
ಚೆನ್ನೈ(ಆ.21): ಹೊಟೇಲ್ ಉದ್ಯಮದಲ್ಲಿ ಪ್ಲಾಸ್ಟಿಕ್ ಬಳಕೆಯಾದಷ್ಟು ಬಹುಶಃ ಇನ್ಯಾವ ಉದ್ಯಮದಲ್ಲೂ ಬಳಕೆಯಾಗುವುದಿಲ್ಲ. ಅದರಲ್ಲೂ ಪಾರ್ಸಲ್ ಗಳಿಗೆ ಹೊಟೇಲ್ ಉದ್ಯಮ ಪ್ಲಾಸ್ಟಿಕ್ ನ್ನೇ ನೆಚ್ಚಿಕೊಂಡು ಕೂತಿದೆ.
ಆದರೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕೆಲವು ಹೋಟೆಲ್ ಗಳು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ನೂತನ ಐಡಿಯಾ ಸಂಶೋಧಿಸಿವೆ. ಅದರಂತೆ ಊಟದ ಪ್ಯಾಕಿಂಗ್‌ಗಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸದಂತೆ ಜನರಿಗೆ ಪ್ರೇರಣೆ ನೀಡಲು ಈ ಹೋಟೆಲ್ ಗಳು ಮುಂದಾಗಿವೆ.
ಊಟ ಪಾರ್ಸಲ್ ಗಾಗಿ ಮನೆಯಿಂದಲೇ ಪಾತ್ರೆಗಳನ್ನು ತಂದರೆ ಆಹಾರದಲ್ಲಿ ರಿಯಾಯ್ತಿ ಘೋಷಣೆ ಮಾಡಲಾಗಿದೆ. 2019, ಜನವರಿ 1 ರಿಂದ ಪ್ಲಾಸ್ಟಿಕ್ ನಿಷೇಧ ಮಾಡುವುದಾಗಿ ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಹೊಟೇಲ್ ಉದ್ಯಮ ಈ ವಿನೂತನ ಹೆಜ್ಜೆ ಇರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ತಮಿಳುನಾಡು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಎಂ. ರವಿ, ಪಾಸರ್ಸಲ್ ಗೆ ಮನೆಯಿಂದಲೇ ಪಾತ್ರೆ ತಂದವರಿಗೆ ಶೇ.5ರಷ್ಟು ರಿಯಾಯ್ತಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹೊಟೇಲ್ ಉದ್ಯಮಿಗಳ ಈ ಪರಿಸರ ಸ್ನೇಹಿ ನಡೆಗೆ ಎಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.