ಭಾರತದ GenZ ದೊಡ್ಡ ಸಮಸ್ಯೆ ಇದೇ, ಎಚ್ಚೆತ್ತುಕೊಳ್ಳದೇ ಇದ್ದರೆ ಅಪಾಯ ಖಚಿತ!

Published : Jan 14, 2026, 03:38 PM IST
india genz debt

ಸಾರಾಂಶ

ಭಾರತದ GenZ ಪ್ರಯಾಣ, ದುಬಾರಿ ಗ್ಯಾಜೆಟ್‌ಗಳಿಗಾಗಿ ಸಾಲ ಮಾಡುತ್ತಿದ್ದರೆ, ಚೀನಾದ GenZ ಭವಿಷ್ಯಕ್ಕಾಗಿ 'ರಿವೇಂಜ್ ಸೇವಿಂಗ್' ಮೊರೆಹೋಗಿದೆ. ಸುಲಭ ಸಾಲದ ಲಭ್ಯತೆಯಿಂದಾಗಿ ಭಾರತದ ಯುವಪೀಳಿಗೆ ಸಾಲದ ಸುಳಿಯಲ್ಲಿ ಸಿಲುಕುವ ಅಪಾಯವಿದ್ದು, ಎಚ್ಚೆತ್ತುಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

 

ಬೆಂಗಳೂರು (ಜ.14): GenZ, Gen ಆಲ್ಫಾ, Gen ಬೀಟಾ ಅನ್ನೋ ಹೆಸರು ಕೇಳೋಕೆ ಖುಷಿ ಆಗುತ್ತೆ. ವರ್ಷಗಳು ಕಳೆದ ಹಾಗೆ ಮನುಷ್ಯನ ಜೀವನ ಅವನ ಆಸಕ್ತಿಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುತ್ತದೆ. ಹಾಗಂತ ಅತಿಯಾದ ಬದಲಾವಣೆಯೂ ನಮ್ಮ ಜೀವನಮಟ್ಟವನ್ನು ಹಾಳು ಮಾಡಬಹುದು ಎನ್ನುವ ಎಚ್ಚರಿಕೆಯನ್ನು ಫೈನಾನ್ಶಿಯಲ್‌ ಇನ್‌ಫ್ಲುಯೆನ್ಸರ್‌ ಒಬ್ಬರು ನೀಡಿದ್ದಾರೆ. ಹಣಕಾಸು ವಿಚಾರದಲ್ಲಿ ಭಾರತದ GenZ ಹಾಗೂ ಚೀನಾದ GenZ ನಡುವೆ ಇರುವ ವ್ಯತ್ಯಾಸವನ್ನು ಅವರು ತಿಳಿಸಿದ್ದು, ಭಾರತದ GenZ ಎಚ್ಚೆತ್ತುಕೊಳ್ಳದೇ ಇದ್ದರೆ ಅಪಾಯ ಖಚಿತ ಎಂದಿದ್ದಾರೆ.

ಭಾರತದ GenZ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಇದೇ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈಯಕ್ತಿಕ ಸಾಲವನ್ನು ವೈದ್ಯಕೀಯ ತುರ್ತಿಗಾಗಿ, ಮನೆಯ ನವೀಕರಣಕ್ಕಾಗಿ ಅಥವಾ ಚಿನ್ನ-ಬೆಳ್ಳಿಯಂಥ ಆಸ್ತಿ ಖರೀದಿಗಾಗಲಿ ಪಡೆದುಕೊಳ್ಳುತ್ತಿಲ್ಲ. 2025ರ ಮೊದಲಾರ್ಧದಲ್ಲಿ ಶೇ. 27ರಷ್ಟು ವೈಯಕ್ತಿಕ ಸಾಲಗಳನ್ನು ಪಡೆದುಕೊಂಡಿರುವುದು ಟ್ರಾವೆಲ್‌ ಮಾಡುವ ಸಲುವಾಗಿ. ಹೌದು, ದೂರದೂರಿಗೆ ಪ್ರಯಾಣ ಮಾಡುವ ಸಲುವಾಗಿಯೇ 2025ರ ಮೊದಲ ಆರು ತಿಂಗಳಲ್ಲಿ ಶೇ. 27ರಷ್ಟು ವೈಯಕ್ತಿಕ ಸಾಲ ಪಡೆದುಕೊಳ್ಳಲಾಗಿದೆ.

