ಇನ್ನೊಂದೇ ದಿನ 7 ಬ್ಯಾಂಕುಗಳ ಹಳೆ ಚೆಕ್‌ ಬುಕ್‌ ನಡೆಯಲ್ಲ , ನೌಕರರ ಕೈಗೆ ಸಿಗುವ ವೇತನ ಕುಸಿತ!

Published : Mar 31, 2021, 07:39 AM ISTUpdated : Mar 31, 2021, 07:59 AM IST
ಇನ್ನೊಂದೇ ದಿನ 7 ಬ್ಯಾಂಕುಗಳ ಹಳೆ ಚೆಕ್‌ ಬುಕ್‌ ನಡೆಯಲ್ಲ , ನೌಕರರ ಕೈಗೆ ಸಿಗುವ ವೇತನ ಕುಸಿತ!

ಸಾರಾಂಶ

ನಾಳೆಯಿಂದ 6 ಬದಲಾವಣೆ| 7 ಬ್ಯಾಂಕುಗಳ ಹಳೆ ಚೆಕ್‌ ಬುಕ್‌ ನಡೆಯಲ್ಲ| ನೌಕರರ ಕೈಗೆ ಸಿಗುವ ವೇತನ ಕುಸಿತ| ಹೊಸ ಹಣಕಾಸು ವರ್ಷ ಪ್ರಾರಂಭ| ದೈನಂದಿನ ಆರ್ಥಿಕ ವ್ಯವಹಾರದಲ್ಲಿ ಪ್ರಮುಖ ವ್ಯತ್ಯಾಸ

ನವದೆಹ(ಮಾ.31)ಲಿ: ಏಪ್ರಿಲ್‌ 1ರಿಂದ ಎಂದಿನಂತೆ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಹೀಗಾಗಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಜತೆಗೆ ಕೆಲವೊಂದು ನಿಯಮಗಳು ಬದಲಾಗುತ್ತಿವೆ. ಹೀಗಾಗಿ ದೈನಂದಿನ ಆರ್ಥಿಕ ವ್ಯವಹಾರದ ಮೇಲೆ ಪರಿಣಾಮ ಬೀರಬಹುದಾದ 6 ಬದಲಾವಣೆಗಳನ್ನು ಇಲ್ಲಿ ನೀಡಲಾಗಿದೆ.

1. ಆಧಾರ್‌- ಪಾನ್‌ ಜೋಡಣೆಗೆ ಇಂದೇ ಕೊನೆ ದಿನ. ಈಗಲೂ ಆಲಸ್ಯ ತೋರಿದರೆ ನಾಳೆಯಿಂದ 1000 ರು. ದಂಡ

2. ದೇನಾ, ವಿಜಯಾ, ಕಾರ್ಪೋರೇಷನ್‌, ಓರಿಯಂಟಲ್‌, ಯುನೈಟೆಡ್‌, ಅಲಹಾಬಾದ್‌ ಬ್ಯಾಂಕ್‌ ಚೆಕ್‌ಬುಕ್‌ ನಡೆಯಲ್ಲ

3. ಭವಿಷ್ಯ ನಿಧಿ (ಇಪಿಎಫ್‌)ಯಲ್ಲಿ ವಾರ್ಷಿಕ 2.5 ಲಕ್ಷ ರು.ಗಿಂತ ಅಧಿಕ ಹೂಡಿಕೆ ಮಾಡಿದರೆ, ಅದಕ್ಕೆ ಲಭಿಸುವ ಬಡ್ಡಿಗೆ ತೆರಿಗೆ

4. ಹೊಸ ವೇತನ ನೀತಿ ಜಾರಿ. ನೌಕರರ ಮೂಲ ವೇತನ 50%ಗಿಂತ ಅಧಿಕ ಇರಬೇಕು. ಹೀಗಾಗಿ ಕೈಗೆ ಸಿಗುವ ಸಂಬಳ ಇಳಿಕೆ

5. ಆದಾಯ ತೆರಿಗೆ ಪಾವತಿ ಮಾಡದ ನೌಕರ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರೆ ಬಡ್ಡಿಗೆ ವಿಧಿಸುತ್ತಿದ್ದ ಟಿಡಿಎಸ್‌ ದುಪ್ಪಟ್ಟು ಏರಿಕೆ

6. ಇಂಟರ್ನೆಟ್‌ ಬ್ಯಾಂಕಿಂಗ್‌, ಯುಪಿಐ ಮೂಲಕ ಆಟೋ ಪೇಮೆಂಟ್‌ ವ್ಯವಸ್ಥೆಗೆ ದೃಢೀಕರಣ ಅಗತ್ಯ. ಇಲ್ಲದಿದ್ದರೆ ಪೇಮೆಂಟ್‌ ಆಗದು

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