
ನವದೆಹಲಿ (ಆ.23): ಭಾರತ ಮಾತ್ರವಲ್ಲ, ಇಡೀ ಜಗತ್ತೇ ಇಂದು ಈ ಕ್ಷಣಕ್ಕಾಗಿ ಕಾದು ಕುಳಿತಿದೆ. ಭಾರತದ ಚಂದ್ರಯಾನ-3 ನೌಕೆ ಕೆಲವೇ ಗಂಟೆಗಳಲ್ಲಿ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ. ಈ ಮೂಲಕ ಭಾರತ ಹೊಸ ಇತಿಹಾಸ ನಿರ್ಮಿಸಲಿದೆ ಕೂಡ. ಇಂಥ ಸಮಯದಲ್ಲಿ ಈ ಚಂದ್ರಯಾನ-3 ಮಿಷನ್ ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಜೊತೆಗೆ ಸಾಥ್ ನೀಡಿದವರನ್ನು ನೆನಪಿಸಿಕೊಳ್ಳಲೇಬೇಕು. ಚಂದ್ರಯಾನ-3 ಇಸ್ರೋ ಕೂಸಾಗಿದ್ದರೂ ಅದಕ್ಕೆ ಬೆಂಬಲವಾಗಿ ಅನೇಕ ಭಾರತೀಯ ಕಂಪನಿಗಳು ನಿಂತಿವೆ. ಇಸ್ರೋ ಈ ಯಾನಕ್ಕೆ ಈ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ಒದಗಿಸಿವೆ ಕೂಡ. ಅಲ್ಲದೆ, ಕೆಲವು ಕಂಪನಿಗಳು ಚಂದ್ರಯಾನ-3 ಬಾಹ್ಯಾಕಾಶ ನೌಕೆ ನಿರ್ಮಾಣಕ್ಕೆ ಅಗತ್ಯವಾದ ಸಾಧನಗಳನ್ನು ಸಿದ್ಧಪಡಿಸಿ ನೀಡಿವೆ. ಮೂರು ವರ್ಷಗಳ ರಿಟರ್ನ್ ಅನ್ನು ಈ ಕಂಪನಿಗಳು ಚಂದ್ರಯಾನಕ್ಕೆ ಅರ್ಪಿಸಿದ್ದವು ಕೂಡ. ಹಾಗಾದ್ರೆ ಚಂದ್ರಯಾನ-3 ಸಿದ್ಧತೆ ಹಾಗೂ ಉಡಾವಣೆಯಲ್ಲಿ ಇಸ್ರೋಗೆ ಬೆನ್ನೆಲುಬಾಗಿ ನಿಂತ ಈ ಕಂಪನಿಗಳು ಯಾವುವು? ಇವುಗಳ ಕೊಡುಗೆ ಏನು? ಹಾಗೆಯೇ ಮೂರು ವರ್ಷಗಳಲ್ಲಿ ಈ 10 ಲಿಸ್ಟೆಡ್ ಕಂಪನಿಗಳ ರಿಟರ್ನ್ಸ್ ನಲ್ಲಿ ಎಷ್ಟು ಹೆಚ್ಚಳವಾಗಿದೆ?
