Gold Rate: Omicron ಭೀತಿ ಮಧ್ಯೆ ಚಿನ್ನದ ದರ ನೋಡೋದು ಮರೆತ್ರಾ? ಹೀಗಿದೆ ನೋಡಿ ಇಂದಿನ ಬೆಲೆ

Published : Dec 05, 2021, 11:29 AM ISTUpdated : Dec 05, 2021, 11:49 AM IST
Gold Rate: Omicron ಭೀತಿ ಮಧ್ಯೆ ಚಿನ್ನದ ದರ ನೋಡೋದು ಮರೆತ್ರಾ? ಹೀಗಿದೆ ನೋಡಿ ಇಂದಿನ ಬೆಲೆ

ಸಾರಾಂಶ

* ಚಿನ್ನ, ಬೆಳ್ಳಿ ದರ ಹೇಗಿದೆ? * ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ * ಹೀಗಿದೆ ಡಿಸೆಂಬರ್ 5, 2021ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

ಬೆಂಗಳೂರು(ಡಿ.05): ಚಿನ್ನ (Gold) ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ಅದರಲ್ಲೂ ಹೆಣ್ಮಕ್ಕಳಿಗೆ ಚಿನ್ನದ ಮೇಲೆ ವಿಶೇಷ ಪ್ರೀತಿ. ಹೇಳಿ ಕೇಳಿ ಮದುವೆ ಇನ್ನೇನು ಮದುವೆ ಸೀಜನ್ ಆರಂಭವಾಗೋದಿದೆ. ಹೀಗಾಗಿ ಚಿನ್ನ ಖರೀದಿ ಅನಿವಾರ್ಯವಾಗಿದೆ. ಇನ್ನು ಇತ್ತ ಈ ಶುಭ ಕಾರ್ಯಗಳಿಗೆ ಒಮಿಕ್ರಾನ್ ಭೀತಿ ತೊಡಕುಂಟು ಮಾಡುವ ಸಾಧ್ಯತೆ ಇದೆ. ಈಗಾಗಲೇ ತಜ್ಞರು ಈ ವಿಚಾರದಲ್ಲಿ ಎಚ್ಚರಿಕೆ ನಿಡಿದ್ದು, ಮೂರನೇ ಅಲೆ (Corona Third Wavew) ಆರಂಭವಾಗುವ ಸೂಚನೆ ನೀಡಿದ್ದಾರೆ. ಹೀಗಿರುವಾಗ ಜನರೂ ಏನು ಮಾಡೋದೆಂದು ತೋಚದೆ ಕಂಗಾಲಾಗಿದ್ದಾರೆ. ಹೀಗಿದ್ದರೂ ಚಿನ್ನದ ದರವೇನು? ಬೆಳ್ಳಿ ರೇಟ್ ಕಡಿಮೆಯಾಗಿದಾ ಎಂಬ ಕುತೂಹಲ ಹಲವರಲ್ಲಿ ಇರುತ್ತದೆ. ಹೀಗಿರುವಾಗ ಇಂದು 05 ಡಿಸೆಂಬರ್ 2021, ಭಾನುವಾರದ ಗೋಲ್ಡ್‌ ರೇಟ್‌ ಇಲ್ಲಿದೆ ನೋಡಿ.

ಒಮಿಕ್ರಾನ್ ಭೀತಿ ಆರಮಭವಾದಾಗಿನಿಂದಲೂ ಚಿನ್ನ, ಬೆಳ್ಳಿ ದರ ಹಾವೇಣಿ ಆಟ ಆರಂಭಿಸಿದೆ. ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಈ ಏರಿಉಳಿತದ ಆಟದ ಮಧ್ಯೆ ಚಿನ್ನ ಖರೀದಿಗೆ ಕೊಂಚ ಸಮಯ ಕಾಯೋದು ಸೂಕ್ತ ಎನ್ನುತ್ತಿದೆ ಇಂದಿನ ಗೋಲ್ಡ್‌ ರೇಟ್‌. ಹೌದು ಇಂದು ಚಿನ್ನದ ಬೆಲೆಯಲ್ಲಿ 10 ರೂ. ಹೆಚ್ಚಳವಾಗಿದೆ. ಹೀಗಿರುವಾಗ ಒಮಿಕ್ರಾನ್ ಆತಂಕದ ಮಧ್ಯೆ ಚಿನ್ನದ ದರ ಕುಸಿಯಲಿದೆ ಎಂಬ ಮಾತುಗಳು ಆರ್ಥಿಕ ತಜ್ಞರದ್ದಾಗಿದೆ. 

