ಸುಮಾರು ಐದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಹೈಲೈಟ್ ಆಗಿದ್ದು, ಸಂಗೀತ ಮತ್ತು ನೃತ್ಯ ಕಾರ್ಯಕ್ರಮ. ಚೀನಾದ ಕುಟುಂಬವೊಂದು ಇದೇ ಮಾದರಿಯನ್ನು ಅನುಸರಿಸಿದ್ದು, ವಿಡಿಯೋ ವೈರಲ್ ಆಗಿದೆ.
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ನಡೆದು ಎರಡು ತಿಂಗಳುಗಳು ಕಳೆದಿವೆ. ಮುಕೇಶ್ ಅಂಬಾನಿ ಅವರು ಈ ಮದುವೆಗೆ ಸುಮಾರು 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಲಾಗುತ್ತಿದೆ. ಮದುವೆಗೆಂದೇ ಸಾವಿರಾರು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದಿದ್ದರು. ಅತಿಥಿಗಳನ್ನು ಕರೆತರಲು ಸುಮಾರು 100 ವಿಮಾನಗಳನ್ನು ಬಾಡಿಗೆ ಪಡೆದಿದ್ದರು ಎನ್ನಲಾಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಮುಂಬೈನಲ್ಲಿ ಅದ್ದೂರಿಯಾಗಿ ವಿವಾಹವಾದರು. ಜುಲೈ 12 ರಿಂದ 14 ರವರೆಗೆ ಮೂರು ದಿನಗಳ ಕಾಲ ನಡೆದ ಈ ಮದುವೆಯಲ್ಲಿ ದೇಶ-ವಿದೇಶಗಳಿಂದ ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ವಿವಿಐಪಿಗಳು ಭಾಗವಹಿಸಿದ್ದರು. ಈ ಮದುವೆ ಸಮಾರಂಭದಲ್ಲಿ ಹೆಚ್ಚು ಗಮನ ಸೆಳೆದಿದ್ದು WWE ಖ್ಯಾತಿಯ ಜಾನ್ ಸೀನ, ಕರ್ಡಾಶಿಯನ್ ಸಹೋದರಿಯರು ಸೇರಿದಂತೆ ವಿವಿಧ ಸೆಲೆಬ್ರಿಟಿಗಳು.
ಈ ಮದುವೆಯ ಮೂರೂ ದಿನಗಳೂ ಒಂದೊಂದು ರೀತಿಯ ಡಾನ್ಸ್ ಮನಸೂರೆಗೊಂಡಿದ್ದವು. ಇದರಲ್ಲಿ ಖುದ್ದು ನೀತಾ ಅಂಬಾನಿ ಕೂಡ ಪಾಲ್ಗೊಂಡಿದ್ದರು. ಇದೀಗ, ಈ ಮದುವೆಯಿಂದ ಪ್ರೇರೇಪಿತವಾಗ ಚೀನಾದ ಕುಟುಂಬವೊಂದು ಬಾಲಿವುಡ್ ಹಾಡಿಗೆ ಅನಂತ್ ಅಂಬಾನಿ ಮದುವೆಯ ರೀತಿಯಲ್ಲಿಯೇ ಡಾನ್ಸ್ ಮಾಡಿದ್ದು, ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಥೊಡಿ ಗುಮಾ ಹಾಡಿಗೆ ಅಂಬಾನಿ ಮದುವೆಯ ರೀತಿಯಲ್ಲಿಯೇ, ಅದೇ ರೀತಿಯ ಬಟ್ಟೆ ತೊಟ್ಟ ಚೀನಾದ ಸುಂದರಿಯರು ಅಲ್ಲಿಯ ಮದುವೆಯಲ್ಲಿ ನರ್ತಿಸಿದ್ದಾರೆ.
ಪ್ಯಾರಿಸ್ನಲ್ಲಿ ಅನಂತ್ ಅಂಬಾನಿ- ರಾಧಿಕಾ ವಿಹಾರ ಮಾಡ್ತಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?
