ಮುಕೇಶ್ ಅಂಬಾನಿ, ಅದಾನಿಗೂ ತಟ್ಟಿದ HMPV ಚೀನಾ ವೈರಸ್ ಬಿಸಿ, 52 ಸಾವಿರ ಕೋಟಿ ನಷ್ಟ

By Chethan Kumar  |  First Published Jan 7, 2025, 5:27 PM IST

ಕೋವಿಡ್ ವೈರಸ್ ಬಳಿಕ ಇದೀಗ ಚೀನಾದಿಂದ HMPV ಭೀತಿ ಶುರುವಾಗಿದೆ.ಭಾರತದಲ್ಲಿ 7 ಪ್ರಕರಣ ಪತ್ತೆಯಾಗಿದೆ. ಆದರೆ ಈ ವೈರಸ್ ಬಿಸಿ ಮುಕೇಶ್ ಅಂಬಾನಿ, ಗೌತಮ್ ಅದಾನಿಗೂ ತೀವ್ರವಾಗಿ ತಟ್ಟಿದೆ. ಬರೋಬ್ಬರಿ 52,000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
 


ಮುಂಬೈ(ಜ.07) ಕೋವಿಡ್ ವೈರಸ್ ಮಹಾಮಾರಿಯಿಂದ ಚೇತರಿಸಿಕೊಳ್ಳಲು ವಿಶ್ವ ಸುದೀರ್ಘ ವರ್ಷಗಳನ್ನೇ ತೆಗೆದುಕೊಂಡಿದೆ. ಇನ್ನೇನು ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವಾಗಲೇ ಚೀನಾದಿಂದ ಮತ್ತೊಂದು ವೈರಸ್ HMPV ಇದೀಗ ವಿಶ್ವದ ನಿದ್ದೆಗೆಡಿಸಿದೆ. ಚೀನಾದ ಕೆಲ ಪ್ರಾಂತ್ಯಗಳಲ್ಲಿ HMPV ವೈರಸ್ ಸ್ಫೋಟಗೊಂಡಿದೆ. ಇದೀಗ ಭಾರತದಲ್ಲೂ ಈ ವೈರಸ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿನ 2 ಪ್ರಕರಣ ಸೇರಿದಂತೆ ಭಾರತದಲ್ಲಿ 7 ಪ್ರಕರಣ ದಾಖಲಾಗಿದೆ.  ಈ ವೈರಸ್ ಬಿಸಿ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿಗೂ ತಟ್ಟಿದೆ. ಚೀನಾ ವೈರಸ್‌ನಿಂದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಒಟ್ಟು 52,000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಭಾರತದಲ್ಲಿ HMPV ವೈರಸ್ ಪತ್ತೆಯಾಗುತ್ತಿದ್ದಂತೆ ಅಂಬಾನಿ ಹಾಗೂ ಅದಾನಿಗೆ ಬಿಸಿ ತಟ್ಟಿದೆ. ಸೋಮವಾರ ಭಾರತದಲ್ಲಿ HMPV ಪ್ರಕರಣ ಪತ್ತೆಯಾಗಿತ್ತು. ಈ ಕೇಸ್ ಪತ್ತೆ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಮಂಗಳವಾರ ವೇಳೆಗೆ ಭಾರತದಲ್ಲಿ HMPV ಪ್ರಕರಣ ಸಂಖ್ಯೆ 7ಕ್ಕೆ ಏರಿಕೆಯಾಗಿತ್ತು. ಹೀಗಾಗಿ ಇಂದು ಕೂಡ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ಕಳೆದ ಎರಡು ದಿನಗಳಲ್ಲಿ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಒಟ್ಟು 52,000 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

