ಕಲ್ಪವೃಕ್ಷ ನೀಡಿದ ಕಲ್ಪರಸ, ಇದು ಕರಾವಳಿಯ ಕಾಮಧೇನು!

By Suvarna News  |  First Published Aug 9, 2023, 5:44 PM IST

ಅಮಲು ಮುಕ್ತ, ಸತ್ವ ಹಾಗೂ ಪೋಷಕಾಂಶಗಳಿಂದ ಕೂಡಿದ ಆರೋಗ್ಯವರ್ಧಕ ನೀರಾ ಇದೀಗ ಕರವಾಳಿ ರೈತರ ಕಾಮಧೇನುವಾಗಿದೆ. ಇದೀಗ ಇದೇ ಕಲ್ಪರಸ ಹೊಸ ರೂಪದಲ್ಲಿ, ಹೊಸ ಖಾದ್ಯಗಳ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಖನಿಜಾಂಶಗಳು, ಪ್ರೋಟೀನುಗಳು, ವಿಟಮಿನ್ನು ಹೊಂದಿರುವ ಈ ಕಲ್ಪರಸದ ಹೊಸ ಅಧ್ಯಾಯ ಇಲ್ಲಿದೆ.


ಉಡುಪಿ(ಆ.09) ತೆಂಗಿನ ಮರದ ಇನ್ನೂ ಅರಳದ ಹೊಂಬಾಳೆಯನ್ನು ಹದಗೊಳಿಸಿ, ಶೀಥಲೀಕೃತ ಪೆಟ್ಟಿಗೆಯ ಮೂಲಕ ಸಂಗ್ರಹಿಸುವ ನೈಸರ್ಗಿಕ ರಸವೇ ಕಲ್ಪರಸ, ಇದನ್ನು ಶುದ್ಧ ತಾಂತ್ರಿಕತೆಯಲ್ಲಿ ಸಂಗ್ರಹಿಸುವ ಕಾರಣ ಸತ್ವ ಹಾಗೂ ಪೋಷಕಾಂಶಗಳಿಂದ ಕೂಡಿದ ಆರೋಗ್ಯವರ್ಧಕ ರಸವಾಗಿದೆ. ಕಲ್ಪರಸ ಸಂಗ್ರಹ ಮತ್ತು ಮಾರಾಟವನ್ನು ಅತ್ಯುತ್ಯಮ ಮಾರುಕಟ್ಟೆಯಾಗಿ ಅಭಿವೃದ್ಧಿಗೊಳಿಸುವ ಹೊಸ ಪ್ರಯತ್ನ ಕರಾವಳಿಯಲ್ಲಿ ಯಶಸ್ವಿಯಾಗಿದೆ.

ಕಲ್ಪರಸವನ್ನು ಸಂಗ್ರಹಣೆಯಿಂದ ಸೇವನೆಯವರೆಗೆ 4 ಡಿಗ್ರಿ ಗಿಂತ ಕಡಿಮೆ ಉಷ್ಣಾಂಶದಲ್ಲಿ ಸಂಗ್ರಹಿಸಿಡಬೇಕಾಗುತ್ತದೆ. ಇದರಲ್ಲಿ ಹೇರಳವಾಗಿ ಖನಿಜಾಂಶಗಳು, ಪ್ರೋಟೀನುಗಳು, ವಿಟಮಿನ್ನುಗಳು ಇರುವುದರಿಂದ ಸೇವಿಸುವವರ ಆರೋಗ್ಯವನ್ನು ವೃದ್ಧಿಸುತ್ತದೆ. ಕಲ್ಪರಸದಲ್ಲಿರುವ ಗೈಸಮಿಕ್ ಇಂಡೆಕ್ಸ್ ಪ್ರಮಾಣ: 35% ಕ್ಕಿಂತ ಕಡಿಮೆಯಿರುವುದರಿಂದ ಮದುಮೇಹಿಗಳು ಸೇವಿಸಬಹುದಾಗಿದೆ. 

Tap to resize

Latest Videos

undefined

ಇದನ್ನು ನೀರಾ ಎಂದು ಆಡಳಿತ ಭಾಷೆಯಲ್ಲಿ ಕರೆಯಲಾಗುತ್ತದೆಯಾದರೂ ಇದು ಅಮಲು ಮುಕ್ತವಾಗಿದೆ. ಇದೊಂದು ಕಬ್ಬಿನ ಹಾಲಿನ ರೀತಿಯ ಸಿಹಿಯಾದ ಪಾನಿಯವಾಗಿದೆ. ಎಳನೀರಿನ ಹೋಲಿಕೆಯಲ್ಲಿ ಅನೇಕ ಪಟ್ಟು ಹೆಚ್ಚು ಪೋಷಕಾಂಶವನ್ನು ಹೊಂದಿರುವ ಪಾನೀಯವಾಗಿದೆ.

