ಜಿಯೋದಲ್ಲಿ ಫೇಸ್‌ಬುಕ್ 43000 ಕೋಟಿ ರು. ಹೂಡಿಕೆ| ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ಸಡ್ಡು ಹೊಡೆವ ಯತ್ನ
ನವದೆಹಲಿ(ಏ.23): ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ನಂ.1 ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿರುವ ರಿಲಯನ್ಸ್ ಜಿಯೋ ಮಾತೃಸಂಸ್ಥೆಯಾದ ಜಿಯೋ ಪ್ಲಾಟ್‌ಫಾಮ್ಸ್‌ರ್‍ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹೆಸರುವಾಸಿಯಾಗಿರುವ ಫೇಸ್‌ಬುಕ್ 43,574 ಕೋಟಿ ರು. (5.7 ಬಿಲಿಯನ್ ಡಾಲರ್) ಹೂಡುವುದಾಗಿ ಗುರುವಾರ ಪ್ರಕಟಿಸಿದೆ. ಇದಕ್ಕೆ ಪ್ರತಿಯಾಗಿ ಫೇಸ್‌ಬುಕ್ ಕಂಪನಿಗೆ ಜಿಯೋ ಪ್ಲಾಟ್‌ಫಾಮ್ಸ್‌ರ್‍ನ ಶೇ.9.9ರಷ್ಟುಷೇರುಗಳು ದೊರೆಯಲಿವೆ.
ಈ ಹೂಡಿಕೆಯಿಂದ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿ ಮೇಲಿರುವ ಸಾಲದ ಹೊರೆ ತಗ್ಗಲಿದೆ. ಜತೆಗೆ ಅಮೆಜಾನ್ ಹಾಗೂ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್‌ಗೆ ಸಡ್ಡು ಹೊಡೆದು ಬೃಹತ್ ಇ-ಕಾಮರ್ಸ್ ಕಂಪನಿ ಹುಟ್ಟುಹಾಕುವ ಕೆಲಸಕ್ಕೆ ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಬಳಸಿಕೊಳ್ಳುವ ಅವಕಾಶ ದೊರೆಯಲಿದೆ.
undefined
ಬೇರೆಯವರಿಗೆ ಜಿಯೋ ರೀಚಾರ್ಜ್ ಮಾಡಿ, ನೀವು ಗಳಿಸಿ ಕಮಿಷನ್!
ಈ ಒಪ್ಪಂದ ಭಾರತೀಯ ತಂತ್ರಜ್ಞಾನ ವಲಯದಲ್ಲಿ ನಡೆದಿರುವ ಅತಿದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ಇದರಿಂದ ರಿಲಯನ್ಸ್ ಜಿಯೋ ಪ್ಲಾಟ್‌ಫಾಮ್ಸ್‌ರ್‍ನಲ್ಲಿ ಫೇಸ್‌ಬುಕ್ ಅತಿದೊಡ್ಡ ಅಲ್ಪಸಂಖ್ಯಾತ ಷೇರುದಾರನಾಗಲಿದೆ. ಜಿಯೋ ಪ್ಲಾಟ್‌ಫಾಮ್ಸ್‌ರ್ ಕಂಪನಿಯ ನಿರ್ದೇಶಕ ಮಂಡಳಿಯಲ್ಲಿ ಸ್ಥಾನ ಪಡೆಯಲಿದೆ. ಅದೇ ಮಂಡಳಿಯಲ್ಲಿ ಮುಕೇಶ್ ಅಂಬಾನಿ ಅವರ ಅವಳಿ ಮಕ್ಕಳಾದ ಇಶಾ ಹಾಗೂ ಆಕಾಶ್ ಕೂಡ ಇರಲಿದ್ದಾರೆ.
ಜಿಯೋ ಹೆಸರಿನಲ್ಲಿರುವ ಹಲವು ಡಿಜಿಟಲ್ ಸೇವೆಗಳನ್ನು ಒಗ್ಗೂಡಿಸಿ ಜಿಯೋ ಪ್ಲಾಟ್‌ಫಾಮ್ಸ್‌ರ್ ಹೆಸರಿನ ಕಂಪನಿಯನ್ನು ಮುಕೇಶ್ ಕಳೆದ ವರ್ಷ ಹುಟ್ಟುಹಾಕಿದ್ದರು. ಜಿಯೋ 38.8 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ಫೇಸ್‌ಬುಕ್ ಭಾರತದಲ್ಲಿ 25 ಕೋಟಿ ಹಾಗೂ ವಾಟ್ಸ್‌ಆ್ಯಪ್ 40 ಕೋಟಿ ಬಳಕೆದಾರರನ್ನು ಹೊಂದಿವೆ.
ಕೊರೋನಾ ರೋಗಿಯಿಂದ ನೀವೆಷ್ಟು ಸೇಫ್? ಮಾಹಿತಿ ಕೊಡುತ್ತೆ ಕೇಂದ್ರದ ಹೊಸ ಆ್ಯಪ್
ಈ ಒಪ್ಪಂದದಿಂದ ಲಭಿಸುವ ಹಣದ ಪೈಕಿ 15 ಸಾವಿರ ಕೋಟಿ ರು. ಅನ್ನು ಜಿಯೋ ತನ್ನ ಬಳಿಯೇ ಇರಿಸಿಕೊಳ್ಳಲಿದೆ. ಮಿಕ್ಕ ಹಣವನ್ನು 40 ಸಾವಿರ ಕೋಟಿ ರು. ಸಾಲದ ಪೈಕಿ ಒಂದಷ್ಟನ್ನು ತೀರಿಸಲು ಬಳಸಿಕೊಳ್ಳಲಿದೆ.
ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗೆ ಪ್ರತಿಯಾಗಿ ಜಿಯೋ ಮಾರ್ಟ್ ಎಂಬ ಕಂಪನಿಯನ್ನು ರಚಿಸುವ ತವಕದಲ್ಲಿ ರಿಲಯನ್ಸ್ ಇದೆ. ಆ ಕಂಪನಿಯ ಮೂಲಕ ಸ್ಥಳೀಯ ದಿನಸಿ ಅಂಗಡಿಗಳಿಂದ ಗ್ರಾಹಕರ ಮನೆ ಬಾಗಿಲಿಗೆ ವಿವಿಧ ಪದಾರ್ಥಗಳನ್ನು ತಲುಪಿಸುವ ಉದ್ದೇಶ ಹೊಂದಿದೆ. ಆ ಕೆಲಸಕ್ಕೆ ವಾಟ್ಸ್‌ಆ್ಯಪ್ ಬಳಸಿಕೊಂಡು 3 ಕೋಟಿ ಕಿರಾಣಿ ಅಂಗಡಿ ಮಾಲೀಕರು ಡಿಜಿಟಲ್ ಮೂಲಕವಾಗಿ ಗ್ರಾಹಕರಿಗೆ ಸೇವೆ ನೀಡುವಂತೆ ಮಾಡುವ ಗುರಿಯನ್ನು ಇಟ್ಟುಕೊಂಡಿದೆ.