Tap to resize

Latest Videos

ಈತ ವಿಶ್ವದ 5ನೇ ಶ್ರೀಮಂತ, ಆದರೂ ಅಂಬಾನಿಗೆ ಪ್ರತಿ ತಿಂಗಳು ಪಾವತಿಸುತ್ತಾರೆ 40 ಲಕ್ಷ ರೂ

ಬ್ಲೂಮ್‌ಬರ್ಗ್ ಬಿಲಿನೇರಿಯರ್ ವರದಿ ಪ್ರಕಾರ, ಅಂಬಾನಿ ಅದಾನಿ ಎರಡು ದಿನದಲ್ಲಿ ಸಾವಿರಾರು ಕೋಟಿ ಕಳೆದುಕೊಂಡಿದ್ದಾರೆ. ಇದು ಭಾರತದ ಷೇರುಮಾರುಕಟ್ಟೆ ಮೇಲೆ HMPV ವೈರಸ್ ಭೀತಿ ಆವರಿಸಿದ ಪರಿಣಾಮ ಎಂದಿದೆ. ಭಾರತೀಯ ಹೂಡಿಕೆದಾರರು ಸದ್ಯ ಸ್ಫೋಟಗೊಂಡಿರುವ HMPV ವೈರಸ್ ಕೋವಿಡ್ ರೀತಿಯ ಪರಿಣಾಮ ಸೃಷ್ಟಿಸಲಿದೆ ಅನ್ನೋ ಆತಂಕದಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬ್ಲೂಮ್‌ಬರ್ಗ್ ಇಂಡೆಕ್ಸ್ ವರದಿ ಪ್ರಕಾರ ಕಳೆದ ಎರಡು ದಿನಗಳಲ್ಲಿ HMPV ವೈರಸ್ ಭೀತಿ ಹೂಡಿಕೆದಾರರನ್ನು ತಟ್ಟಿದೆ. ಇದರ ಪರಿಣಾಮ ಮುಕೇಶ್ ಅಂಬಾನಿ 22,000 ಕೋಟಿರೂಪಾಯಿ ನಷ್ಟ ಅನುಭವಿಸಿದ್ದಾರೆ ಎಂದಿದೆ. ಇದರಿಂದ ಅಂಬಾನಿ ಒಟ್ಟು ಆಸ್ತಿ ಇದೀಗ 90.5 ಬಿಲಿಯನ್‌ ಅಮೆರಿಕನ್ ಡಾಲರ್‌ಗೆ ಕುಸಿತ ಕಂಡಿದೆ. ಹೊಸ ವರ್ಷದ ಮೊದಲ ವಾರದಲ್ಲೇ ಅಂಬಾನಿಗೆ ಆಘಾತವಾಗಿದೆ. 119 ಮಿಲಿಯನ್ ಅಮೆರಿಕನ್ ಡಾಲರ್‌ನಿಂದ ಇದೀಗ 90.5 ಮಿಲಿಯನ್‌ಗೆ ಕುಸಿತ ಕಂಡಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 17ನೇ ಸ್ಥಾನಕ್ಕೆ ಕುಸಿದಿದೆ.

ಗೌತಮ್ ಅದಾನಿ ಕಳೆದೆರಡು ದಿನದಲ್ಲಿ 30,000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರೆ. HMPV ವೈರಸ್ ಭೀತಿಯಿಂದ ಷೇರುಮಾರುಕಟ್ಟೆ ಮೇಲೂ ಹೊಡೆತ ಬೀಳುತ್ತಿದೆ. ಕೋವಿಡ್ ವೈರಸ್ ಅಪ್ಪಳಿಸಿದ ಸಂದರ್ಭದಲ್ಲಿ ತೀವ್ರ ಹೊಡೆತ ಅನುಭವಿಸಿತ್ತು. ಒಂದೊಂದು ಪ್ರಕರಣ ಹೆಚ್ಚಾಗುತ್ತಿದ್ದಂತೆ ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕ್ಯ ಕುಸಿತ ಕಂಡಿತ್ತು. ಇದೀಗ HMPV ವೈರಸ್ ಆ ಮಟ್ಟಿನ ಆತಂಕ ಸೃಷ್ಟಿಸಿಲ್ಲ. ಆಧರೆ ಕೋವಿಡ್ ರೀತೆಯ ಅಲೆ ಸೃಷ್ಟಿಯಾಗಬಹುದು ಅನ್ನೋ ಕಾರಣದಿಂದ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗುತ್ತಿದೆ. ಆದರೆ ಮಂಗಳವಾರ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ. ಆರಂಭಿಕ ಕುಸಿತ ಕಂಡ ಆತಂಕ ವಾತಾವರಣ ಸೃಷ್ಟಿಯಾಗಿದ್ದರೂ ನಿಧಾನವಾಗಿ ಚೇತರಿಕೆ ಕಂಡಿದೆ.

8 ಗಂಟೆ ಕಳೆದರೆ ಪತ್ನಿ ಓಡಿ ಹೋಗುತ್ತಾರೆ, ನಾರಾಯಣಮೂರ್ತಿಗೆ ಟಾಂಗ್ ಕೊಟ್ರಾ ಗೌತಮ್ ಅದಾನಿ?

ಇಂದು ನಾಗ್ಪುರದಲ್ಲಿ 2 ವೈರಸ್ ಪ್ರಕರಣ ಪತ್ತೆಯಾಗಿದೆ. ಚೀನಾದಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಮಲೇಷಿಯಾದಲ್ಲೂ ಹೆಚ್‌ಎಂಪಿವಿ ಪ್ರಕರಣ ಏರಿಕೆಯಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಇತ್ತ ರಾಜ್ಯ ಆರೋಗ್ಯ ಇಲಾಖೆಯೂ ಮಾರ್ಗಸೂಚಿ ಪ್ರಕಟಿಸಿದೆ. ಇದು ಕೋವಿಡ್ ರೀತಿಯ ಆತಂಕ ಸೃಷ್ಟಿಸಿಲ್ಲ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

click me!