ಭಿಕ್ಷಾಟನೆಯೇ ಬ್ಯುಸಿನೆಸ್: ಲಕ್ಷಾಂತರ ಮೌಲ್ಯದ ಮನೆ ಆಸ್ತಿ ಖರೀದಿಸಿದ ಖತರ್ನಾಕ್ ಸೋದರರು

Published : Aug 23, 2023, 02:52 PM ISTUpdated : Aug 23, 2023, 02:58 PM IST
ಭಿಕ್ಷಾಟನೆಯೇ ಬ್ಯುಸಿನೆಸ್: ಲಕ್ಷಾಂತರ ಮೌಲ್ಯದ ಮನೆ ಆಸ್ತಿ ಖರೀದಿಸಿದ ಖತರ್ನಾಕ್ ಸೋದರರು

ಸಾರಾಂಶ

ತೆಲಂಗಾಣದಲ್ಲಿ ಪೊಲೀಸರು ಭಿಕ್ಷಾಟನೆಯನ್ನೇ ದಂಧೆಯಾಗಿಸಿಕೊಂಡಿದ್ದ ಬೃಹತ್ ಜಾಲವನ್ನು ಬೇಧಿಸಿದ್ದು, ಹಲವರನ್ನು ಬಂಧಿಸಿದ್ದಾರೆ. ಇವರಿಂದ ಲಕ್ಷಾಂತರ ಮೌಲ್ಯದ ಆಸ್ತಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಹೈದರಾಬಾದ್‌: ತೆಲಂಗಾಣದಲ್ಲಿ ಪೊಲೀಸರು ಭಿಕ್ಷಾಟನೆಯನ್ನೇ ದಂಧೆಯಾಗಿಸಿಕೊಂಡಿದ್ದ ಬೃಹತ್ ಜಾಲವನ್ನು ಬೇಧಿಸಿದ್ದು, ಹಲವರನ್ನು ಬಂಧಿಸಿದ್ದಾರೆ. ಇವರಿಂದ ಲಕ್ಷಾಂತರ ಮೌಲ್ಯದ ಆಸ್ತಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸಂಘಟಿತ ಭಿಕ್ಷಾಟನೆ ವಿರುದ್ಧ ಹೈದರಾಬಾದ್‌ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆಯೊಂದಿಗೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.  ಈ ಭಿಕ್ಷಾಟನೆ ದಂಧೆಯ ಮುಂದಾಳತ್ವ ವಹಿಸಿದ್ದ ಸೋದರರಿಬ್ಬರು 80 ಲಕ್ಷ ಮೌಲ್ಯದ ಆಸ್ತಿಯನ್ನೇ ಖರೀದಿಸಿದ್ದರು ಎಂಬ ಅಶ್ಚರ್ಯಕಾರಿ ಬಯಲಾಗಿದೆ. 

ಹೈದರಾಬಾದ್‌  (Hyderabad) ನಗರದ ಆಗ್ನೇಯ ವಲಯ ಹಾಗೂ ಮಲಕ್‌ಪೇಟ್ (Malakpet) ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು,  ಈ ಭಿಕ್ಷಾಟನೆ ದಂಧೆಯಲ್ಲಿ ಏಜೆಂಟ್‌ಗಳಾಗಿದ್ದ 10 ಜನರನ್ನು ಬಂಧಿಸಿದ್ದಾರೆ. ನಿರುದ್ಯೋಗಿ ಅಸಹಾಯಕ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿಕೊಂಡಿದ್ದ ಇವರು ಕಮೀಷನ್ ನೀಡುವ ನೆಪವೊಡ್ಡಿ ಭಿಕ್ಷಾಟನೆ ಮಾಡುವಂತೆ ಅವರಿಗೆ ಆಮಿಷವೊಡ್ಡುತ್ತಿದ್ದರು. ಇವರಲ್ಲಿ ಪ್ರಮುಖ ಆರೋಪಿಗಳಾದ ಕೇತವಾತ್ ರವಿ ಹಾಗೂ ಕೇತಾವರ್ ಮಂಗು ಸಹೋದರರು ಹಾಗೂ ಕಲೆಕ್ಷನ್ ಏಜೆಂಟ್‌ಗಳಾಗಿದ್ದು, ಚಾರಿಟಿ (Charity) ಹೆಸರಿನಲ್ಲಿ  ಹಣ ಸಂಗ್ರಹಿಸಲು ಪ್ರೇರೆಪಿಸುತ್ತಿದ್ದರು. 

