ಅಕ್ಷಯ ತೃತೀಯ: ಚಿನ್ನ ಆನ್‌ಲೈನಲ್ಲೇ ಮಾರಾಟ!| ಜ್ಯುವೆಲರಿ ಅಂಗಡಿಗಳು ಬಂದ್; ಆನ್‌ಲೈನಲ್ಲಿ ಆಭರಣ ಖರೀದಿಸಿ| ಪ್ರಮುಖ ಚಿನ್ನಾಭರಣ ಮಳಿಗೆಗಳ ವೆಬ್‌ಸೈಟಲ್ಲಿ ಖರೀದಿಗೆ ಅವಕಾಶ| ಈಗ ಬುಕಿಂಗ್ ಮಾತ್ರ ಸಾಧ್ಯ; ಲಾಕ್‌ಡೌನ್ ಮುಗಿದ ಮೇಲೆ ಡೆಲಿವರಿ
ಬೆಂಗಳೂರು(ಏ.23): ಲಾಕ್‌ಡೌನ್ ನಡುವೆಯೂ ಈ ಬಾರಿಯ ಅಕ್ಷಯ ತೃತೀಯ ಆಚರಣೆಗೆ ಅಡಚಣೆಯಾಗದಂತೆ ಚಿನ್ನದ ಮಾರಾಟಗಾರರು ಮನೆ ಬಾಗಿಲಿಗೇ ಚಿನ್ನ ಮಾರಾಟ ಮಾಡಲು ಯೋಜನೆ ರೂಪಿಸಿದ್ದಾರೆ.
ಏ.26ರ ಭಾನುವಾರ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾಗಿದೆ. ಪ್ರತಿವರ್ಷ ಸಂಭ್ರಮದಿಂದ ಅಕ್ಷಯ ತೃತೀಯ ಆಚರಿಸುತ್ತಿದ್ದವರಿಗೆ ಈ ವರ್ಷ ಕೊರೋನಾ ವೈರಸ್‌ನ ಭೀತಿ ಕಾಡುತ್ತಿದೆ. ಮೇಲಾಗಿ ಎಲ್ಲಾ ಜ್ಯುವೆಲರಿ ಅಂಗಡಿಗಳೂ ಬಂದ್ ಆಗಿವೆ. ಹೀಗಾಗಿ ಚಿನ್ನ ಖರೀದಿಸುವುದು ಹೇಗೆ ಎಂಬ ಚಿಂತೆಯಲ್ಲಿ ಜನರಿದ್ದಾರೆ. ಅವರಿಗೆ ಜ್ಯುವೆಲರಿ ಮಾಲಿಕರು ಆನ್‌ಲೈನ್‌ನಲ್ಲಿ ಚಿನ್ನದ ಮಾರಾಟ ಆರಂಭಿಸಿದ್ದಾರೆ.
ಕರೀನಾಗೆ ಪಾಸ್ತಾ ಮಾಲೆ ಹಾಕಿದ ತುಂಟ ತೖಮೂರ್, ಬಾಲಿವುಡ್ ನಲ್ಲಿ ಮಕ್ಕಳ ಚಿಲಿಪಿಲಿ
ಗ್ರಾಹಕರು ತಮ್ಮಿಷ್ಟದ ಜ್ಯುವೆಲರಿ ಅಂಗಡಿಯ ವೆಬ್‌ಸೈಟ್‌ಗೆ ಹೋದರೆ ಅಲ್ಲಿ ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸುವ ಆಯ್ಕೆ ಸಿಗಲಿದೆ. ಆದರೆ, ಇದರಲ್ಲಿ ಗ್ರಾಹಕರು ಚಿನ್ನಾಭರಣಗಳ ಬುಕಿಂಗ್ ಮಾತ್ರ ಮಾಡಬಹುದು. ಲಾಕ್‌ಡೌನ್ ಮುಗಿದ ಮೇಲೆ ಆಭರಣವನ್ನು ಡೆಲಿವರಿ ಪಡೆಯಬೇಕು.
ಈಗಾಗಲೇ ಆನ್‌ಲೈನ್ ಮೂಲಕ ಚಿನ್ನಾಭರಣ ವ್ಯವಹಾರ ಆರಂಭಿಸಲಾಗಿದ್ದು, ಹಲವರು ಆನ್‌ಲೈನ್‌ನಲ್ಲಿ ಬುಕಿಂಗ್ ಶುರು ಮಾಡಿದ್ದಾರೆ. ಆನ್‌ಲೈನ್ ಮೂಲಕವೇ ಹಣ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಮೇಕಿಂಗ್ ಚಾಜ್‌ರ್‍ನಲ್ಲಿ ಶೇ.25ರಷ್ಟುರಿಯಾಯಿತಿಯನ್ನೂ ನೀಡಲಾಗುವುದು. ತಾವು ಖರೀದಿಸಿದ ಆಭರಣಗಳನ್ನು ಲಾಕ್‌ಡೌನ್ ಸಡಿಲವಾದ ನಂತರ ಗ್ರಾಹಕರು ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಆಭರಣ ಮಾಲಿಕರ ಸಂಘದ ಅಧ್ಯಕ್ಷ ಹಾಗೂ ಶ್ರೀ ಸಾಯಿ ಗೋಲ್ಡ… ಪ್ಯಾಲೇಸ್ ಮಾಲಿಕ ಟಿ.ಎ. ಶರವಣ ಮಾಹಿತಿ ನೀಡಿದ್ದಾರೆ.