ಎಕ್ಸಿಬಿಷನ್‌ನಲ್ಲಿ ಮಾರಿದ ರೊಟ್ಟಿ ಬದುಕು ಬದಲಿಸಿತು: ಉದ್ಯಮಿಯಾಗಿ ಬದಲಾದ ಹಳ್ಳಿಹೈದನ ಕತೆ

ಈ ತಂತ್ರಜ್ಞಾನವನ್ನು ಸಿ.ಪಿ.ಸಿ.ಆರ್.ಐ. ಕಾಸರಗೋಡು ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಉಡುಪಿ ಕಲ್ಪರಸ ಕೋಕೊನಟ್ ಎಂಡ್ ಆಲ್ ಸೈಸಸ್ ಪ್ರೊಡ್ಯುಸರ್ ಕಂಪನಿ ಲಿಮಿಟೆಡ್' ಎಂಬ ಹೆಸರಿನ ರೈತ ಉತ್ಪಾದಕ ಕಂಪನಿಯು ಸಿ.ಪಿ.ಸಿ.ಆರ್.ಐ. ಕಾಸರಗೋಡಿನೊಂದಿಗೆ ತಾಂತ್ರಕತೆ ವರ್ಗಾವಣೆಗೆ ಶುಲ್ಕ ಪಾವತಿಸಿ, ಒಪ್ಪಂದ ಮಾಡಿಕೊಂಡು ತಾಂತ್ರಿಕತೆಯನ್ನು ಪಡೆದುಕೊಂಡಿದೆ. 

ಕಾನೂನಾತ್ಮಕವಾಗಿ ಅಬಕಾರಿ ಇಲಾಖೆಯಿಂದ ನೀರಾ ಸಂಗ್ರಹಣೆ, ಸಾಗಾಟ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರಾಟಕ್ಕೆ ಪರವಾನಿಗೆಯನ್ನು ಹೊಂದಿ, ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದಲ್ಲಿ ಕಂಪನಿಯ ಸಂಸ್ಕರಣಾ ಘಟಕವನ್ನೂ ಸ್ಥಾಪಿಸಿದೆ. ಇಲ್ಲಿ ಪ್ರಸ್ತುತ ಕಲ್ಪರಸ, ಕಲ್ಪರಸದ ಬೆಲ್ಲ, ಸಕ್ಕರೆ, ಜೋನಿಯನ್ನು ಉತ್ಪಾದಿಸಲಾಗುತ್ತಿದೆ. ಮುಂದೆ ಕಲ್ಪರಸದಿಂದ ಬಾರ್ ಚಾಕಲೇಟ್, ಐಸ್ ಕ್ರೀಂ, ವಿನೆಗರ್, ಮೊದಲಾದವುಗಳನ್ನು ತಯಾರಿಸುವ ಕಡೆಗೆ ಯೋಜನೆ ರೂಪಿಸಲಾಗುತ್ತಿದೆ.

ಕಂಪನಿಯ ಮೂಲ ಚಿಂತನೆ-
ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಆದಾಯವನ್ನು ಇಮ್ಮಡಿಗೊಳಿಸುವುದು ಹಾಗೂ ಹೈನುಗಾರಿಕೆಯ ರೀತಿಯಲ್ಲಿ ನಿರಂತರ ಆದಾಯ ಕೊಡುವಂತಹ ಯೋಜನೆ ರೂಪಿಸಿ, ತೆಂಗು ಬೆಳೆಗಾರರ ಆರ್ಥಿಕತೆಯನ್ನು ಹೆಚ್ಚಿಸುವುದಾಗಿದೆ. ಆ ಕಾರಣಕ್ಕೆ ಪ್ರತೀ ಶೇರುದಾರ ರೈತ ಕುಟುಂಬದ ಆಯ್ದ 8 ತೆಂಗಿನ ಮರಗಳಿಂದ ಕಲ್ಪರಸವನ್ನು ತೆಗೆದು, ವಾರ್ಷಿಕ ಎಂಬತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಆದಾಯ ಕೊಡಬೇಕೆನ್ನುವ ಯೋಜನೆ ರೂಪಿಸಲಾಗಿದೆ. ಜೊತೆ ಜೊತೆಗೆ ಕಲ್ಪರಸ ಟ್ಯಾಪಿಂಗ್ ಹೆಸರಿನಲ್ಲಿ ತಿಂಗಳಿಗೆ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಸಂಪಾದಿಸಬಹುದಾದ ಉದ್ಯೋಗವನ್ನು ಯೋಜಿಸಲಾಗಿದೆ. ಪ್ರತೀ ಗ್ರಾಮಕ್ಕೊಂದರಂತೆ ತೆಂಗು ಉತ್ಪಾದಕರ ಸೌಹಾರ್ದ ಸೋಸೈಟಿ ರಚಿಸಿ, ಆ ಮೂಲಕ ಗ್ರಾಮದ ಎಲ್ಲಾ ತೆಂಗು ಬೆಳೆಗಾರರ ತೋಟಗಳಿಂದ ಕಲ್ಪರಸ ಸಂಗ್ರಹಿಸಿ, ಕಂಪನಿಗೆ ನೀಡುವ ಮೂಲಕ ಗ್ರಾಮದ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಬೇಕೆಂಬ ಚಿಂತನೆ ಜಾರಿಯಲ್ಲಿದೆ.

