ಸಿಗರೇಟ್ ಬೆಲೆ ಗಗನಕ್ಕೆ: ಸೇದೋದು ಯಾವ ಪುರುಷಾರ್ಥಕ್ಕೆ?

By Web DeskFirst Published Aug 20, 2018, 4:17 PM IST
Highlights

ಸಿಗರೇಟ್ ಬೆಲೆಯಲ್ಲಿ ಭಾರೀ ಏರಿಕೆ! ಅಮೆರಿಕದಲ್ಲಿ ಹೆಚ್ಚಾದ ಸಿಗರೇಟ್ ಬೆಲೆ! ಜಾಗತಿಕ ಮಾರುಕಟ್ಟೆ ಮೇಲೂ ಪರಿಣಾಮ?! ಸಿಗರೇಟ್ ಸೇವನೆ ತ್ಯಜಿಸಿದವರ ಸಂಖ್ಯೆಯಲ್ಲೂ ಏರಿಕೆ! ಸಿಗರೇಟ್ ಬೆಲೆ ಹೆಚ್ಚಿರುವ ದೇಶ ಆಸ್ಟ್ರೆಲೀಯಾ 

ಧಮ್ ಹೊಡೆಯೊಕ್ಕೂ ಧಮ್ ಬೇಕು. ತುಂಬಾ ಟೆನ್ಶನ್ ಆದ್ರೂ ಧಮ್ ಬೇಕು, ತುಂಬಾ ರಿಲ್ಯಾಕ್ಸ್ ಮೂಡ್ ನಲ್ಲಿದ್ರೂ ಧಮ್ ಬೇಕು. ಒಟ್ನಲ್ಲಿ ಧಮ್ ಹೊಡೆಯೋಕೆ ಒಂದು ನೆವ ಬೇಕು.

ಆದರೆ ಜಾಗತಿಕವಾಗಿ ಸಿಗರೇಟ್ ಬೆಲೆ ಮಾತ್ರ ಗಗನಕ್ಕೆ ಏರುತ್ತಿದ್ದು, ಇದರ ಬಿಸಿ ಮಾತ್ರ ಇದುವರೆಗೂ ಯಾರನ್ನೂ ತಟ್ಟಿಲ್ಲ ಎಂಬುದೇ ವಿಶೇಷ. ಹೊಸ ವರದಿಯೊಂದರ ಪ್ರಕಾರ ಅಮೆರಿಕದಲ್ಲಿ ಸಿಗರೇಟ್ ಬೆಲೆಗಳು ಗಗನಕ್ಕೇರಿದ್ದು, ಒಂದು ಪ್ಯಾಕ್ ಸಿಗರೇಟ್ ಬೆಲೆ 10 ಯುಎಸ್ ಡಾಲರ್ ನಿಂದ 13 ಯುಎಸ್ ಡಾಲರ್ ಗೆ ಏರಿಕೆಯಾಗಿದೆ.

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಾದ ಕಾರಣ ಅಮೆರಿಕದಲ್ಲಿ ಸಿಗರೇಟ್ ಬೆಲೆ ಹೆಚ್ಚಾಗಿದ್ದು, ಇದು ಜಾಗತಿಕ ಮಾರುಕಟ್ಟೆ ಮೇಲೂ ಪರಿಣಾಮ ಬೀರಬಹುದು ಎಂದು ಊಹಿಸಲಾಗಿದೆ.

ಇಷ್ಟೇ ಅಲ್ಲದೇ ಸಿಗರೇಟ್ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಸಿಗರೇಟ್ ಸೇವನೆ ಮಾಡುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು, ಅಮೆರಿಕದಲ್ಲಿ ಶೇ. 0.2 ರಷ್ಟು ಜನರು ಸಿಗರೇಟ್ ಸೇವನೆ ತ್ಯಜಿಸಿದ್ದಾರೆ ಎನ್ನಲಾಗಿದೆ. 

ಇನ್ನು ಅಸ್ಟ್ರೆಲೀಯಾ ಜಗತ್ತಿನಲ್ಲೇ ಅತ್ಯಂತ ದುಬಾರಿ ಸಿಗರೇಟ್ ಬೆಲೆ ಹೊಂದಿರುವ ದೇಶವಾಗಿದ್ದು, ಇಲ್ಲಿ ಒಂದು ಪ್ಯಾಕ್ ಸಿಗರೇಟ್ ಗೆ 17 ಯುಸ್ ಡಾಲರ್ ಇದೆ.  

click me!