ಹೆಣ್ಣಿನ ವೇಷದಲ್ಲಿ ಭಿಕ್ಷಾಟನೆ ಮಾಡಿ ಮನೆಯನ್ನೇ ಕಟ್ಟಿದ!

ಅಮ್ಮ ಚೇಯಿತಾ ಫೌಂಡೇಶನ್ ಹೆಸರಿನಲ್ಲಿ ನಕಲಿ ಚಾರಿಟಿಯೊಂದನ್ನು ಸ್ಥಾಪಿಸಿದ್ದ ಇವರು ನಿಗರ್ತಿಕರ ಹೆಸರಿನಲ್ಲಿ ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ರಸ್ತೆಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಬಸ್‌ ನಿಲ್ದಾಣಗಳಲ್ಲಿ ತಾವು ನೇಮಿಸಿದವರ ಮೂಲಕ ಹಣ ಸಂಗ್ರಹಿಸುತ್ತಿದ್ದರು.  ನಾದರ್‌ಗುಲ್, ಬಡಂಗ್‌ಪೇಟ್ ಮತ್ತು ತುರ್ಕಯಂಜಾಲ್ ಸೇರಿದಂತೆ ಹಲವೆಡೆ ಭಿಕ್ಷಾಟನೆ ನಡೆಸುತ್ತಿದ್ದರು. ಭಿಕ್ಷಾಟನೆ ಮಾಡುತ್ತಿದ್ದವರಿಗೆ ಕಮೀಷನ್ ನೀಡುತ್ತಿದ್ದರು. ಹೀಗೆ ಸಂಗ್ರಹಿಸಿದ ಹಣದಲ್ಲಿ ಅವರು 80 ಲಕ್ಷ ಮೌಲ್ಯದ ಆಸ್ತಿಯನ್ನೇ ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಮುಖ ಆರೋಪಿಗಳಾದ ಕೇತಾವತ್ ರವಿ (Kethavath Ravi) ಮತ್ತು ಆತನ ಸಹೋದರ ಕೇತಾವತ್ ಮಂಗು  (Kethavath Mangu) ಮತ್ತೊಬ್ಬ ಆರೋಪಿಯಾದ ಗಡ್ಡಿ ಗಣೇಶ್‌ ಎಂಬಾತನನ್ನು  2020 ರಲ್ಲಿ ಎಲ್‌ ಬಿ ನಗರದ ಮನ್ಸೂರಾಬಾದ್‌ನಲ್ಲಿ ಭೇಟಿಯಾಗಿದ್ದರು. ಈ ಗಡ್ಡಿ ಗಣೇಶ್‌ ಇಲ್ಲಿನ ಕಾಮಿನೇನಿ ಆಸ್ಪತ್ರೆಯ ಹಿಂದೆ ಕಚೇರಿ ಹೊಂದಿದ್ದ. ಈ ಮೂವರು ಸೇರಿ,  ಅಮ್ಮ ಛೆಯಿತೊ ಫೌಂಡೇಶನ್ ಹೆಸರಿನಲ್ಲಿ ಈ ಸಂಘಟಿತ ಭಿಕ್ಷಾಟನೆಯ ಪ್ಲಾನ್ ಮಾಡಿ ಇದಕ್ಕಾಗಿ ಜನರನ್ನು ನೇಮಿಸಿದ್ದರು. ನಿರ್ಗತಿಕರು ಹಾಗೂ ವಿಶೇಷಚೇತನರನ್ನು ಈ ಸಂಘಟನೆಯಡಿ ನೋಡಿಕೊಳ್ಳುತ್ತಿರುವುದಾಗಿ  ಹೇಳಿಕೊಳ್ಳುತ್ತಿದ್ದರು ಎಂದು ಅಗ್ನೇಯ ಡಿಸಿಪಿ ಸಿ.ಹೆಚ್ ರೂಪೇಶ್ ಹೇಳಿದ್ದಾರೆ. 

