
ನವದೆಹಲಿ(ಸೆ.16): ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲು ಯೋಜನೆ ಗುತ್ತಿಗೆ ಪಡೆಯಲು ಯತ್ನಿಸಿ ಸೋಲುಂಡ ಚೀನಾ, ಇದೀಗ ಚೀನಾ ಮತ್ತು ಭಾರತದ ನಡುವೆ ಬುಲೆಟ್ ರೈಲು ಓಡಿಸುವ ಪ್ರಸ್ತಾಪ ಮಾಡಿದೆ.
ಚೀನಾದ ಕುನ್ಮಿಂಗ್‌ನಿಂದ ಭಾರತದ ಕೋಲ್ಕತಾ ನಡುವೆ ಸಂಚರಿಸುವ ರೈಲು, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶವನ್ನು ಹಾದು ಹೋಗಲಿದೆ. ಒಂದು ವೇಳೆ ಈ ಯೋಜನೆ ಕಾರ್ಯಗತವಾದಲ್ಲಿ ರೈಲು ಸಾಗುವ ಮಾರ್ಗದಲ್ಲಿ ಹೊಸ ಆರ್ಥಿಕ ಕಾರಿಡಾರ್ ಅಭಿವೃದ್ಧಿಗೊಳ್ಳಲಿದೆ ಎಂದು ಚೀನಾ ವಿಶ್ವಾಸ ವ್ಯಕ್ತಪಡಿಸಿದೆ.
ಕೋಲ್ಕತಾದಲ್ಲಿರುವ ಚೀನಾದ ರಾಯಭಾರಿ ಮಾ ಝಾನ್‌ವು ಕಾರ್ಯಕ್ರಮವೊಂದರ ವೇಳೆ ಈ ಪ್ರಸ್ತಾಪ ಮಾಡಿದ್ದಾರೆ. ಕುನ್ಮಿಂಗ್ ಮತ್ತು ಕೋಲ್ಕತಾ ನಡುವಿನ 2800 ಕಿ.ಮೀ ಮಾರ್ಗದಲ್ಲಿ ಬುಲೆಟ್ ರೈಲು ಸೇವೆ ಆರಂಭವಾದರೆ ಎರಡೂ ನಗರಗಳ ಸಂಚಾರದ ಅವಧಿ ಕೆಲವೇ ಗಂಟೆಗಳಿಗೆ ಇಳಿಯಲಿದೆ. ಜೊತೆಗೆ ಯೋಜನೆಯಿಂದ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಕ್ಕೂ ಲಾಭವಾಗಲಿದೆ ಎಂದು ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.