ಐಟಿ ದಾಳಿಗೆ ಬೇಸತ್ತು ಗುಂಡು ಹಾರಿಸಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮ**ತ್ಯೆ

Published : Jan 30, 2026, 05:41 PM ISTUpdated : Jan 30, 2026, 05:58 PM IST
Dr Roy cj

ಸಾರಾಂಶ

ಐಟಿ ದಾಳಿಗೆ ಬೇಸತ್ತು ಗುಂಡು ಹಾರಿಸಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮ**ತ್ಯೆ  ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಗದು ಬಹುಮಾನ ನೀಡುತ್ತಿದ್ದ ಸಿಜೆ ರಾಯ್ ದುರಂತ ಅಂತ್ಯಕಂಡಿದ್ದಾರೆ.

ಬೆಂಗಳೂರು (ಜ.30) ಬೆಂಗಳೂರಿನ ಉದ್ಯಮಿ, ದೇಶ ವಿದೇಶಗಳಲ್ಲಿ ಕಾನ್ಫಿಡೆಂಟ್ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಉದ್ಯಮಿ ಸಿಜೆ ರಾಯ್ ಆತ್ಮ**ತ್ಯೆ ಮಾಡಿಕೊಂಡಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಐಟಿ ದಾಳಿಗೆ ಬೆದರಿದ ಉದ್ಯಮ ಸಿಜೆ ರಾಯ್, ತಮ್ಮಲ್ಲಿದ್ದ ರಿವಾಲ್ವರ್ ಮೂಲಕ ಎದೆಗೆ ಗುಂಡು ಹಾರಿಸಿಕೊಂಡು ಆತ್ಮ**ತ್ಯೆ ಮಾಡಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿಗಳ ಮುಂದೆ ತಲೆಗೆ ಗುಂಡು ಹಾರಿಸಿ ಬುದುಕು ಅಂತ್ಯಗೊಳಿಸಿದ್ದಾರೆ.

ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಲ್ಯಾಂಡ್ ಫರ್ಡ್ ರಸ್ತೆಯಲ್ಲಿ ಘಟನ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಸೆಜೆ ರಾಯ್ ಮೇಲೆ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು. ಹೀಗಾಗಿ ಐಟಿ ಅಧಿಕಾರಿಗಲು ಇಂದು ಏಕಾಏಕಿ ದಾಳಿ ಮಾಡಿದ್ದರು. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಸಿಜೆ ರಾಯ್ ಏಕಾಏಕಿ ದುರಂತ ಅಂತ್ಯಕಂಡಿರುವುದು ಉದ್ಯಮ ವಲಯವನ್ನೇ ಬೆಚ್ಚಿ ಬೀಳಿಸಿದೆ.

ಇಂದು (ಜ.30) ಮಧ್ಯಾಹ್ನ ವೇಳೆ ಹೊಸೂರು ರಸ್ತೆಯ ಲ್ಯಾಂಗ್‌ಫೋರ್ಡ್‌ನಲ್ಲಿರುವ ಕಚೇರಿಗೆ ಸಿಜೆ ರಾಯ್ ಆಗಮಿಸಿದ್ದರು. ಐಟಿ ಅಧಿಕಾರಿಗಳು ಸುಮೂರು ಒಂದು ಗಂಟೆ ಕಾಲ ಸಿಜೆ ರಾಯ್ ವಿಚಾರಣೆ ನಡೆಸಿದ್ದರು. ಕಾನ್ಫಿಡೆಂಟ್ ಗ್ರೂಪ್ ಮೇಲೆ ಐಟಿ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಕಾನ್ಫಿಡೆಂಟ್ ಗ್ರೂಪ್ ಮೇಲೆ ಐಟಿ ದಾಳಿ ನಡೆದಿದೆ. ಹೀಗಾಗಿ ಈ ಬಾರಿ ದಾಳಿ ವೇಳೆ ಸಿಜೆ ರಾಯ್ ತಲೆಗೆ ಗುಂಡು ಹಾರಿಸಿ ದುರಂತ ಅಂತ್ಯಕಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೇರಳ ಮೂಲದ ಸಿಜೆ ರಾಯ್ ಬೆಳೆದಿದ್ದು ಉದ್ಯಮ ಆರಂಭಿಸಿದ್ದು ಬೆಂಗಳೂರಿನಲ್ಲಿ. ಫ್ರಾನ್ಸ್ ಹಾಗೂ ಸ್ವಿಟ್ಜರ್‌ಲೆಂಡ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಸಿಜೆ ರಾಯ್, ಬೆಂಗಳೂರಿನ ಸರ್ಜಾಪುರ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿ ಅತೀ ದೊಡ್ಡ ಹಾಗೂ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದರು. 50ಕ್ಕೂ ಹೆಚ್ಚು ಐಷಾರಾಮಿ ಕಾರು ಹೊಂದಿರುವ ಸಿಜೆ ರಾಯ್, ದುಬೈ ಸೇರಿದಂತೆ ವಿದೇಶಗಳಲ್ಲೂ ಆಸ್ತಿ ಹೊಂದಿದ್ದಾರೆ.

ಸಿಜೆ ರಾಯ್ ಆಸ್ತಿ

ಸಿಜೆ ರಾಯ್ ಒಟ್ಟು ಆಸ್ತಿ 1 ಬಿಲಿಯನ್ ಅಮೆರಿಕನ್ ಡಾಲರ್ ಎಂದು ವರದಿಯಾಗಿದೆ. 2025ರ ಫೋರ್ಬ್ಸ್ 100 ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸಿಜೆ ರಾಯ್ ಕೂಡ ಸ್ಥಾನ ಪಡೆದಿದ್ದಾರೆ. ದಕ್ಷಿಣ ಭಾರತದ ರಿಯಲ್ ಎಸ್ಟೇಟ್ ಉದ್ಯಮಿಾಗಿ ಸಿಜೆ ರಾಯ್ ಗುರುತಿಸಿಕೊಂಡಿದ್ದರು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಕಾನ್ಫಿಡೆಂಟ್ ಗ್ರೂಫ್‌ ಚೇರ್ಮನ್ ಸಿಜೆ ರಾಯ್ ಸಾವಿಗೆ ಶರಣು; ಟಿವಿ ಶೋ, ಸಿನಿಮಾ ನಿರ್ಮಾಣದಲ್ಲೂ ಸಕ್ರಿಯರಾಗಿದ್ರು!
ಚಿನ್ನ, ಬೆಳ್ಳಿಗಿಂತ ಹೆಚ್ಚಾಗಿ ಇದಕ್ಕೆ ಈಗ ಫುಲ್ ಡಿಮ್ಯಾಂಡ್; ಅದೇನು?