ಸ್ಟೋರ್‌ ರೂಂನಲ್ಲಿದ್ದು ಗೇಮ್ ಆಡುತ್ತಾ ತಿಂಗಳಿಗೆ 36 ಲಕ್ಷ ರೂ. ಸಂಪಾದನೆ!

By Suvarna NewsFirst Published Mar 29, 2021, 4:21 PM IST
Highlights

ಗೇಮ್ ಆಡುತ್ತಾ ಮೂವತ್ತಾರು ಲಕ್ಷ ರೂಪಾಯಿ ಗಳಿಸುತ್ತಾನೆ ಈತ| ಪ್ರತಿ ದಿನ ಹದಿನೈದು ಗಂಟೆ ಗೇಮ್ ಆಡೋದ್ರಲ್ಲಿ ಕಳೆಯುತ್ತಾನೆ| ಪುಟ್ಟ ಕೋಣೆಯೇ ಈತನ ಲೋಕ

ಸಿಯೋಲ್(ಮಾ.29): ಗೇಮಿಂಗ್ ವಿಚಾರವಾಗಿ ಜನರಲ್ಲಿ ದಿನೇ ದಿನೇ ಆಸಕ್ತಿ ಹೆಚ್ಚುತ್ತಿದೆ. ಅದರಲ್ಲೂ ವಿಶೇಷವಾಗಿ ಕೊರೋನಾ ಸಂದರ್ಭದಲ್ಲಿ ಹೇರಲಾದ ಲಾಕ್‌ಡೌನ್ ವೇಳೆ ಗೇಮಿಂಗ್ ಎಂಬ ಲೋಕ ಮತ್ತಷ್ಟು ಗಮನಸೆಳೆಯಿತು. ಸುಮ್ಮನಿದ್ದು ಏನು ಮಾಡುವುದು ಎಂದು ಮೊಬೈಲ್ ಹಾಗೂ ಇಂಟರ್ನೆಟ್‌ ಬಳಸಿ ಗೇಮ್ ಆಡುತ್ತಾ ಕುಳಿತವರು ಹಲವರು. ಹೀಗಿರುವಾಗ  Kim Min-kyo ಎಂಬಾತನೂ ಈ ಸಂದರ್ಭದ ಲಾಭ ಪಡೆದುಕೊಂಡಿದ್ದಾನೆ. ಪ್ರತಿ ದಿನ ಈತ ಹದಿನೈದು ಗಂಟೆ ಗೇಮ್ ಆಡುತ್ತಾನೆ. ದಕ್ಷಿಣ ಕೊರಿಯಾದ ನಾಗರಿಕನಾಗಿರುವ ಕಿಮ್ ಗೇಮ್ ಆಡುತ್ತಲೇ ಹಣ ಗಳಿಸುತ್ತಾನೆ. ಅದು ಕೂಡಾ ಕಡಿಮೆ ಮೊತ್ತವಲ್ಲ ಬರೋಬ್ಬರಿ ಮೂವತ್ತೈದು ಲಕ್ಷ.

ಸ್ಟೋರ್‌ ರೂಂನಲ್ಲೇ ಗೇಮ್‌:

ಕಿಮ್‌ ಗೇಮಿಂಗ್ ಕ್ಷೇತ್ರದಲ್ಲಿ ತನ್ನ ಭವಿಷ್ಯ ಕಾಣುತ್ತಾನೆ. ಅಲ್ಲದೇ ಈತ ತನ್ನ ಗೇಮ್‌ನ ಲೈವ್‌ ಸ್ಟ್ರೀಮಿಂಗ್ ಕೂಡಾ ಮಾಡುತ್ತಾನೆ. ಹೀಗಾಗೇ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ತನ್ನ ತಾಯಿ ಮನೆಯಲ್ಲಿರುವ ಈತ, ಅಲ್ಲಿನ ಸ್ಟೋರ್‌ ರೂಂನ್ನೇ ಗೇಮಿಂಗ್ ರೂಂ ಆಗಿ ಮಾರ್ಪಾಡು ಮಾಡಿದ್ದಾನೆ. ಇಲ್ಲಿಂದಲೇ ಆತ ತಿಂಗಳಿಗೆ ಮೂವತ್ತಾರು ಲಕ್ಷ ಸಂಪಾದಿಸುತ್ತಾನೆ. 

ಈ ಕೋಣೆಯೇ ಆತನ ಮನೆ

24 ವರ್ಷದ ಕಿಮ್ ಒಂದೇ ಕೋಣೆಯಲ್ಲಿರುತ್ತಾನೆ. ಇನ್ನು ಹಣವನ್ನು ಖರ್ಚು ಮಾಡುವುದು, ಗಾಡಿ ಕ್ರೇಜ್ ಇಲ್ಲದ ಈತ, ತಾನು ಸಂಪಾದನೆ ಮಾಡಿದ ಹಣವನ್ನು ತಾಯಿಯೇ ಮ್ಯಾನೇಜ್ ಮಾಡುತ್ತಾರೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

72 ಲಕ್ಷದವರೆಗೂ ಗಳಿಕೆ:

ಲೈವ್ ಸ್ಟ್ರೀಮಿಂಗ್ ಮಾಡುವವರನ್ನು ದಕ್ಷಿಣ ಕೊರಿಯಾದಲ್ಲಿ  Broadcast Jockeys ಎನ್ನುತ್ತಾರೆ. ನೋಡುಗರಿಗೆ ಮನರಂಜನೆ ನೀಡುವುದೇ ಇವರ ಕಾಯಕ. ಸಂಗೀತ, ಡಾನ್ಸ್, ಊಟ ಹೀಗೆ ಯಾವುದೇ ಕ್ಷೇತ್ರವಿರಲಿ ಮನರಂಜನೆ ನೀಡುವುದು ಮುಖ್ಯ. ಹೀಗಿರುವಾಗ ಈ ಕೆಲಸ ಮಾಡಿ ಕೆಲವರು ತಿಂಗಳಿಗೆ ಸುಮಾರು 72 ಲಕ್ಷ ಹಣ ಗಳಿಸುತ್ತಾರೆ.

click me!