ಯಾವುದೇ ಅಡಮಾನ ಇಲ್ಲದೆ ಸಿಗುವ ವೈಯಕ್ತಿಕ ಸಾಲವನ್ನು ಭಾರತದ GenZ ಪ್ರಯಾಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಇನ್ನು ದೇಶದಲ್ಲಿ ಮಾರಾಟವಾಗುವ ಶೇ.70ರಷ್ಟು ಐಫೋನ್‌ಗಳು ಇಎಂಐನಲ್ಲಿ ಖರೀದಿ ಆಗ್ತಿವೆ.

ಓವರ್‌ಪ್ರೈಸ್‌ ಆಗಿರುವ ಕಾನ್ಸರ್ಟ್‌ಗಳಿಗೆ ಹೋಗುವ ಸಲುವಾಗಿ 20 ಸಾವಿರಕ್ಕೂ ಅಧಿಕ ಬೆಲೆಯ ವಿಮಾನದ ಟಿಕೆಟ್‌ಗಳನ್ನು ಸಾಲ ಮಾಡಿ ಖರೀದಿ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ ಕೆಲವೊಂದು ಅಂದಾಜಿನ ಪ್ರಕಾರ 2024ರಲ್ಲಿ ಶೇ. 39ರಷ್ಟು GenZ ಜನಾಂಗದವರು ಮನೆಯ ರೆಂಟ್‌, ಪ್ರತಿದಿನದ ದಿನಸಿ ಹಾಗೂ ಮನೆಯ ಸಾಮಗ್ರಿಗಳನ್ನು ಸಾಲದಲ್ಲಿಯೇ ಖರಿದಿ ಮಾಡಿದ್ದಾರೆ ಅನ್ನೋದು.

ಇದಕ್ಕೆ ಎರಡು ಕಾರಣವಿದೆ. ಒಂದು, ಹಿಂದಿನ ಜನರೇಷನ್‌ನವರು ಮನೆಯಂಥ ನಿಜವಾದ ಆರ್ಥಿಕ ಆಸ್ತಿಯನ್ನು ಖರೀದಿ ಮಾಡುವ ಸಲುವಾಗಿ ವರ್ಷಗಳ ಕಾಲ ಉಳಿತಾಯ ಮಾಡುತ್ತಿದ್ದರು. ಆದರೆ, ಇಂದು ಮನೆಯ ಬೆಲೆ ಎಷ್ಟರ ಮಟ್ಟಿಗೆ ಏರಿವೆ ಎಂದರೆ, GenZ ಗಳು 20 ವರ್ಷಗಳ ಕಾಲ 2 ಲಕ್ಷ ಇಎಂಐ ಕಟ್ಟೋದು ಹೇಗೆ ಅನ್ನೋ ಯೋಚನೆಯಲ್ಲೇ ಆ ಪ್ಲ್ಯಾನ್‌ ಮಾಡೋದನ್ನೇ ಕೈಬಿಟ್ಟಿದ್ದಾರೆ. ಅದರ ಬದಲು ಈ ಕ್ಷಣದ ಸಂತೋಷ ನೀಡುವ ಗ್ರಾಹಕ ವಸ್ತುಗಳ ಮೇಲೆ ಮನಬಂದಂತೆ ಹಣ ಹೂಡುತ್ತಿದ್ದಾರೆ.

ಇನ್ನೊಂದು ಕಾರಣ ಏನೆಂದರೆ ಭಾರತದಲ್ಲಿ ಫಿನ್‌ಟೆಕ್‌ ಕಂಪನಿಗಳ ಪ್ರಗತಿ. ಜೀರೋ ಕಾಸ್ಟ್‌ ಇಎಂಐ ಹಾಗೂ ಬೈ ನೌ ಪೇ ಲೇಟರ್‌ (ಬಿಎನ್‌ಪಿಎಲ್‌) ಕಾರಣದಿಂದಾಗಿ ಸಾಲ ಪಡೆಯೋದು ಇನ್ನಷ್ಟು ಸುಲಭವಾಗಿದೆ. ಸದ್ಯ ದೇಶದಲ್ಲಿ 50 ಸಾವಿರವರೆಗಿನ ಸಾಲಗಳಿಗೆ ಯಾವುದೇ ಅಡಮಾನಗಳೂ ಬೇಕಾಗಿಲ್ಲ. ಕೆಲವೇ ನಿಮಿಷದಲ್ಲಿ ಇಂಥ ಸಾಲಗಳಿಗೆ ಒಪ್ಪಿಗೆ ಕೂಡ ಸಿಗುತ್ತದೆ.

