ಕೊರೋನಾ ವೈರಸ್ ಇಡೀ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮುನ್ಸೂಚನೆ ನೀಡಿದೆ. ಇದಕ್ಕೆ ಭಾರತ ಕೂಡಾ ಹೊರತಾಗಿಲ್ಲ. ಭಾರತದ ಜಿಡಿಪಿ ಒಂದಕ್ಕಿಂತ ಕೆಳಗೆ ಕುಸಿಯುವ ಭೀತಿ ಎದುರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.24): ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಿಂದ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿರುವ ಪರಿಣಾಮ 2020-21ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ.1ಕ್ಕಿಂತಲೂ ಕೆಳಗೆ ಕುಸಿಯುವ ಆತಂಕ ಎದುರಾಗಿದೆ.
ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ದೇಶದ ಜಿಡಿಪಿ ದರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.0.9ರಿಂದ ಶೇ.1.5ರ ಅಂತರದಲ್ಲಿ ಇರಲಿದೆ. ನಿರಾಶಾದಾಯಕ ಬೆಳವಣಿಗೆಯಲ್ಲಿ ಜಿಡಿಪಿ ಶೇ.0.6ಕ್ಕೆ ಹಾಗೂ ಆಶಾದಾಯಕ ಬೆಳವಣಿಗೆಯಲ್ಲಿ ಜಿಡಿಪಿ ಶೇ.1.5ರಷ್ಟು ಪ್ರಗತಿ ದಾಖಲಿಸಬಹುದು ಎಂದು ಸಿಐಐ ಅಂದಾಜಿಸಿದೆ.
undefined
ಇದೇ ವೇಳೆ ಜಾಗತಿಕ ಮಟ್ಟದ ಪಿಚ್ ರೇಟಿಂಗ್ಸ್ ಕೂಡ ಭಾರತದ ಆರ್ಥಿಕ ಪ್ರಗತಿ ದರ 2020-21ನೇ ಹಣಕಾಸು ವರ್ಷದಲ್ಲಿ ಶೇ.0.8ಕ್ಕೆ ಕುಸಿಯಬಹುದು ಎಂದು ಅಂದಾಜಿಸಿದೆ. ಇದೇ ವೇಳೆ 2021 ಹಾಗೂ 22ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ.6.7ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಏಪ್ರಿಲ್‌ನಿಂದ ಜೂನ್ 40 ವರ್ಷದಲ್ಲಿ ಮೊದಲ ಬಾರಿ ದೇಶದ ಜಿಡಿಪಿ ಮೈನಸ್‌ಗೆ?
ಏಪ್ರಿಲ್‌ನಿಂದ ಜೂನ್ ಹಾಗೂ ಜುಲೈನಿಂದ ಸೆಪ್ಟೆಂಬರ್ ವರೆಗಿನ ಎರಡು ತ್ರೈಮಾಸಿಕ ಅವಧಿಯಲ್ಲಿ ಕ್ರಮವಾಗಿ -0.2 ಹಾಗೂ -0.1ರ ದರದಲ್ಲಿ ಜಿಡಿಪಿ ಪ್ರಗತಿ ಕಾಣಬಹುದು. ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ ಶೇ.1.4 ಹಾಗೂ ಜನವರಿಯಿಂದ ಮಾಚ್‌ರ್‍ವರೆಗಿನ ಕೊನೆಯ ತ್ರೈಮಾಸಿಕದಲ್ಲಿ ಶೇ.4.4ರ ದರದಲ್ಲಿ ಜಿಡಿಪಿ ಪ್ರಗತಿ ಆಗಲಿದೆ ಎಂದು ಪಿಚ್ ಏಜೆನ್ಸಿ ಅಂದಾಜಿಸಿದೆ.