ಯಕ್ಷಗಾನ ತರಬೇತಿ ಪಡೆದ ಮಂಗಳಮುಖಿಯರು: ಭಿಕ್ಷಾಟನೆ ಬಿಟ್ಟು ಕಲಾವಿದರಾಗಿ ಮಾರ್ಪಾಡು

ಪ್ರಮುಖ ಆರೋಪಿ ಗಣೇಶ್  ಇತರ 8 ಜನ ಆರೋಪಿಗಳಿಗೆ ಭಿಕ್ಷಾಟನೆಗೆ ಕಲೆಕ್ಷನ್ ಬಾಕ್ಸ್, ಗುರುತಿನ ಚೀಟಿ, ವಿಸಿಟಿಂಗ್ ಕಾರ್ಡ್ ನೀಡಿ ಅವರಿಗೆ ಹೇಗೆ ಭಿಕ್ಷಾಟನೆ ಮಾಡಬೇಕು ಎಂದು ನಿರ್ದೇಶನ ನೀಡುತ್ತಿದ್ದ. ಇದಕ್ಕಾಗಿ ನಿರುದ್ಯೋಗಿ ಮಹಿಳೆಯರು ವಿದ್ಯಾರ್ಥಿಗಳನ್ನು ಕಮೀಷನ್ ಆಧಾರದಲ್ಲಿ ನೇಮಿಸಿದ್ದ. 

ಪ್ರತಿಯೊಬ್ಬರೂ ಆಯ್ದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲಬೇಕಾಗಿತ್ತು ಮತ್ತು ರಾತ್ರಿ 9 ಗಂಟೆಗೆ ಅವರನ್ನು ಕರೆದೊಯ್ದು ಮನೆಗೆ ಬಿಡಲಾಗುತ್ತಿತ್ತು. ದಿನದ ಸಂಗ್ರಹವನ್ನು ಎಣಿಸಿದ ನಂತರ, ಒಟ್ಟು ಮೊತ್ತದ 35 ಪ್ರತಿಶತವನ್ನುಅವರಿಗೆ ನೀಡಲಾಗುತ್ತಿತ್ತು. ಈ ಮಧ್ಯೆ ಈ ಸಹೋದರರು ಗಣೇಶ್‌ಗೂ ಲೆಕ್ಕಾಚಾರದಲ್ಲಿ ಮೋಸ ಮಾಡುತ್ತಿದ್ದರು.  ಈ ಪ್ರಕರಣದಲ್ಲಿ ಬಂಧಿತರಾದ ಇತರರನ್ನು ರಮಾವತ್ , ನೆನವತ್ ಶೈಲಜಾ, ಬನವತ್ ಸಂಗೀತಾ, ರಮಾವತ್ ಯೆಲ್ಲಮ್ಮ, ಕೇತಾವತ್ ಮೆಣಸಿನಕಾಯಿ, ಕೇತಾವತ್ ಸರೋಜಾ ಮತ್ತು ಸಬಾವತ್ ಸುನೀತಾ ಎಂದು ಗುರಿಸಲಾಗಿದೆ. ಈ ಎಲ್ಲರೂ ನಲ್ಗೊಂಡ (Nalgonda) ಮೂಲದವರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.  ಬಂಧಿತರಿಂದ 1,38,262 ಮೌಲ್ಯದ ಆಸ್ತಿ, ನೋಂದಣಿ ಪತ್ರಗಳು, ಎರಡು ಪ್ರಯಾಣಿಕ ಆಟೋಗಳು ಮತ್ತು 1.22 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಂಚನೆ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!