ಚೀನಾದಲ್ಲಿ ಈ ಪರಿಸ್ಥಿತಿ ಇಲ್ಲ

ಭಾರತದ GenZ ವಿಚಾರ ಹೀಗಾದರೆ, ಭಾರತದಷ್ಟೇ ಜನಸಂಖ್ಯೆ ಹೊಂದಿರುವ ಚೀನಾದ GenZ ಯೋಚನೆ ಮಾಡುವ ರೀತಿಯೇ ಬೇರೆ. ಅವರ ಯೋಚನೆಗಳನ್ನು ನೋಡಿದರೆ ನಿಮಗೆ ಅಚ್ಚರಿಯಾಗೋದು ಖಂಡಿತ. ಚೀನಾದ ಜನರೇಷನ್‌ಗಳು ಈ ಹಂತವನ್ನು 2015 ರಿಂದ 2019ರಲ್ಲಿ ಅನುಭವಿಸಿದ್ದರು. ಸ್ಟೇಟಸ್‌ ಕಾಯ್ದುಕೊಳ್ಳುವ ಸಲುವಾಗಿ ಅಗತ್ಯಕ್ಕಿಂತಲೂ ಮೀರಿ ಸಾಲ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದರು. ಆದರೆ, ಈಗ ಅವರ GenZ ರಿವೇಂಜ್‌ ಸ್ಪೆಂಡಿಂಗ್‌ಗಿಂತ ರಿವೇಂಜ್‌ ಸೇವಿಂಗ್‌ಗೆ ಇಳಿದಿದೆ. ಹೌದು ಚೀನಾದ GenZ ಗೋಲ್ಡ್‌ ಬೀನ್ಸ್‌ಗಳ ಮೇಲೆ ಹೂಡಿಕೆ ಮಾಡುತ್ತಿವೆ. ಭವಿಷ್ಯದಲ್ಲಿ ಚಿನ್ನವೇ ತಮ್ಮ ಬಂಡವಾಳ ಎನ್ನುವುದು ಅವರಿಗೆ ಅರಿವಾಗಿದೆ.

ಭಾರತದ GenZ ನಾಳೆ ನಾನು ದುಡಿಯುತ್ತೇನೆ ಅನ್ನೋ ಕಾರಣಕ್ಕೆ ಇಂದು ಸಾಲ ಮಾಡುತ್ತಿದ್ದರೆ, ಚೀನಾದ GenZ ಮುಂದೆ ತಮಗೆ ಕೆಲಸ ಇರೋದಿಲ್ಲ ಅನ್ನೋ ಕಾರಣಕ್ಕೆ ಇಂದು ಉಳಿತಾಯ ಮಾಡಲು ಆರಂಭಿಸಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಪೋಸ್ಟ್ ಅಫೀಸ್ ಟಿಡಿ ಖಾತೆಯಲ್ಲಿ 1 ಲಕ್ಷ ರೂ ಠೇವಣಿ ಇಟ್ಟರೆ ಸಾಕು ಸಿಗಲಿದೆ 45 ಸಾವಿರ ರೂ ಬಡ್ಡಿ
ವಿದೇಶಗಳಿಗೆ ಬಾಳೆ ಎಲೆ ರಪ್ತು ಮಾಡಿ ಗಳಿಸಿ ಲಕ್ಷ ಲಕ್ಷ ಆದಾಯ: ಉದ್ಯಮ ಆರಂಭಿಸುವವರಿಗಾಗಿ ಇಲ್ಲಿದೆ ಹಂತ ಹಂತದ ಮಾರ್ಗದರ್ಶನ