ಇದೊಂದು ನೈಸರ್ಗೀಕವಾದ ಪಾನೀಯವಾಗಿರುವ ಕಾರಣ ಸೇವಿಸುವ ಗ್ರಾಹಕರಿಗೂ ಉತ್ತಮ ಆರೋಗ್ಯವನ್ನು ನೀಡುತ್ತದೆ. 17 ರೀತಿಯ ಅಮೈನೋ ಆಮ್ಲಗಳನ್ನು ಹೊಂದಿರುವುದರಿಂದ ದೇಹಕ್ಕೆ ಬೇಕಾದ ಹೆಚ್ಚಿನ ಪ್ರೋಟೀನ್ ಉತ್ಪಾದನೆಗೆ ಸಹಕಾರಿಯಾಗಿದೆ. ಹೇರಳ ಪ್ರಮಾಣದಲ್ಲಿ ವಿಟಾಮಿನ್ ಎ, ಬಿ ಕಾಂಪ್ಲೆಕ್ಸ್ ಹಾಗೂ ವಿಟಾಮಿನ್ ಸಿ ಹೊಂದಿರುವ ಏಕೈಕ ಪಾನೀಯವಾಗಿದೆ. ಖನಿಜಾಂಶಗಳು ಕೂಡ ಅತಿ ಹೆಚ್ಚು ಪ್ರಮಾಣದಲ್ಲಿರುವುದರಿಂದ ದೈಹಿಕ ಅವಶ್ಯಕತೆ ಹಾಗೂ ಕೊರತೆಗಳನ್ನು ನಿವಾರಿಸುತ್ತದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವುದರಿಂದ ಕಲ್ಪರಸವು ಕಣ್ಣಿಗೆ ಸಂಬಂಧಿಸಿದ ಖಾಯಿಲೆಗಳಾದ ಕ್ಯಾಟರಾಕ್ಟ್ ಮತ್ತು ಮಾಕ್ಯುಲರ್ ಡಿಜನರೇಶನ್ ಅನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದೆ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಎಂಟಿ ಬ್ಯಾಕ್ಟಿರಿಯಲ್(Anti bacterial) ಮತ್ತು ಎಂಟಿ ಆಕ್ಸಿಡೆಂಟ್‌ (Anti oxidant) ಅಂಶಗಳು ಹೇರಳವಾಗಿರುವುದರಿಂದ ಚರ್ಮದ ಸುಕ್ಕುಗಟ್ಟುವಿಕೆ, ಚರ್ಮದ ಮೇಲಿನ ಕಪ್ಪು ಕಲೆಗಳು, ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ವಾರೆ ವ್ಹಾ..ಇನ್ಮುಂದೆ ಡ್ರೋನ್‌ ಮೂಲಕ ಮನೆ ಬಾಗಿಲಿಗೆ ಬರಲಿದೆ ಪಿಜ್ಜಾ, ವಿಡಿಯೋ ವೈರಲ್