Bitcoin: ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿಇಂದು ನಿನ್ನೆಗಿಂತ 10 ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,760 ರೂ.ಇದ್ದು, ನಿನ್ನೆ 44,750ರೂ.ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 48,820 ರೂ.ಇದ್ದು,ಇಂದು 10ರೂ.ಏರಿಕೆಯಾಗಿ 48,830ರೂ.ಇದೆ. ಇನ್ನು ಕಳೆದ ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಬೆಳ್ಳಿ ದರದಲ್ಲಿಇಂದು ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆ.ಜಿ.ಬೆಳ್ಳಿಗೆ 61,600ರೂ. ಆಗಿದೆ.

ದೆಹಲಿಯಲ್ಲಿ (Delhi) ಹೇಗಿದೆ?

ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,910ರೂ.ಆಗಿದ್ದು, ನಿನ್ನೆ 46,900ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ. ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10 ರೂ. ಏರಿಕೆಯಾಗಿದೆ. ನಿನ್ನೆ 51,160 ರೂ. ಇತ್ತು,ಇಂದು 51,170ರೂ. ಆಗಿದೆ. ನಿನ್ನೆಇಳಿಕೆ ಕಂಡಿದ್ದ ಬೆಳ್ಳಿ ದರದಲ್ಲಿಇಂದು 500ರೂ.ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿ ದರದಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರ 61,600ರೂ. ಆಗಿದೆ. 

ಮುಂಬೈನಲ್ಲಿ(Mumbai) ಎಷ್ಟಿದೆ ದರ?

ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,500 ರೂ.ಇದ್ದು,ಇಂದು 10ರೂ, ಏರಿಕೆ ಕಂಡು 46,510ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,500ರೂ.ಇತ್ತು, ಇಂದು 10ರೂ.ಏರಿಕೆಯಾಗಿ 47,510ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ದರದಲ್ಲೂ ಯಾಔಉದೇ ಬದಲಾವಣೆಯಾಗಿಲ್ಲ. ಇಂದಿನ ಬೆಳ್ಳಿ ದರ 61,600ರೂ. ಆಗಿದೆ. 

EPFO Alert, ನೀವಿನ್ನೂ ಈ ಅಪ್ಡೇಟ್‌ ಮಾಡದಿದ್ದರೆ, ಮುಂದಿನ ತಿಂಗಳಿನಿಂದ EPF ಹಣ ಬಂದ್!

ಚೆನ್ನೈಯಲ್ಲಿ(Chennai) ದರ ಹೀಗಿದೆ

ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,120ರೂ.ಇದೆ. ನಿನ್ನೆ 45,110ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ. ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 10ರೂ. ಏರಿಕೆಯಾಗಿದೆ. ನಿನ್ನೆ 49,210 ರೂ.ಇತ್ತು,ಇಂದು 49,220 ರೂ.ಇದೆ. ಒಂದು ಕೆ.ಜಿ. ಬೆಳ್ದಳಿ ದರದಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ. ಇಂದಿನ ದರ 65,500ರೂ. ಆಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Jewellery: ಚಿನ್ನ ಖರೀದಿಸಲು ಈಗ ಲಕ್ಷಗಟ್ಟಲೆ ಹಣ ಬೇಕಿಲ್ಲ: ಹೀಗೆ ಪ್ಲಾನ್ ಮಾಡಿದ್ರೆ ಸಾಕು!
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?