ಹಿಂದಿನ ತೆರಿಗೆ ಬಾಕಿ ಇದ್ಯಾ? ಹಾಗಿದ್ರೆ ನಿಮ್ಮ ರೀಫಂಡ್‌ ತಡವಾಗೋದು ಖಚಿತ!

By Santosh Naik  |  First Published Aug 14, 2024, 4:24 PM IST

Reasons to delay in IT refund ಆದಾಯ ತೆರಿಗೆ ರೀಫಂಡ್‌ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಆದಾಯ ತೆರಿಗೆ ಇಲಾಖೆ ಕೆಲವರಿಗೆ ರೀಫಂಡ್‌ ನಿರಾಕರಿತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲಿಯೇ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಹಿಂದಿನ ಬಾಕಿ ಇದ್ದಲ್ಲಿ ರೀಫಂಡ್‌ ತಡವಾಗೋದು ಖಚಿತ ಎಂದಿದೆ.


ನವದೆಹಲಿ (ಆ.14): ಆದಾಯ ತೆರಿಗೆ ಇಲಾಖೆಯ ರೀಫಂಡ್‌ ಪ್ರಕ್ರಿಯೆ ಶುರುವಾಗಿದೆ. ಇದರ ನಡುವೆ ನ್ಯಾಯಸಮ್ಮತ ರೀಫಂಡ್‌ ನೀಡಲು ಆದಾಯ ತೆರಿಗೆ ಇಲಾಖೆ ನಿರಾಕರಣೆ ಮಾಡುತ್ತಿದೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಅದರ ನಡುವೆ ಇನ್ನೂ ರೀಫಂಡ್‌ ಪಡೆಯದ ವ್ಯಕ್ತಿಗಳಿಗೆ ಎಲ್ಲಿ ತಪ್ಪಾಗಿದ್ಯೋ ಎನ್ನುವ ಆತಂಕ ಶುರುವಾಗಿದೆ. ಕಳೆದ ವರ್ಷ ಕೂಡ ಇದೇ ರೀತಿಯ ಆಕ್ರೋಶ ಎದುರಾಗಿತ್ತು. ಹಲವು ವರ್ಷಗಳ ಹಿಂದಿನ ಬಾಕಿ ಬೇಡಿಕೆಗೆ ತೆರಿಗೆ ರೀಫಂಡ್‌ ಸರಿಹೊಂದಿರುವ ಮೂಲಕ ಅರ್ಹವಾಗಿ ಬರಬೇಕಿದ್ದ ಆದಾಯ ತೆರಿಗೆ ರೀಫಂಡ್‌ಅನ್ನು ನಿರಾಕರಣೆ ಮಾಡುತ್ತಿದೆ ಎಂದು ಆರೋಪವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ  ಆದಾಯ ತೆರಿಗೆ ಇಲಾಖೆ ಕಳೆದ ವರ್ಷಗಳ ತೆರಿಗೆ ಬಾಕಿಗೆ ಸಂಬಂಧಿಸಿ ನೀಡಿರುವ ನೋಟಿಸ್ ಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿತ್ತು. ತೆರಿಗೆದಾರರು ಹಿಂದಿನ ಬಾಕಿ ಇರುವ ಬಗ್ಗೆ ಒಂದೋ ಒಪ್ಪಿಕೊಳ್ಳಬೇಕು ಇಲ್ಲವೇ ನಿರಾಕರಿಸಬೇಕು. ಆದರೆ, ನೋಟಿಸ್‌ ಬಗ್ಗೆ ಉತ್ತರ ನೀಡುವುದು ಕಡ್ಡಾಯ ಎಂದು ತಿಳಿಸಿತ್ತು. ಇದರ ಬೆನ್ನಲ್ಲಿಯೇ ಹಿಂದಿನ ವರ್ಷಗಳಲ್ಲಿ ಇರುವ ಬೇಡಿಕೆಯನ್ನು ನೋಡಿಕೊಂಡು ಇದರ ಮಾಹಿತಿ ನೀಡಬೇಕು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ತೆರಿಗೆದಾರರ ಸ್ನೇಹಿ ಕ್ರಮ ಇದಾಗಿದ್ದು, ನೈರ್ಸಗಿಕ ನ್ಯಾಯದ ನೀತಿಗಳಿಗೆ ಅನುಗುಣವಾಗಿ ಈ ಅವಕಾಶ ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.

 ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 245(1) ಅಡಿಯಲ್ಲಿ ಹಾಲಿ ಇರುವ ಬೇಡಿಕೆಗೆ ರೀಫಂಡ್ ಹೊಂದಾಣಿಕೆ ಮಾಡುವ ಮುನ್ನ ಈ ಬಗ್ಗೆ ಸ್ಪಷ್ಟನೆ ನೀಡಲು ಅವಕಾಶ ನೀಡಲಾಗಿದೆ. ಈ ಅವಕಾಶ ಬಳಿಸಿಕೊಂಡು, ಬಾಕಿ ಇರುವ ಬೇಡಿಕೆಗಳನ್ನು ಹೊಂದಾಣಿಕೆ ಮಾಡಬೇಕು. ಆ ಮೂಲಕ ರೀಫಂಡ್ ಗಳನ್ನು ಸಮಯಕ್ಕೆ ಸರಿಯಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತೆರಿಗೆ ಇಲಾಖೆ ತಿಳಿಸಿದೆ. 

Latest Videos

undefined

ನೀವು ನಿಮ್ಮ ರಿಟರ್ನ್ಸ್ ಫೈಲ್ ಮಾಡಿದ ಬಳಿಕ ಆದಾಯ ತೆರಿಗೆ ಇಲಾಖೆ ನಿಮ್ಮ ತೆರಿಗೆ ಘೋಷಣೆಯನ್ನು ಪರಿಶೀಲಿಸುತ್ತದೆ. ಒಂದು ವೇಳೆ ಅದರಲ್ಲಿ ನಿಮ್ಮ ನೈಜ್ಯ ತೆರಿಗೆ ಜವಾಬ್ದಾರಿಗೆ ಯಾವುದೇ ಹೊಂದಾಣಿಕೆ ಕಂಡುಬಾರದಿದ್ದರೆ ಆಗ ನಿಮಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಜಾರಿ ಮಾಡುತ್ತದೆ. 

ತೆರಿಗೆ ಬೇಡಿಕೆಗೆ ಪ್ರತಿಕ್ರಿಯೆ ಹೇಗೆ ಸಲ್ಲಿಕೆ ಮಾಡುವುದು?
ಆದಾಯ ತೆರಿಗೆ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಬಾಕಿ ಉಳಿದಿರುವ ತೆರಿಗೆ ಬೇಡಿಕೆಗಳಿಗೆ ಸ್ಪಂದಿಸೋದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡಿದೆ.

* ಮೊದಲು  ತೆರಿಗೆದಾರರು ಆದಾಯ ತೆರಿಗೆ ಇಲಾಖೆ ಅಧಿಕೃತ  ಇ-ಫೈಲಿಂಗ್ ಪೋರ್ಟಲ್ https://www.incometax.gov.in/iec/foportal/ ಭೇಟಿ ನೀಡಬೇಕು.

*ಇ-ಫೈಲ್ ಮೆನು ಅಡಿಯಲ್ಲಿ ತೆರಿಗೆದಾರರು 'Response to Outstanding Demand'ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

*ಈ ಹಂತದಲ್ಲಿ ಸ್ಕ್ರೀನ್ ಮೇಲೆ ತೆರಿಗೆದಾರರಿಗೆ ಪ್ರತಿಕ್ರಿಯೆ ಆಯ್ಕೆಗಳ ಪಟ್ಟಿ ಕಾಣಿಸುತ್ತದೆ. ಅವರು ಈ ಕೆಳಗಿನ ಆಯ್ಕೆಗಳಿಂದ ಆಯ್ಕೆ ಮಾಡಬಹುದು.

