Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ?

Suvarna News   | Asianet News
Published : Dec 06, 2021, 12:30 PM ISTUpdated : Dec 06, 2021, 03:06 PM IST
Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ?

ಸಾರಾಂಶ

ಚಿನ್ನ ದರ ಇಂದು ಇಳಿಕೆಯಾಗಬಹುದೆಂದು ನಿರೀಕ್ಷಿಸುತ್ತಿರೋರಿಗೆ ನಿರಾಸೆ ಮೂಡಿದೆ. ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ಬೆಳ್ಳಿ ದರ ಕೊಂಚ ಏರಿಕೆ ಕಂಡಿದೆ.

ಬೆಂಗಳೂರು (ಡಿ.6): ಚಿನ್ನ(Gold) ಹಾಗೂ ಬೆಳ್ಳಿಯೊಂದಿಗೆ (Silver) ಭಾರತೀಯರಿಗೆ (Indians) ಭಾವನಾತ್ಮಕ ಸಂಬಂಧವಿದೆ.  ಶುಭ ಸಮಾರಂಭದಿಂದ ಹಿಡಿದು ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಚಿನ್ನ ಹಾಗೂ ಬೆಳ್ಳಿ ಆಭರಣಗಳು (Ornaments),ವಸ್ತುಗಳನ್ನು ಬಳಸುತ್ತೇವೆ. ಕೆಲವರು ಹೂಡಿಕೆಗೂ(Investments)ಚಿನ್ನವನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಚಿನ್ನ ಹಾಗೂ ಬೆಳ್ಳಿ ದರದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಕೊರೋನಾ(Corona) ಮಹಾಮಾರಿ ಜಗತ್ತಿಗೆ ಕಾಲಿಟ್ಟ ಬಳಿಕ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿತ್ತು. ಆದ್ರೆ ಈ ವರ್ಷದ ಪ್ರಾರಂಭದಿಂದ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆಯತ್ತ ಮುಖ ಮಾಡಿ, ಸ್ಥಿರತೆ ಕಾಯ್ದುಕೊಂಡಿದೆ. ಈ ಮಧ್ಯೆ ಕೊರೋನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳು ಪ್ರಾರಂಭಗೊಂಡಿದ್ದವು. ಈ ಹಿನ್ನಲೆಯಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆಯೂ ಹೆಚ್ಚಿತ್ತು. ಆದ್ರೆ  ಈಗ ಒಮಿಕ್ರಾನ್(Omicron) ವೈರಸ್(Virus) ಪ್ರಕರಣಗಳು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಮತ್ತೆ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ತಗ್ಗೋ ಸಾಧ್ಯತೆಯಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ವ್ಯತ್ಯಾಸ ಕಂಡು ಬರೋ ಸಾಧ್ಯತೆಯೂ ಇದೆ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ವ್ಯತ್ಯಯವಾದ್ರೆ ಅದು ದೇಶೀಯ ಮಾರುಕಟ್ಟೆ ಮೇಲೂ ಪ್ರಭಾವ ಬೀರುತ್ತದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ದೇಶದ ಪ್ರಮುಖ ನಗರಗಳ ಇಂದಿನ  (ಡಿ.6) ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ. 

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ನಿನ್ನೆಯಷ್ಟೇ ಇದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಗೆ ಇಂದು  44,760ರೂ.ಇದ್ದು, ನಿನ್ನೆ ಕೂಡ ಇಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 48,830 ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿಇಂದು 100ರೂ. ಏರಿಕೆ  ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,600ರೂ.ಇತ್ತು.ಆದ್ರೆ ಇಂದು 61,700ರೂ.ಗೆ ಏರಿಕೆಯಾಗಿದೆ. 

ನಷ್ಟದಲ್ಲಿರೋ ವ್ಯಾಪಾರಕ್ಕೆ ಲಾಭ ತರೋ 'ಯಂತ್ರ'ಗಳು

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,920ರೂ.ಆಗಿದ್ದು,ನಿನ್ನೆ 49,910ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ.ಏರಿಕೆಯಾಗಿದೆ. ನಿನ್ನೆ 51,170 ರೂ. ಇತ್ತು,ಇಂದು 51,180ರೂ. ಆಗಿದೆ. ಬೆಳ್ಳಿ ದರದಲ್ಲಿಇಂದು 100ರೂ.ಏರಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 61,600ರೂ.ಇತ್ತು.ಆದ್ರೆ ಇಂದು 61,700ರೂ. ಆಗಿದೆ. 

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,510ರೂ.ಇದ್ದು,ಇಂದು 10ರೂ. ಏರಿಕೆ ಕಂಡು 46,520ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,510ರೂ.ಇತ್ತು,ಇಂದು 10ರೂ. ಏರಿಕೆಯಾಗಿ 47,520ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,600ರೂ.ಇತ್ತು.ಆದ್ರೆ ಇಂದು 61,700ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು ಕೇವಲ 100 ರೂ.ಏರಿಕೆಯಾಗಿದೆ.

ರಿಲಯನ್ಸ್‌ ವಿರುದ್ಧ ಸಿಡಿದ 4.50 ಲಕ್ಷ ಸೇಲ್ಸ್‌ಮನ್‌!

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,080ರೂ.ಇದೆ. ನಿನ್ನೆ 45,1200ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 40ರೂ. ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 40ರೂ. ಇಳಿಕೆಯಾಗಿದೆ. ನಿನ್ನೆ 49,220 ರೂ.ಇತ್ತು,ಇಂದು 49,180 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,500ರೂ.ಇದ್ದು, ಇಂದು 65,600ರೂ. ಆಗಿದೆ. ಅಂದ್ರೆ 100ರೂ. ಏರಿಕೆಯಾಗಿದೆ.  

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!