
ಭಾರತದಲ್ಲಿ ಪ್ರೀಮಿಯಂ ಡೆಸರ್ಟ್ ಕಲ್ಚರ್ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗ ಆ ಕಲ್ಚರ್ಗೆ ಮತ್ತೊಂದು ಗ್ಲೋಬಲ್ ಹೆಸರು ಸೇರ್ಪಡೆಯಾಗಿದೆ. ಚೀಸ್ಕೇಕ್ ಅನ್ನೋ ಪದ ಕೇಳಿದ್ರೆ ಕೆಲವರಿಗೆ ಬಾಯಿ ನೀರೂರತ್ತೆ. ಕೆಲವರಿಗೆ ಅಮೆರಿಕಾದ ಫೇಮಸ್ ಚೀಸ್ ಕೇಕ್ ಬ್ರ್ಯಾಂಡ್ ನೆನಪಿಗೆ ಬರುತ್ತೆ. ಚೀಸ್ ಕೇಕ್ ತಿನ್ಬೇಕು ಅನ್ನೋರು ಇನ್ಮುಂದೆ ವಿದೇಶಕ್ಕೆ ಹೋಗ್ಬೇಕಾಗಿಲ್ಲ. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಚೀಸ್ ಕೇಕ್ ಸಿಗಲಿದೆ. ಯಸ್, ಸ್ವೀಟ್ ಪ್ರಿಯರಿಗೆ ಈಗ ದೊಡ್ಡ ಸರ್ಪ್ರೈಸ್ ಸಿಕ್ಕಿದೆ.
ಅಮೆರಿಕಾದ ಪ್ರಸಿದ್ಧ ಡೆಸರ್ಟ್ ಬ್ರ್ಯಾಂಡ್ ಚೀಸ್ಕೇಕ್ ಫ್ಯಾಕ್ಟರಿ ಬೇಕರಿ (The Cheesecake Factory Bakery) ಈಗ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಈ ಬ್ರ್ಯಾಂಡ್ ಭಾರತದಲ್ಲಿ ತನ್ನ ಮೊದಲ ಸ್ಟೋರನ್ನು ಬೆಂಗಳೂರಿನಲ್ಲಿ ಶುರು ಮಾಡ್ತಿದೆ. ಈ ಮೂಲಕ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಡೆಸರ್ಟ್ ಮಾರುಕಟ್ಟೆಗೆ ಅಧಿಕೃತ ಪ್ರವೇಶ ಮಾಡಲಿದೆ. ಬೆಂಗಳೂರು ಮೂಲದ ದಿ ಗೌರ್ಮೆಟ್ ಕೆಫೆ, ಚೀಸ್ಕೇಕ್ ಫ್ಯಾಕ್ಟರಿ ಬೇಕರಿ ಜೊತೆ ಒಪ್ಪಂದ ಮಾಡ್ಕೊಂಡಿದೆ.
FIRE Movement: ಸವಾಲಿಗೇ ಸವಾಲೆಸೆಯೋ Gen Zಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳು
ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ದೇಶದಾದ್ಯಂತ ಸುಮಾರು 55 ಔಟ್ಲೇಟ್ ಶುರು ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಸುಮಾರು 60 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಐದಾರು ವರ್ಷಗಳಲ್ಲಿ ಕಂಪನಿ 200 -250 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ.
