2024ರ ಕರ್ನಾಟಕ ಬಜೆಟ್ ಮಂಡನೆಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಸಿಎಂ ಸಿದ್ದರಾಮಯ್ಯ!

By Sathish Kumar KH  |  First Published Feb 16, 2024, 9:41 AM IST

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೊದಲ ಪೂರ್ಣಕಾಲಿಕ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸೂಟ್‌ಕೇಸ್‌ ಬಿಟ್ಟು ಲಿಡ್ಕರ್ ಸಂಸ್ಥೆಯ ಲೆದರ್‌ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.


ಬೆಂಗಳೂರು (ಫೆ.16): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೊದಲ ಪೂರ್ಣಕಾಲಿಕ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸೂಟ್‌ಕೇಸ್‌ ಬಿಟ್ಟು ಲಿಡ್ಕರ್ ಸಂಸ್ಥೆಯ ಲೆದರ್‌ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಸಿದ್ದರಾಮಯ್ಯ ಅವರು ಈವರೆಗೆ ಬರೋಬ್ಬರಿ 14 ಬಜೆಟ್‌ಗಳನ್ನು ಮಂಡನೆ ಮಾಡಿದ ಖ್ಯಾತಿಯನ್ನು ಕರ್ನಾಟಕದಲ್ಲಿ ಹೊಂದಿದ್ದಾರೆ. ಆದರೆ, ಇವರು ಯಾವಾಗಲೂ ಬ್ರಿಟೀಷರ ಸಂಪ್ರದಾಯದಂತೆ ಸೂಟ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತಂದು ಅದನ್ನು ರಾಜ್ಯದ ಜನತೆಗೆ ತೋರಿಸಿ ಬಜೆಟ್ ಮಂಡನೆ ಮಾಡುತ್ತಿದ್ದರು. ಆದರೆ, ಈ ಬಾರಿ ಮೊದಲ ಬಾರಿಗೆ ತಮ್ಮ ಸಂಪ್ರದಾಯವನ್ನು ಬದಲಿಸಿಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಪೂರ್ಣಕಾಲಿಕ ಬಜೆಟ್ ಮಂಡನೆ ಮಾಡುತ್ತಿದ್ದು, ಈ ಬಾರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಅದೇನೆಂದರೆ, ಈ ಹಿಂದಿನ ಸಂಪ್ರದಾಯದಂತೆ ಸೂಟ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರದೇ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಸಂಸ್ಥೆಉ ಚರ್ಮದ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತುಂಬಿಕೊಂಡು ಬಂದು ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

Tap to resize

Latest Videos

undefined

ಸಾಲ-ಸುಳ್ಳು ಬಿಟ್ಟರೆ ಏನೂ ಇಲ್ಲ, ಸಿದ್ದು ಬಜೆಟ್‌ ಮಂಡನೆಗೂ ಮುನ್ನ ಕಾರ್ಟೂನ್‌ ಮೂಲಕ ಬಿಜೆಪಿ ಅಣಕು

ಬ್ರಿಟೀಷ್ ಆಡಳಿತದ ಕಾಲದಿಂದಲೂ ಇತ್ತೀಚಿನವರೆಗೆ ಸೂಟ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ತಂದು ಬಜೆಟ್ ಮಂಡಿಸುವ ಸಂಪ್ರದಾಯ ಪಾಲನೆ ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳೂ ಕೂಡ ಇದೇ ಸಂಪ್ರದಾಯ ಅನುಕರಿಸುತ್ತಿದ್ದವು. ಆದರೆ, ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರತಿಗಳನ್ನು ತರಲು ಸೂಟ್‌ಕೇಸ್ ಬದಲಾಗಿ ಬ್ಯಾಗ್ ಬಳಕೆ ಮಾಡಿದ್ದರು. ಆದರೆ, ಈ ಬಾರಿ 2024ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡನೆಗೆ ಟ್ಯಾಬ್ ಬಳಕೆ ಮಾಡಿದ್ದರು.

Karnataka Budget 2024: ಇಂದು ಸಿದ್ದು 15ನೇ ಬಜೆಟ್‌ ಮಂಡನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಪ್ರದಾಯ ಪಾಲನೆ ಮಾಡಿದ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ತಮ್ಮ ಬಜೆಟ್‌ನಲ್ಲಿ ಲೆದರ್ ಬ್ಯಾಗ್‌ ಅನ್ನು ಬಳಕೆ ಮಾಡಿದ್ದರು. ಅಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತಲೂ ಮುಂಚಿತವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಲೆದರ್ ಬ್ಯಾಗ್ ಬಳಕೆ ಮಾಡಿದ್ದರೂ ಮುನ್ನೆಲೆಗೆ ಬರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಡ್ಕರ್ ಸಂಸ್ಥೆಗೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದ್ದು, ನಟ ರಾಕ್ಷಸ ಖ್ಯಾತಿಯ ಡಾಲಿ ಧನಂಜಯ ಅವರು ಲಿಡ್ಕರ್ ಸಂಸ್ಥೆಗೆ ರಾಯಭಾರಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಲಿಡ್ಕರ್ ಸಂಸ್ಥೆಯ ಲೆದರ್ ಬ್ಯಾಗ್ ಬಳಕೆ ಮಾಡುತ್ತಿರುವುದರಿಂದ ಹೆಚ್ಚು ಮುನ್ನೆಲೆಗೆ ಬಂದಿದೆ. 

click me!