
ಗ್ರಾಹಕರಿಗೆ ನಿಜಕ್ಕೂ ಖುಷಿಕೊಡುವ ವಿಚಾರವೊಂದನ್ನು ಎಸ್‌ಬಿಐ ನೀಡಿದೆ. ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಇದು ನಿಮಗೆ ಬಿಗ್‌ನ್ಯೂಸ್. ಇದೀಗ ಎಸ್‌ಬಿಐ ತನ್ನ ಗ್ರಾಹಕರ ದೊಡ್ಡ ಮೊತ್ತದ ಖರೀದಿಗಳನ್ನು ಇಎಂಐ ಮೂಲಕ ಖರೀದಿಸುವ ಆಯ್ಕೆ ನೀಡಿದೆ.
ತಿಂಗಳ ಕಂತು ಅತ್ಯಂತ ಕಡಿಮೆ ಮೊತ್ತಕ್ಕೆ ನಿಗದಿ ಮಾಡಿದ್ದು, ಇಎಂಐ ಅವಧಿಯನ್ನು ನೀಡಲಾಗಿದೆ. ತಮ್ಮ ಖರೀದಿಯನ್ನು ಸುಲಭ ತಿಂಗಳ ಕಂತಾಗಿ ಪರಿವರ್ತಿಸುವ ಮೂಲಕ 100% ಶುಲ್ಕ ಸಂಸ್ಕರಣಾ ಮನ್ನಾವನ್ನು ಸಹ ಪಡೆಯಬಹುದು.
ಜೀರೋ ಬ್ಯಾಲೆನ್ಸ್ ಅಕೌಂಟ್‌ನಿಂದ 5 ವರ್ಷದಲ್ಲಿ 300 ಕೋಟಿ ಗಳಿಸಿದ SBI!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸೇವೆಯನ್ನು ಫ್ಲೆಕ್ಸಿಪೇ ಎಂದು ನೀಡುತ್ತಿದೆ. ಈ ಆಫರ್ ಮೇ 9, 2021 ರವರೆಗೆ ಮಾನ್ಯವಾಗಿರುತ್ತದೆ.. ಟ್ವಿಟರ್ ಪೋಸ್ಟ್‌ನಲ್ಲಿ ಎಸ್‌ಬಿಐ, ಫ್ಲೆಕ್ಸಿಪೇ ನಿಮ್ಮ ದೊಡ್ಡ ಖರೀದಿಗಳನ್ನು ಸುಲಭ ಕಂತುಗಳಾಗಿ ಪರಿವರ್ತಿಸುತ್ತದೆ. ಈಗ ಕಡಿಮೆ ಬಡ್ಡಿ ದರಗಳು ಮತ್ತು 100% ಶುಲ್ಕ ಸಂಸ್ಕರಣಾ ಮನ್ನಾ ಲಭ್ಯವಿದೆ. 9 ಮೇ 21 ರವರೆಗೆ ಈ ಆಫರ್ ಲಭ್ಯವಿದೆ ಎಂದು ಹೇಳಿದೆ.
ಫ್ಲೆಕ್ಸಿಪೇ ಇಎಂಐಗಳೊಂದಿಗೆ, ಎಸ್‌ಬಿಐ ತನ್ನ ಗ್ರಾಹಕರನ್ನು ತಮ್ಮ ದೊಡ್ಡ ಖರೀದಿಗಳಿಗಾಗಿ ಕಡಿಮೆ ಮಾಸಿಕ ಕಂತು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಎಸ್‌ಬಿಐ ಗ್ರಾಹಕರಿಗೆ ವಹಿವಾಟಿನ 30 ದಿನಗಳಲ್ಲಿ ತಮ್ಮ ದೊಡ್ಡ ಖರೀದಿಗಳನ್ನು ಫ್ಲೆಕ್ಸಿಪೇ ಆಗಿ ಪರಿವರ್ತಿಸುವ ಆಯ್ಕೆಯನ್ನು ನೀಡಲಾಗುತ್ತದೆ.
SBI ಫಿಕ್ಸೆಡ್ ಡೆಪಾಸಿಟ್ vs ಪೋಸ್ಟ್ ಆಫೀಸ್ ಡೆಪಾಸಿಟ್; ಯಾವುದರಲ್ಲಿದೆ ಗರಿಷ್ಠ ಬಡ್ಡಿ?
500 ರೂ.ಗಿಂತ ಹೆಚ್ಚಿನ ಯಾವುದೇ ವಹಿವಾಟನ್ನು ಫ್ಲೆಕ್ಸಿಪೇ ಆಗಿ ಪರಿವರ್ತಿಸಬಹುದು. ಕನಿಷ್ಠ ಬುಕಿಂಗ್ ಮೊತ್ತವು 2500 ರೂಪಾಯಿಗಳಾಗಿರುತ್ತದೆ. ಅಲ್ಲದೆ, ಎಸ್‌ಬಿಐ ಗ್ರಾಹಕರು ಇದನ್ನು 6, 9, 12 ಮತ್ತು 24 ತಿಂಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದು.
ಫ್ಲೆಕ್ಸಿಪೇ ಹೇಗೆ ಕಾರ್ಯನಿರ್ವಹಿಸುತ್ತದೆ ?
ಎಸ್‌ಬಿಐ ಗ್ರಾಹಕರು 1000 ರೂ ಖರೀದಿಗೆ ಆರು ತಿಂಗಳ ಅವಧಿಯ ಆಯ್ಕೆಗೆ ಮಾಸಿಕ ಕಂತಿನಂತೆ ಕೇವಲ 177.5 ರೂ, 12 ತಿಂಗಳ ಆಯ್ಕೆಗೆ 93.5 ರೂ. ಮತ್ತು 1000 ರೂ.ಗೆ 24 ತಿಂಗಳ ಆಯ್ಕೆಗೆ ಕೇವಲ 51.9 ರೂ. ಪಾವತಿಸಿದರೆ ಸಾಕು.
ಫ್ಲೆಕ್ಸಿಪೇ ಸೇವೆಯನ್ನು ಬಳಸುವುದಕ್ಕಾಗಿ, ಎಸ್‌ಬಿಐ ಗ್ರಾಹಕರು ತಮ್ಮ ಎಸ್‌ಬಿಐ ಕಾರ್ಡ್ ಆನ್‌ಲೈನ್ ಖಾತೆಗೆ ಲಾಗ್ ಇನ್ ಆಗಬೇಕು. ಅಥವಾ ಎಸ್‌ಪಿ ಎಫ್‌ಪಿ 56767 ಗೆ ಅಥವಾ 39 02 02 ಅಥವಾ 1860 180 1290 ಗೆ ಕರೆ ಮಾಡಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.