
ಮುಂಬೈ(ಆ.20): ಎರಡು ದಿನಗಳ ರಜೆ ಬಳಿಕ ಭಾರತೀಯ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದು, ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆಯ ಅಂಶಗಳ ಏರಿಕೆ ಕಂಡಿದೆ.
ಈ ಮೂಲಕ ಸೆನ್ಸೆಕ್ಸ್ ನೂತನ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಬಿಎಸ್ ಇ ಸೆನ್ಸೆಕ್ಸ್ ಇಂದು ಬೆಳಗ್ಗೆ 250 ಅಂಕಗಳ ಏರಿಕೆ ಕಾಣುವ ಮೂಲಕ ಇದೇ ಮೊದಲ ಬಾರಿಗೆ 38,200ರ ಗಡಿ ದಾಟಿದೆ. ಎನ್ ಎಸ್ ಇ ನಿಫ್ಟಿ ಕೂಡ ಇದೇ ಮೊದಲ ಬಾರಿಗೆ 11, 500 ಅಂಕಗಳಿಗೇರಿದೆ. ಸೆನ್ಸೆಕ್ಸ್ 263.03 ಅಂಕಗಳು (0.69 %) ಏರಿಕೆಯಾಗಿ 38,210.94 ಅಂಕಗಳಿಗೆ ತಲುಪಿದ್ದು ದಾಖಲೆಯಾಗಿದೆ.
ಈ ಹಿಂದೆ ಆಗಸ್ಟ್ 9 ರಂದು ಸೆನ್ಸೆಕ್ಸ್ 38,076.23 ಅಂಕ ತಲುಪಿದ್ದು ದಾಖಲೆಯಾಗಿತ್ತು. ಕಳೆದ ಶುಕ್ರವಾರ ಸೆನ್ಸೆಕ್ಸ್ ನಲ್ಲಿ 284.32 ಅಂಕಗಳು ಏರಿಕೆಯಾಗಿದ್ದವು.
ಇನ್ನು ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ ಏರಿಕೆ ಕಂಡಿದ್ದು, ಇಂದು 46.50 ಅಂಕ ಅಂದರೆ 0.40 % ಏರಿಕೆಯಾಗುವ ಮೂಲಕ 11,517.25 ಅಂಕಕ್ಕೆ ತಲುಪಿದೆ.
ಇಂದಿನ ವಹಿವಾಟಿನಲ್ಲಿ ಬಂಡವಾಳ ಸರಕುಗಳು, ಲೋಹಗಳು, ಸಿರಾಸ್ಥಿ ಹಾಗೂ ಬ್ಯಾಂಕಿಂಗ್ ವಲಯಗಳ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಕೋಲ್ ಇಂಡಿಯಾ, ಲಾರ್ಸನ್ ಅಂಡ್ ಟರ್ಬೋ. ಒಎನ್ ಜಿಸಿ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.