ಚಂದ್ರಯಾನಕ್ಕೆ ಕೊಡುಗೆ ನೀಡಿದ ಕಂಪನಿಗಳು:
ಚಂದ್ರಯಾನ -3 ಮಿಷನ್ ಗೆ ಕೊಡುಗೆಯಾಗಿ ನೀಡಿದ ಕಂಪನಿಗಳಲ್ಲಿ ಲಾರ್ಸೆನ್ & ಟೊರ್ಬೋ (L&T) ಕೂಡ ಸೇರಿದೆ. ಈ ಕಂಪನಿ ಪ್ರಮುಖ ಬೂಸ್ಟರ್ ಸಾಧನಗಳಾದ ಹೆಂಡ್ ಎಂಡ್ ಸೆಗ್ಮೆಂಟ್, ನೇಜಲ್ ಬಕೆಟ್ ಫ್ಲಾಂಜ್ ಒದಗಿಸಿವೆ. ಇವುಗಳನ್ನು ಪೊವೈ ಎಲ್ ಆಂಡ್ ಟಿ ಘಟಕದಲ್ಲಿ ಪರೀಕ್ಷಿಸಲಾಗಿತ್ತು ಕೂಡ. ಗ್ರೌಂಡ್ ಹಾಗೂ ಫ್ಲೈಟ್ ಉಂಬ್ಲಿಕಲ್ ಪ್ಲೇಟ್ಸ್ ಅನ್ನು ಕೂಡ ಎಲ್ ಆಂಡ್ ಟಿ ಪೂರೈಸಿದೆ. ಇದನ್ನು ಕೊಯಮತ್ತೂರಿನ ಹೈ-ಟೆಕ್ ಏರೋಸ್ಪೇಸ್ ಕೇಂದ್ರದಲ್ಲಿ ತಯಾರಿಸಲಾಗಿದೆ.
ಚಂದ್ರಯಾನ-3ಕ್ಕೆ ಬಿಡಿಭಾಗ ಕೊಟ್ಟಿದ್ದು ಬೆಳಗಾವಿ ಮೂಲದ ಕಂಪನಿ; ಟೀಂ ನಲ್ಲಿದ್ದಾನೆ ಜಿಲ್ಲೆಯ ಯುವ ವಿಜ್ಞಾನಿ
ಬಿಎಚ್ ಇಎಲ್ ಚಂದ್ರಯಾನ-3 ಮಿಷನ್ ಗೆ ಬ್ಯಾಟರಿಗಳನ್ನು ಪೂರೈಕೆ ಮಾಡಿದೆ. ಈ ಮಿಷನ್ ಗೆ ಬೈ ಮೆಟಾಲಿಕ್ ಅಡಾಪ್ಟರ್ ಗಳನ್ನು ಪೂರೈಕೆ ಮಾಡುವಲ್ಲಿ ಬಿಎಚ್ ಇಎಲ್ ನ ವೆಲ್ಡಿಂಗ್ ರಿಸರ್ಚ್ ಇನ್ಸಿಟಿಟ್ಯೂಟ್ (ಡಬ್ಲ್ಯು ಆರ್ ಐ) ಮಹತ್ವದ ಪಾತ್ರ ನಿರ್ವಹಿಸಿದೆ. ವರದಿಗಳ ಪ್ರಕಾರ ಡಬ್ಲ್ಯು ಆರ್ ಐ ಪೂರೈಕೆ ಮಾಡಿರುವ ವಸ್ತುಗಳನ್ನು ಚಂದ್ರಯಾನ -3ಯ ಎಲ್ ವಿಎಂ-3M4 ಕ್ರಯೋಜೆನಿಕ್ ಹಂತದಲ್ಲಿ ಬಳಸಲಾಗಿದೆ.
ಮಿಶ್ರ ಧಾತು ನಿಗಮ ಕೋಬಾಲ್ಟ್ ಬೇಸ್ ಅಲಾಯ್ಸ್, ನಿಕ್ಕಲ್ ಬೇಸ್ ಅಲಾಯ್ಸ್, ಟಿಟಾನಿಯಂ ಅಲಾಯ್ಸ್ ಹಾಗೂ LVM3/M4 ವಿವಿಧ ಸಾಧನಗಳಿಗೆ ವಿಶೇಷ ಉಕ್ಕುಗಳನ್ನು ಪೂರೈಕೆ ಮಾಡಿದೆ. ಚಂದ್ರಯಾನ-3 ಮಿಷನ್ ಗೆ ನೆರವು ನೀಡಲು ಎಚ್ ಎಎಲ್ ಅನೇಕ ಸಾಧನಗಳನ್ನು ಪೂರೈಕೆ ಮಾಡಿದೆ. ವಾಲ್ ಚಂದ್ ನಗರ್ ಇಂಡಸ್ಟ್ರೀಸ್ S200 ಬೂಸ್ಟರ್ ಸೆಗ್ಮೆಂಟ್ ಗಳನ್ನು ಉತ್ಪಾದಿಸಿ ಪೂರೈಕೆ ಮಾಡಿದೆ. ಇನ್ನು ಎಂಟಿಎಆರ್ ಟೆಕ್ನಾಲಜೀಸ್ ಕೂಡ ಚಂದ್ರಯಾನ ಮಿಷನ್ ಗೆ ಅಗತ್ಯವಾದ ಪ್ರಮುಖ ಭಾಗಗಳನ್ನು ಸಿದ್ಧಪಡಿಸಿ ನೀಡಿದೆ.