ಬೆಂಗಳೂರಿಗೆ ಪಾದಾರ್ಪಣೆ ಮಾಡಿದ ನಂತರ, ಕಂಪನಿ ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಅಹಮದಾಬಾದ್ನಂತಹ ಮಹಾನಗರಗಳಿಗೆ ತನ್ನ ಬ್ರ್ಯಾಂಡ್ ವಿಸ್ತರಿಸುವ ಗುರಿಯನ್ನು ಹೊಂದಿದೆ. ಚಂಡೀಗಢ, ಕೊಚ್ಚಿ ಮತ್ತು ಕೊಯಮತ್ತೂರು ಸೇರಿದಂತೆ ಉದಯೋನ್ಮುಖ ನಗರಗಳು ಸಹ ಪಟ್ಟಿಯಲ್ಲಿವೆ. ಪ್ರಮುಖ ಮೆಟ್ರೋ ಮಾರುಕಟ್ಟೆಗಳಲ್ಲಿ 6-10 ಪ್ರೀಮಿಯಂ ಔಟ್ಲೆಟ್ಗಳನ್ನು ಸ್ಥಾಪಿಸುವ ಗುರಿಯನ್ನು ಕಂಪನಿ ಹೊಂದಿವೆ. ಈ ವರ್ಷ ಪ್ರಮುಖ ಆರು ಮಳಿಗೆಗಳನ್ನು ಪ್ರಾರಂಭಿಸಲು ನಾಲ್ಕು ಮಾಲ್ಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಬೆಂಗಳೂರಲ್ಲಿ ಏಷ್ಯಾದ 2ನೇ ದೊಡ್ಡ 5 ಎಕರೆ ಅಮೆಜಾನ್ ಕಚೇರಿ : 7000 ನೌಕರರಿಗೆ ಸ್ಥಳಾವಕಾಶ
ಭಾರತದಲ್ಲಿ ಜಾಗತಿಕ ಮಟ್ಟದ ಡೆಸರ್ಟ್ ಗಳಿಗೆ ಬಹು ಬೇಡಿಕೆ ಇದೆ. ದಿ ಚೀಸ್ ಕೇಕ್ ಫ್ಯಾಕ್ಟರಿ ಬೇಕರಿಯನ್ನು ಭಾರತಕ್ಕೆ ತರುವುದು ಮಹತ್ವದ ಹೆಜ್ಜೆ. ಭಾರತೀಯರಿಗೆ ವಿಶ್ವಮಟ್ಟದ ಡೆಸರ್ಟ್ ಅನುಭವ ನೀಡುವುದು ನಮ್ಮ ಗುರಿ ಎಂದು ದಿ ಗೌರ್ಮೆಟ್ ಕೆಫೆಯ ಸಂಸ್ಥಾಪಕ ಮತ್ತು ಸಿಇಒ ಮಸ್ತಾನ್ ಆಡಮ್ ಹೇಳಿದ್ದಾರೆ.
ದಿ ಚೀಸ್ ಕೇಕ್ ಫ್ಯಾಕ್ಟರಿ ಬೇಕರಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಮೂಲ ರೆಸಿಪಿ ಮತ್ತು ಪ್ರೀಮಿಯಂ ಪದಾರ್ಥಗಳಿಂದ ತಯಾರಾಗುವ ಈ ಚೀಸ್ ಕೇಕ್ ಎಲ್ಲರಿಗೂ ಅಚ್ಚುಮೆಚ್ಚು. ಭಾರತದಲ್ಲಿ ಜಾಗತೀಕ ಟ್ರೆಂಡ್ ಹೆಚ್ಚಾಗ್ತಿದೆ. ಜನರು ಇದಕ್ಕೆ ಖರ್ಚು ಮಾಡಲು ಆಸಕ್ತಿ ತೋರ್ತಿದ್ದಾರೆ. ಹಾಗಾಗಿ ಕಂಪನಿ ಭಾರತೀಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಬೆಂಗಳೂರಿಗೆ ಎಂಟ್ರಿ ನೀಡ್ತಿದೆ. ಇನ್ನು ಬೆಂಗಳೂರಿನಲ್ಲಿ ನೆಲೆಗೊಂಡಿರುವ ದಿ ಗೌರ್ಮೆಂಟ್ ಕೆಫೆ, ಮಲ್ಟಿ ಬ್ರ್ಯಾಂಡ್ ಕೆಫೆಯಾಗಿದೆ. ಇದು ಗುಣಮಟ್ಟದ ಪದಾರ್ಥ, ಆಹಾರಕ್ಕೆ ಹೆಸರುವಾಸಿಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.