ಅಷ್ಟಕ್ಕೂ ಬೇರೆಲ್ಲಾ ಮಕ್ಕಳಿಗಿಂತ ಅನಂತ್ ಅವರ ಮದುವೆಯನ್ನು ಇಷ್ಟೆಲ್ಲಾ ವಿಜೃಂಭಣೆಯಿಂದ ಮಾಡಲು ಕಾರಣವೂ ಇದೆ. ಅದೇನೆಂದರೆ, ಅನಾರೋಗ್ಯಪೀಡಿತರಾಗಿದ್ದ ಅನಂತ್ ಅವರಿಗೆ ಹೊಸ ಜೀವನ ಸಿಕ್ಕಿದೆ. ಈ ಕುರಿತು ಇತ್ತೀಚೆಗಷ್ಟೇ ಅನಂತ್ ಅಂಬಾನಿಯವರು ತಮ್ಮ ಅನಾರೋಗ್ಯದ ದಿನಗಳನ್ನು ನೆನೆದಿದ್ದರು. ನಮ್ಮವರ ಆಶೀರ್ವಾದ, ದೇವರ ಆಶೀರ್ವಾದ ಮತ್ತೆ ನನ್ನನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದಿದ್ದರು. ಸಂದರ್ಶನದಲ್ಲಿ, ರಾಧಿಕಾ ಮದುವೆ ಆಗ್ತಿರುವ ನಾನು ಲಕ್ಕಿ ಎಂದು ಅನಂತ್ ಅಂಬಾನಿ ಹೇಳಿದ್ದರು. ರಾಧಿಕಾ, ನನ್ನ ಡ್ರೀಮ್ ಎಂದಿರುವ ಅನಂತ್ ಅಂಬಾನಿ, ನಾನು ಮದುವೆಯಾಗದಿರುವ ನಿರ್ಧಾರಕ್ಕೆ ಬಂದಿದ್ದೆ. ಅಪ್ಪ – ಅಮ್ಮನಿಗೂ ಈ ವಿಷ್ಯವನ್ನು ಹೇಳಿದ್ದೆ. ಅದಕ್ಕೆ ಕಾರಣ ಪ್ರಾಣಿಗಳ ಮೇಲೆ ನನಗಿರುವ ಪ್ರೀತಿ ಹಾಗೂ ಸೇವಾ ಮನೋಭಾವ. ನನ್ನ ಬಾಳ ಸಂಗಾತಿ ರಾಧಿಕಾ ಕೂಡ ಇದೇ ಸ್ವಭಾವ ಹೊಂದಿದ್ದಾರೆ. ಅವರು ಪ್ರಾಣಿ ಮೇಲೆ ಅಪಾರ ಪ್ರೀತಿ ಹೊಂದಿದ್ದು, ಸೇವೆ ಮಾಡೋದ್ರಲ್ಲಿ ಆಸಕ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲ, ನನಗೆ ಬಂದ ಎಲ್ಲ ಕಷ್ಟಗಳನ್ನು ವಿಶೇಷವಾಗಿ ಆರೋಗ್ಯ ಸಮಸ್ಯೆ ಸಂದರ್ಭದಲ್ಲಿ ನನ್ನ ಜೊತೆ ಸದಾ ರಾಧಿಕಾ ಇದ್ರು. ನನಗೆ ಒಂದು ಶಕ್ತಿಯಾಗಿ ನನ್ನ ಜೊತೆ ನಿಂತಿದ್ದರು ಎಂದಿದ್ದರು ಅನಂತ್ ಅಂಬಾನಿ.
ಅನಂತ್ ಅವರು ಪ್ರಾಣಿ ಪ್ರಿಯರೂ ಹೌದು. ದಕ್ಷಿಣ ಆಫ್ರಿಕಾದ ರಾಷ್ಟ್ರ ನಮೀಬಿಯಾ ಭೀಕರ ಬರಗಾಲದಿಂದ (Namibia Drought) ತತ್ತರಿಸುತ್ತಿದೆ. 100 ವರ್ಷಗಳಲ್ಲಿ ಕಂಡು ಕೇಳರಿಯದ ಭೀಕರ ಬರಗಾಲದಿಂದಾಗು ಜನರು ಇಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವನ್ಯಜೀವಿಗಳನ್ನು ಕೊಂದು ಅವುಗಳ ಮಾಂಸದಿಂದ ಜನರ ಹಸಿವು ನೀಗಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 700 ಕ್ಕೂ ಹೆಚ್ಚು ಪ್ರಾಣಿಗಳನ್ನು ಕೊಲ್ಲಲು ಸರ್ಕಾರ ಮುಂದಾಗಿತ್ತು. ಆದರೆ ಈ ವನ್ಯಜೀವಿಗಳನ್ನು ರಕ್ಷಿಸಲು ಅನಂತ್ ಅಂಬಾನಿ ಅವರ ವಂತಾರಾ ಪ್ರತಿಷ್ಠಾನ ಮುಂದೆ ಬಂದಿದೆ. ನಮೀಬಿಯಾ ಅಧಿಕಾರಿಗಳಿಗೆ ಪತ್ರ ಬರೆದಿರುವ ಪ್ರತಿಷ್ಠಾನ, ಬರದಿಂದಾಗಿ ಅಲ್ಲಿನ ಜನರು ಮತ್ತು ಪ್ರಾಣಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯು ಅತ್ಯಂತ ಗಂಭೀರವಾಗಿರುವುದರಿಂದ ಪ್ರಾಣಿಗಳನ್ನು ಕೊಲ್ಲುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ವರದಿಗಳು ಕೇಳಿ ಬಂದಿದ್ದು ಇಂತಹ ಪರಿಸ್ಥಿತಿಯಲ್ಲಿ ನಮೀಬಿಯಾ ಸರ್ಕಾರಕ್ಕೆ ಪರ್ಯಾಯ ಮಾರ್ಗವನ್ನು ಪ್ರತಿಷ್ಠಾನವು ಸೂಚಿಸಿದೆ. ಹೀಗೆ ಹಲವಾರು ಪರೋಪಕಾರಿ ಕೆಲಸಗಳನ್ನು ಅನಂತ್ ಮಾಡುತ್ತಿದ್ದಾರೆ. ಇವರ ಮದುವೆ ಮಾತ್ರವಲ್ಲದೇ ಇವರು ಸಾಮಾಜಿಕ ಕಳಕಳಿಯು ಇತರರಿಗೆ ಮಾದರಿಯಾಗಬೇಕಿದೆ ಎನ್ನುತ್ತಾರೆ ಇವರನ್ನು ಹತ್ತಿರದಿಂದ ಬಲ್ಲವರು.
ಅನಂತ್ ಅಂಬಾನಿ ನೀಡಿದ 15 ಕೋಟಿ ಮೌಲ್ಯದ ಚಿನ್ನದ ಕಿರೀಟ ಹೊತ್ತ ಗಣಪನ ವಿಸರ್ಜನೆ: ಕೊನೆ ಕ್ಷಣದ ಅಮೋಘ ವಿಡಿಯೋ