ಜೀವನ ಪಾಠ ಕಲಿಸಲು 17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ

Published : Jan 14, 2026, 06:33 PM IST
chinese teen quits school for business

ಸಾರಾಂಶ

ಮಗನಿಗೆ ಹಣದ ಮೌಲ್ಯ ಮತ್ತು ಶಿಕ್ಷಣದ ಮಹತ್ವ ತಿಳಿಸಲು ಚೀನಾದ ತಾಯಿಯೊಬ್ಬಳು ಅವನನ್ನು ಕೆಲಸಕ್ಕೆ ಕಳುಹಿಸುತ್ತಾಳೆ. ಆದರೆ, ಆ ಬಾಲಕ 10 ದಿನಗಳಲ್ಲಿ ಭರ್ಜರಿ ಹಣ ಗಳಿಸಿ, ಶಾಲೆಯನ್ನೇ ಬಿಟ್ಟು ಪೂರ್ಣಾವಧಿ ವ್ಯವಹಾರ ನಡೆಸಲು ಮುಂದಾಗಿದ್ದಾನೆ.

ಇತ್ತೀಚೆಗೆ ಬಹುತೇಕ ಪೋಷಕರಿಗೆ ಮಕ್ಕಳನ್ನು ಹೇಗೆ ಬೆಳೆಸುವುದು ಎಂಬ ವಿಚಾರವೇ ಗೊತ್ತಿಲ್ಲ. ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಪೋಷಕರು ಮಕ್ಕಳು ಕೇಳಿದ್ದನ್ನು ಇಲ್ಲ ಎಂದು ಹೇಳುವುದಕ್ಕೂ ಭಯ ಪಡುತ್ತಾರೆ. ಅವರು ಕೇಳಿದ್ದೆಲ್ಲವನ್ನು ಬಾಯಿಂದ ಉದುರುವ ಮುನ್ನವೇ ನೀಡಿ ಅವರಿಗೆ ಕಷ್ಟ ನೋವು ಏನು ಎಂಬುದನ್ನು ಗೊತ್ತಿಲ್ಲದಂತೆ ಬೆಳೆಸಿರುತ್ತಾರೆ. ಆದರೆ ಪೋಷಕರ ಈ ವರ್ತನೆಯಿಂದ ಮಕ್ಕಳು ಸ್ವತಂತ್ರವಾಗಿ ಬದುಕುವುದನ್ನೇ ಮರೆಯುತ್ತಾರೆ. ಆದರೆ ಮಕ್ಕಳನ್ನು ವಾಸ್ತವದಲ್ಲಿ ಬೆಳೆಸಬೇಕು. ತಮ್ಮಲ್ಲಿ ಇಲ್ಲದ ಶ್ರೀಮಂತಿಕೆಯನ್ನು ಮಕ್ಕಳಿಗೆ ನೀಡಿ ಬೆಳೆಸಿದರೆ ಮುಂದಾಗುವ ಅನಾಹುತಗಳಿಗೆ ಕಷ್ಟಗಳಿಗೆ ಪೋಷಕರೇ ಹೊಣೆಯಾಗುತ್ತಾರೆ. ಅದೇ ರೀತಿ ಮಕ್ಕಳಿಗೆ ಹಣದ ಮೌಲ್ಯ, ಜೀವನ ಮೌಲ್ಯ ಬದುಕಿನ ಅರ್ಥವನ್ನು ಎಳೆಯ ಪ್ರಾಯದಲ್ಲೇ ತಿಳಿಸುವುದಕ್ಕೆ ಹೋದರೆ ಅವರು ಕೂಡ ಸ್ವತಂತ್ರ ಹಾಗೂ ಸ್ವಾಭಿಮಾನದಿಂದ ಬೆಳೆಯಬಹುದು ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಹೌದು ಪೂರ್ವ ಚೀನಾದ ಮಹಿಳೆಯೊಬ್ಬರು ತಮ್ಮ 17 ವರ್ಷದ ಮಗನಿಗೆ ಜೀವನ ಪಾಠ ಕಲಿಸುವ ಉದ್ದೇಶದಿಂದ ಆತನನ್ನು ಉಪಹಾರ ಗೃಹವೊಂದರಲ್ಲಿ ಕೆಲಸಕ್ಕೆ ಕಳುಹಿಸಿದ್ದಾರೆ. ಮಗನಿಗೆ ಶಿಕ್ಷಣ ಹಾಗೂ ಪೋಷಕರು ನೀಡುದ ಹಣದ ಬಗ್ಗೆ ಅರಿವಿರಬೇಕು ಎಂಬ ಉದ್ದೇಶದಿಂದ ತಾಯಿ ಈ ಪ್ಲಾನ್ ಮಾಡಿ ಮಗನನ್ನು ಕೆಲಸಕ್ಕೆ ಕಳುಹಿಸಿದ್ದಾಳೆ. ತಾಯಿಯ ಆಸೆಯಂತೆ ಮಗ ಸ್ವಂತವಾಗಿ ದುಡಿದು ತಿನ್ನುವುದನ್ನು ಬಹಳ ಸುಲಭವಾಗಿ ಕಲಿತುಕೊಂಡಿದ್ದು, ಈಗ ಶಾಲೆ ಬಿಟ್ಟು ಪೂರ್ಣ ಪ್ರಮಾಣದಲ್ಲಿ ವ್ಯವಹಾರ ಮಾಡುವುದಕ್ಕೆ ಯೋಜನೆ ರೂಪಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಶಾಲಾ ಶಿಕ್ಷಣವಿಲ್ಲದೆ ಹಣ ಸಂಪಾದಿಸುವುದು ಎಷ್ಟು ಕಷ್ಟ ಎಂಬುದನ್ನು ಅವನಿಗೆ ತೋರಿಸಬೇಕೆಂದು ಬಯಸಿ ತಾಯಿ ಈ ಕೆಲಸ ಮಾಡಿದ್ದಾಳೆ. ಆದರೆ ಆ ಬಾಲಕ ತನ್ನ ಬುದ್ಧಿವಂತಿಕೆಯಿಂದ ಎಲ್ಲರಿಗೂ ಸರ್‌ಫ್ರೈಸ್ ನೀಡಿದ್ದು, ಆತ ತಾನು ಕೆಲಸ ಮಾಡುತ್ತಿದ್ದ ಆಹಾರ ಮಳಿಗೆಯಲ್ಲಿ ಫ್ರೈಡ್ ಚಿಕನ್ ಮಾರಾಟ ಮಾಡುವ ಮೂಲಕ ಕೇವಲ 10 ದಿನದಲ್ಲಿ 10,000 ಹಣವನ್ನು ಗಳಿಸಿದ್ದಾನೆ. ಅಂದರೆ ಸುಮಾರು 1,400 ಅಮೆರಿಕನ್ ಡಾಲರ್ ನಷ್ಟು ಹಣ ಸಂಪಾದನೆ ಮಾಡಿ ಆತ ಎಲ್ಲರಿಗೂ ಅಚ್ಚರಿ ನೀಡಿದ್ದಾನೆ.

