ಮೋದಿ ಸರ್ಕಾರ ರಚನೆಯಾದ ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್; LPG ಸಿಲಿಂಡರ್ ಬೆಲೆ ಇಳಿಕೆ

By Mahmad RafikFirst Published Jul 1, 2024, 10:57 AM IST
Highlights

ದೆಹಲಿ, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ 30 ರಿಂದ 31 ರೂ.ವರೆಗೆ ಬೆಲೆ ಇಳಿಕೆಯಾಗಿದೆ.

ನವದೆಹಲಿ: ಸತತ ಬೆಲೆ ಏರಿಕೆಯಿಂದ (Price Hike) ಹೈರಾಣು ಆಗಿರುವ ಜನತೆಗೆ ಗುಡ್‌ನ್ಯೂಸ್ ಸಿಕ್ಕಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ (LPG Cylinder Price) ಇಳಿಕೆಯಾಗಿದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿವೆ. ಮೋದಿ 3.O ಸರ್ಕಾರ (Modi Government)  ರಚನೆಯಾದ ಬಳಿಕ ಮೊದಲ ಬಾರಿಗೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆಯಾಗಿದೆ. ದೆಹಲಿ, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ 30 ರಿಂದ 31 ರೂ.ವರೆಗೆ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆಯಿಂದ ವಾಣಿಜ್ಯ ಸಿಲಿಂಡರ್ (Commercial LPG Cylinders) ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ.

19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ಮಾತ್ರ ಬೆಲೆ ಇಳಿಕೆ ಅನ್ವಯವಾಗಲಿದೆ. ದೇಶದ ರಾಜಧಾನಿ ದೆಹಲಿಯಲ್ಲಿ 1,676 ರೂ.ಗಳಿಂದ 1,646 ರೂಪಾಯಿ ಆಗಿದೆ. ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,589 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 1,809 ರೂ.ಗಳಿಂದ 1,756 ರೂಪಾಯಿಗೆ ಬಂದಿದೆ. ಇನ್ನುಳಿದಂತೆ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ ದಹೆಲಿ, ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಕ್ರಮವಾಗಿ 803 ರೂ., 829 ರೂ ಮತ್ತು 802.50 ರೂಪಾಯಿ ಆಗಿದೆ.

ಬೆಂಗಳೂರು: ಪದೆ ಪದೇ ಬುಕ್ಕಿಂಗ್ ಕ್ಯಾನ್ಸಲ್ ಮಾಡೋ ಈ ಕ್ಯಾಬ್ ಡ್ರೈವರ್ಸ್ ಗಳಿಕೆ ನೋಡಿ ನೆಟ್ಟಿಗರು ದಂಗು!

ಎರಡು ಬಾರಿ ಗೃಹ ಬಳಕೆ ಸಿಲಿಂಡರ್ ಬೆಲೆ ಇಳಿಕೆ

2023ರ ಜೂನ್‌ನಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ 1,103 ರೂಪಾಯಿಗಳ ಆಸುಪಾಸಿನಲ್ಲಿತ್ತು. 30ನೇ ಆಗಸ್ಟ್ 2023ರಂದು ಮೋದಿ ಸರ್ಕಾರ 200 ರೂಪಾಯಿಯಷ್ಟು ಇಳಿಕೆ ಮಾಡಲಾಗಿತ್ತು. ಮತ್ತೆ 2024 ಮಾರ್ಚ್‌ನಲ್ಲಿ 100 ರೂಪಾಯಿ ಇಳಿಕೆಯಾಗಿತ್ತು. 

ಬೆಂಗಳೂರಿನಲ್ಲಿ ಎಲ್‌ಪಿಜಿ ದರ 

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 31 ರೂಪಾಯಿ ಇಳಿಕೆಯಾಗಿದ್ದು, 1,724 ರೂ.ಗೆ ಒಂದು ಸಿಲಿಂಡರ್ ಸಿಗುತ್ತಿದೆ. 14.2 ಕೆಜಿಯ ಗೃಹ ಬಳಕೆ ಸಿಲಿಂಡರ್ ಬೆಲೆ 805.50 ರೂ. ಆಗಿದೆ. 5 ಕೆಜಿ ಹಾಗೂ 47.5 ಕೆಜಿ ಸಿಲಿಂಡರ್ ಬೆಲೆ ಕ್ರಮವಾಗಿ 300.50 ರೂಪಾಯಿ, 4,307.50 ರೂಪಾಯಿ ಆಗಿದೆ. 2024ರ ಫೆಬ್ರವರಿಯಲ್ಲಿ 14.2 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 905 ರೂಪಾಯಿ ಆಗಿತ್ತು. ಮಾರ್ಚ್‌ನಲ್ಲಿ 100 ರೂಪಾಯಿ ಇಳಿಕೆ ಮಾಡಲಾಗಿತ್ತು.

ದತ್ತಿಸಂಸ್ಥೆಗಳಿಗೆ ₹44000 ಕೋಟಿ ದಾನ: ದಾಖಲೆಯ ದೇಣಿಗೆ ನೀಡಿದ ವಾರನ್‌ ಬಫೆಟ್‌

click me!