ಈ ಕಂಪನಿಗಳ ರಿಟರ್ನ್ಸ್ ಎಷ್ಟು ಏರಿಕೆ ಕಂಡಿದೆ?
ಎಲ್ ಆಂಡ್ ಟಿ ರಿಟರ್ನ್ಸ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೇ.170ಕ್ಕೂ ಅಧಿಕ ಹೆಚ್ಚಳವಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಕಳೆದ ಮೂರು ವರ್ಷಗಳಲ್ಲಿ ಶೇ.200 ರಿಟರ್ನ್ಸ್ ನೀಡಿದೆ. ಇನ್ನು ಬಿಎಚ್ ಇಎಲ್ ಈ ಅವಧಿಯಲ್ಲಿ ಶೇ.172ರಷ್ಟು ಬೆಳವಣಿಗೆ ದಾಖಲಿಸಿದೆ. ಇನ್ನು ಮಿಶ್ರ ಧಾತು ನಿಗಮ ಲಿಮಿಟೆಡ್ ರಿಟರ್ನ್ಸ್ ನಲ್ಲಿ ಶೇ.83ರಷ್ಟು ಏರಿಕೆಯಾಗಿದೆ. ಹಾಗೆಯೇ ವಾಲ್ ಚಂದ್ ನಗರ್ ಇಂಡಸ್ಟ್ರೀಸ್ ರಿಟರ್ನ್ಸ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೇ.66ರಷ್ಟು ಏರಿಕೆಯಾಗಿದೆ.
ADITYA-L1: ಚಂದ್ರಯಾನದ ಬಳಿಕ ಇಸ್ರೋದ ‘ಸೂರ‍್ಯಯಾನ!
ಇನ್ನು ಚಂದ್ರಯಾನಕ್ಕೆ ಬೆಂಬಲ ನೀಡಿರುವ ಸೆಂಟಮ್ ಎಲೆಕ್ಟ್ರಾನಿಕ್ಸ್ ರಿಟರ್ನ್ಸ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ಶೇ.300ರಷ್ಟು ಹೆಚ್ಚಳವಾಗಿದೆ. ಕೆಮಿಕಲ್ಸ್ ಕಂಪನಿ ಲಿಂಡೆ ಇಂಡಿಯಾ ರಿಟರ್ನ್ಸ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾವಿರಕ್ಕೂ ಅಧಿಕ ಹೆಚ್ಚಳ ಕಂಡುಬಂದಿದೆ. ಪರಸ್ ರಕ್ಷಣಾ ಹಾಗೂ ಬಾಹ್ಯಾಕಾಶ ಟೆಕ್ನಾಲಜೀಸ್ ರಿಟರ್ನ್ಸ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೇ.2ರಷ್ಟು ಏರಿಕೆ ಕಂಡುಬಂದಿದೆ. ಹಾಗೆಏ ಎಂಟಿಎಆರ್ ಟೆಕ್ನಾಲಜೀಸ್ ರಿಟರ್ನ್ಸ್ ನಲ್ಲಿ ಶೇ.41.2ರಷ್ಟು ಏರಿಕೆಯಾಗಿದೆ. ಗೋದ್ರೇಜ್ ಇಂಡಸ್ಟ್ರೀಸ್ ರಿಟರ್ನ್ಸ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೇ.15ರಷ್ಟು ಏರಿಕೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.