ಇದನ್ನೂ ಓದಿ: 15 ಲಕ್ಷ ವೆಚ್ಚದಲ್ಲಿ ತನ್ನ 10 ಸ್ನೇಹಿತರಿಗೆ iPhone 17 Pro Max ಫೋನ್ ಖರೀದಿಸಿ ನೀಡಿದ ವ್ಯಕ್ತಿ: ವೀಡಿಯೋ ಭಾರಿ ವೈರಲ್

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಅವನು ತನ್ನ ಯಶಸ್ಸಿನಿಂದ ಎಷ್ಟು ಪ್ರೇರಿತನಾಗಿದ್ದನೆಂದರೆ, ಅವನ ತಾಯಿ ಅವನನ್ನು ಬೇರೆ ರೀತಿಯಲ್ಲಿ ಮನವೊಲಿಸಲು ಪ್ರಯತ್ನಿಸಿದರೂ ಸಹ, ಅವನು ಶಾಲೆಯನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ವ್ಯವಹಾರ ಮುಂದುವರಿಸಲು ನಿರ್ಧರಿಸಿದ್ದಾನೆ ಎಂದು ವರದಿಯಾಗಿದೆ. ಈ ವಿಚಾರ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕರು ಹಲವು ಕಾಮೆಂಟ್ ಮಾಡ್ತಿದ್ದಾರೆ. ಬದುಕು ನಿಮ್ಮತ್ತ ನಿಂಬೆ ಎಸೆದರೆ ಅದರಲ್ಲಿ ನಿಂಬೆಹುಳಿ ಜ್ಯೂಸ್ ಮಾಡುವುದನ್ನು ಕಲಿಯಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಆತನ ನಿರ್ಧಾರವನ್ನು ಮೆಚ್ಚಿಕೊಂಡಿದ್ದು, ಶಾಲೆ ನಿಮಗೆ ಜೀವನಕ್ಕೆ ಬೇಕಾದ ಯಾವ ಜ್ಞಾನವನ್ನು ನೀಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹಣ ಮಾಡುವ ಬಗ್ಗೆ ಅಲ್ಲಿ ಯಾವ ಶಿಕ್ಷಣವೂ ಇರುವುದಿಲ್ಲ. ಅಲ್ಲದೇ ಶಿಕ್ಷಣ ಪಡೆದ ನಂತರ ಕಲಿತಿರುವ ಕ್ಷೇತ್ರದಲ್ಲೇ ಕೆಲಸ ಸಿಗುವುದು ಕೂಡ ಕಷ್ಟಕರ ಎಂದು ಒಬ್ಬರು ಕಾಮೆಂಟ್ ಮಾಡಿದ್ದು, ಆತ ಒಳ್ಳೆಯ ನಿರ್ಧಾರವನ್ನೇ ಮಾಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಅಪ್ಪಟ ಹಳ್ಳಿ ಪ್ರತಿಭೆಯ ಅದ್ಭುತ ಸ್ವರ: ಹೂವಿನ ಬಾಣದಂತೆ ಈ ತಂಗಿನೂ ಸ್ವಲ್ಪ ಫೇಮಸ್ ಮಾಡ್ರೋ ಅಣ್ಣಂದಿರಾ..!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಕೆಜಿಗೆ 3 ಲಕ್ಷ ಗಡಿಯತ್ತ ಬೆಳ್ಳಿ, ಮೂರೇ ದಿನದಲ್ಲಿ 34 ಸಾವಿರ ಏರಿಕೆ; ನಿಜವಾದ ಬೆಳ್ಳಿ ಗುರುತಿಸುವ ನಾಲ್ಕು ಮಾರ್ಗಗಳಿವು!
ಭಾರತದ GenZ ದೊಡ್ಡ ಸಮಸ್ಯೆ ಇದೇ, ಎಚ್ಚೆತ್ತುಕೊಳ್ಳದೇ ಇದ್ದರೆ ಅಪಾಯ ಖಚಿತ!