ಎ) ಬೇಡಿಕೆ ಸರಿಯಾಗಿದೆ
ಬಿ) ಬೇಡಿಕೆ ಭಾಗಶಃ ಸರಿಯಾಗಿದೆ
ಸಿ) ಬೇಡಿಕೆಗೆ ಸಮ್ಮತಿ ಇಲ್ಲ
ಡಿ) ಬೇಡಿಕೆ ಸರಿಯಾಗಿಲ್ಲ ಆದರೆ ಹೊಂದಾಣಿಕೆಗೆ ಸಮ್ಮತಿಯಿದೆ.

'ಒಂದ್‌ ಪೈಸೆ ಟ್ಯಾಕ್ಸ್‌ ಕಟ್ಟದೆ ಇರೋ ಹಾಗೆ ಮಾಡ್ತಿದ್ದೆ, ಆದ್ರೆ ಭಾರತದ ಸವಾಲುಗಳೇ ಭಿನ್ನ..' ಎಂದ ನಿರ್ಮಲಾ ಸೀತಾರಾಮನ್‌!

ರಿಟರ್ನ್‌ ನೋಟಿಸ್‌ ಫೈಲ್‌ ಮಾಡಿ: ನೀವು ಯಾವ ಆಯ್ಕೆಯನ್ನು ತೆಗೆದುಕೊಳ್ಳುತ್ತೀರೋ, ಅದಕ್ಕೆ ಅನುಗುಣವಾಗಿ ಪೋರ್ಟ್‌ನಲ್ಲಿ ನೀಡಿರುವ ಸೂಚನೆ ಪಾಲಿಸಬೇಕು. ಹಾಗೇನಾದರೂ ತೆರಿಗೆದಾರರು 'ಬೇಡಿಕೆ ಸರಿಯಾಗಿದೆ' ಎಂದು ಆಯ್ಕೆ ಮಾಡಿದರೆ, ಆಗ ಅವರು ತಮ್ಮ ಆಯ್ಕೆ ದೃಢೀಕರಿಸಲು 'Submit'ಬಟನ್ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಪ್ರತಿಕ್ರಿಯೆ ಸಲ್ಲಿಕೆ ಪ್ರಕ್ರಿಯೆಯನ್ನು ಪೋರ್ಣಗೊಳಿಸಬೇಕು.

ITR Refund: ರೀಫಂಡ್‌ ಅಮೌಂಟ್‌ ಇನ್ನೂ ಬಂದಿಲ್ವಾ? ಹಾಗಿದ್ರೆ ಆದಾಯ ತೆರಿಗೆ ಇಲಾಖೆಯ ಈ 3 ನಿಯಮ ನೋಡಿ!

ಇನ್ನು ತೆರಿಗೆದಾರರು 'ಬೇಡಿಕೆ ಸರಿಯಾಗಿದೆ' ಎಂಬ ಆಯ್ಕೆ ಮಾಡಿದರೆ, ಆ ಬಳಿಕ ಬೇಡಿಕೆ ಜೊತೆಗೆ ಅಸಮ್ಮತಿ ಸೂಚಿಸಲು ಯಾವುದೇ ಆಯ್ಕೆ ಇರೋದಿಲ್ಲ. ಹಾಗೆಯೇ 'Pay Tax' ಆಯ್ಕೆ ಅಡಿಯಲ್ಲಿರುವ ಲಿಂಕ್ ಕ್ಲಿಕ್ ಮಾಡುವಾಗ ಮೂಲಕ ಬೇಡಿಕೆಯನ್ನು ಪಾವತಿಸಲು ಕೂಡ ಅವಕಾಶವಿದೆ.  
 

click me!