾಮಾನ್ಯವಾಗಿ, ಭಾರತ ಆಮದು ಮಾಡಿಕೊಳ್ಳುವ ಸರಕುಗಳ ಬೆಲೆಯಲ್ಲಿನ ಇಳಿಕೆಯ ಪ್ರವೃತ್ತಿಯು ದೇಶೀಯ ಹಣದುಬ್ಬರದ ಮುನ್ನೋಟಕ್ಕೆ ಸಕಾರಾತ್ಮಕವಾಗಿದೆ" ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಚಿನ್ನದ ಬೆಲೆಯಲ್ಲಿನ ಇಳಿಕೆ ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರಬಹುದು, ಆದರೆ ಬೆಳ್ಳಿ ಬೆಲೆಯಲ್ಲಿನ ನಿರೀಕ್ಷಿತ ಏರಿಕೆಯು ಬುಲಿಯನ್ ಮಾರುಕಟ್ಟೆಗೆ ಸ್ವಲ್ಪ ಸ್ಥಿರತೆಯನ್ನು ನೀಡುತ್ತದೆ ಎಂದು ಅದು ಗಮನಿಸಿದೆ.
Economic Survey 2025: ಏನಿದು ಆರ್ಥಿಕ ಸಮೀಕ್ಷೆ, ಬಜೆಟ್‌ಗೂ ಮುನ್ನ ದೇಶಕ್ಕೆ ಯಾಕೆ ಇದು ಮುಖ್ಯ!
ವಿದೇಶಿ ವಿನಿಮಯ ಮೀಸಲುಗಳಲ್ಲಿನ ಏರಿಳಿತಗಳು: ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಅನಿಶ್ಚಿತತೆಯೂ ಸಮೀಕ್ಷೆಯಲ್ಲಿ ಗಮನಸೆಳೆದಿದೆ, ಇದು ವಿದೇಶಿ ವಿನಿಮಯ ಮೀಸಲು ಸಂಯೋಜನೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಿದೆ. ಎರಡನೇ ಮಹಾಯುದ್ಧದ ನಂತರ ಚಿನ್ನದ ಗಟ್ಟಿಗಳ ಹಿಡುವಳಿಗಳು ಅತ್ಯುನ್ನತ ಮಟ್ಟಕ್ಕೆ ಏರಿವೆ, ಇದಕ್ಕೆ ಪ್ರಮುಖ ಕಾರಣ ಉದಯೋನ್ಮುಖ ಮಾರುಕಟ್ಟೆಗಳ ಕೇಂದ್ರ ಬ್ಯಾಂಕ್‌ಗಳು ಚಿನ್ನವನ್ನು ಸಂಗ್ರಹಿಸುತ್ತಿರುವುದು ಕಾರಣವಾಗಿದೆ. ಜಾಗತಿಕ ಬೆಲೆಗಳು ಏರಿಕೆ, ಹಬ್ಬದ ಪೂರ್ವ ಖರೀದಿಗಳು ಮತ್ತು ಸುರಕ್ಷಿತ ಸ್ವತ್ತುಗಳಿಗೆ ಬೇಡಿಕೆಯಿಂದಾಗಿ ಭಾರತದ ಚಿನ್ನದ ಆಮದು ಹೆಚ್ಚಾಗಿದೆ. ಈ ಅಂಶಗಳು ಮಾರುಕಟ್ಟೆ ಮತ್ತು ಭಾರತದ ವಿದೇಶಿ ವಿನಿಮಯ ಮೀಸಲು ಎರಡರ ಮೇಲೂ ಪ್ರಭಾವ ಬೀರಿವೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜಾಗತಿಕ ಮೀಸಲು ವ್ಯವಸ್ಥೆಯಲ್ಲಿ ಕ್ರಮೇಣ ಬದಲಾವಣೆಗಳನ್ನು ಗಮನಿಸಿದೆ, ಡಾಲರ್ ಪ್ರಾಬಲ್ಯದಿಂದ ದೂರ ಸರಿಯುವುದು ಮತ್ತು ಸಾಂಪ್ರದಾಯಿಕವಲ್ಲದ ಕರೆನ್ಸಿಗಳ ಪಾತ್ರದಲ್ಲಿ ಹೆಚ್ಚಳವಾಗಿದೆ.
Economic Survey 2023:ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ ಆರ್ಥಿಕ ಸಮೀಕ್ಷೆ; ಇಲ್ಲಿದೆ ನೋಡಿ ಹೈಲೈಟ್ಸ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.