ಪೊಟ್ಯಾಶಿಯಂ ಹೇರಳವಾಗಿರುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗಲು ಸಹಕರಿಸುತ್ತದೆ. ರಕ್ತವನ್ನು ಶುದ್ಧಗೊಳಿಸುತ್ತದೆ ಹಾಗೂ ರಕ್ತಹೀನತೆಯನ್ನು ತಡೆಗಟ್ಟಲು ಕೂಡ ಸಹಕಾರಿಯಾಗಿದೆ. ಕಡಿಮೆ ಗ್ರೆಸಮಿಕ್ ಇಂಡೆಕ್ಸ್ ಹೊಂದಿರುವುದರಿಂದ ಕಾರ್ಬೋಹೈಡ್ರೆಟ್‌ಗಳು ನಿಧಾನ ಜೀರ್ಣವಾಗಿ, ದೇಹದಲ್ಲಿ ಹೀರಲ್ಪಟ್ಟು, ಕಡಿಮೆ ಪ್ರಮಾಣದಲ್ಲಿ ಹಾಗೂ ನಿಧಾನವಾಗಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಬಿಡುಗಡೆ ಮಾಡುವುದರಿಂದ ಮಧುಮೇಹಿಗಳು ಕುಡಿಯಬಹುದಾದ ಅತ್ಯುತ್ತಮ ಪೇಯ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಹೊಂದಿದೆ. ಕ್ಯಾನ್ಸರ್‌ನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಮಾನಸಿಕ ಖಿನ್ನತೆಯನ್ನು ದೂರ ಮಾಡಲು ಸಹಕಾರಿಯಾಗಿದೆ. ಮೈಗ್ರೇನ್ ತಲೆನೋವು ಹಾಗೂ ತಲೆಸುತ್ತುಗಳನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. 

ಲಿವರಿಗೆ ಸಂಬಂಧಿಸಿದ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಹೈ ಕೊಲೆಸ್ಟಾಲ್‌ನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮಹಿಳೆಯರಲ್ಲಿ ಕಂಡುಬರುವ ಪಾಲಿಸಿಸ್ಟಿಕ್ ಒವರಿಯನ್ ಸಿಂಡೋಮ್‌ನ್ನು ಕಡಿಮೆ ಮಾಡಿ ಸಂತಾನೋತ್ಪತ್ತಿಗೆ ಸಹಕಾರಿಯಾಗಲಿದೆ. ಮೂತ್ರಕೋಶದ ಆರೋಗ್ಯವನ್ನು ಕಾಪಾಡಿ, ಮೂತ್ರಕೋಶದ ಕಲ್ಲಿನ ಸಮಸ್ಯೆಯನ್ನು ತಡೆಗಟ್ಟುತ್ತದೆ. ಜೀರ್ಣಕ್ರೀಯೆ ಉತ್ತಮಗೊಳಿಸಲು ಹಾಗೂ ಮಲಬದ್ಧತೆ ಸಮಸ್ಯೆ ನಿವಾರಿಸಲು ಸಹಕಾರಿಯಾಗಿದೆ. ಅಸ್ತಮಾ, ಅಲರ್ಜಿ ಹಾಗೂ ಉಸಿರಾಟದ ಸಮಸ್ಯೆಯನ್ನು ಪರಿಹರಿಸುವ ಶಕ್ತಿಯನ್ನು ಹೊಂದಿದೆ. ದೇಹದಲ್ಲಿನ ವಿಷ ಪದಾರ್ಥಗಳನ್ನು ಹಾಗೂ ಯೂರಿಕ್ ಎಸಿಡ್‌ಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಮೂಳೆಗಳ ಆರೋಗ್ಯವನ್ನು ಉತ್ತಮಗೊಳಿಸುವುದಲ್ಲದೆ, ಆಸ್ಟಿಯೋ ಪೋರೋಸಿಸ್ ನಂತಹ ಕಾಯಿಲೆಗಳನ್ನು ತಡೆಗಟ್ಟುವ ಶಕ್ತಿ ಹೊಂದಿದೆ. ವಿಟಾಮಿನ್ ಸಿ ಹಾಗೂ ಎಂಟಿ ಆಕ್ಸಿಡೆಂಟ್ ಹೇರಳವಾಗಿರುವುದರಿಂದ ಜ್ವರ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಪೋಷಕಾಂಶಯುಕ್ತವಾಗಿರುವುದರಿಂದ ನರಗಳ ಹಾಗೂ ಸ್ನಾಯುಗಳ ಚಟುವಟಿಕೆಗಳನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ ಎಂಬ ಅಂಶಗಳು ಸಿ.ಪಿ.ಸಿ.ಆರ್.ಐ. ಕಾಸರಗೋಡಿನ ವಿಜ್ಞಾನಿಗಳು ನಡೆಸಿದ ಹಾಗೂ ಇನ್ನಿತರರು ನಡೆಸಿದ ಸಂಶೋಧನೆಗಳಿಂದ ವೈಜ್ಞಾನಿಕವಾಗಿ ದೃಢಪಟ್ಟಿದೆ.

click me!