ಚಾಯ್‌ವಾಲಾ ಕೆಫೆ ಸಂಸ್ಥಾಪಕ ರೋಹಿತ್ ಶರ್ಮಾ ಬಾಳಲ್ಲಿ ಬಿರುಗಾಳಿ, 30ರ ಉದ್ಯಮಿ ಶವವಾಗಿ ಪತ್ತೆ

Published : Aug 02, 2026, 04:23 PM IST
Chaiwalaz Cafe Founder Rohit Sharma Dies at 30

ಸಾರಾಂಶ

ಚಾಯ್‌ವಾಲಾಝ್ ಕೆಫೆ ಸ್ಟಾರ್ಟ್ಅಫ್ ಉದ್ಯಮಿ ಆರಂಭಿಸಿ ಭಾರಿ ಯಶಸ್ಸು ಕಂಡ ರೋಹಿತ್ ಶರ್ಮಾ ಬಾಳಲ್ಲಿ ಬಿರುಗಾಳಿ ಎದ್ದು ಕೆಲ ದಿನಗಳು ಉರುಳಿತ್ತು. ಇದೀಗ 30ರ ಹರೆಯದ ಉದ್ಯಮಿ ಶವವಾಗಿ ಪತ್ತೆಯಾಗಿದ್ದಾರೆ.

ಜೈಪುರ (ಆ.02) ಭಾರತದಲ್ಲಿ ಚಾಯ್‌ವಾಲಾ ಪದ ಕಳೆದ 10 ರಿಂದ 12 ವರ್ಷಗಳಿಂದ ಭಾರಿ ಸದ್ದು ಮಾಡುತ್ತಿದೆ. ಇದೇ ಪದವನ್ನು ಬಳಸಿಕೊಂಡ ಯುವ ಉದ್ಯಮಿ ರೋಹಿತ್ ಶರ್ಮಾ ಚಾಯ್‌ವಾಲಾಝ್ ಅನ್ನೆ ಕೆಫೆ ಆರಂಭಿಸಿದ್ದ. ಕೆಲವೇ ವರ್ಷಗಳಲ್ಲಿ ಈ ಚಾಯ್‌ವಾಲಾಝ್ ಕೆಫೆ ಚೈನ್ ಬ್ಯೂಸಿನೆಸ್ ಆಗಿ ಬೆಳೆದು ನಿಂತಿತ್ತು. ಆದರೆ ಕಳೆದ ಕೆಲ ದಿನಗಳಿಂದ ಆಧ್ಯಾತ್ಮದತ್ತ ವಾಲಿದ್ದ ಉದ್ಯಮಿ ರೋಹಿತ್ ಶರ್ಮಾ ತಮ್ಮ 7 ಚಾಯ್‌ವಾಲಾಝ್ ಔಟ್‌ಲೆಟ್ ಮುಚ್ಚಿದ್ದರು. ಕೆಫೆ ಕ್ಲೋಸ್ ಮಾಡಿದ ಒಂದು ತಿಂಗಳಿಗೆ ಉದ್ಯಮಿ ರೋಹಿತ್ ಶರ್ಮಾ ಶವವಾಗಿ ಪತ್ತೆಯಾಗಿದ್ದಾರೆ.

ರೋಹಿತ್ ಶರ್ಮಾ ತಮ್ಮ ಮನೆಯ ಕೋಣೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಬೆಳಗ್ಗೆ ಎಷ್ಟು ಹೊತ್ತಾದರೂ ರೋಹಿತ್ ಶರ್ಮಾ ಕೋಣೆಯಿಂದ ಹೊರಬರದ ಕಾರಣ ಪೋಷಕರು ಆತಂಕಗೊಂಡಿದ್ದರು. ಕರೆದರೂ, ಫೋನ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಬಾಗಿಲು ಓಡೆದು ಒಳ ಪ್ರವೇಶಿಸಿದಾಗ ಘಟನೆ ಬೆಳೆಕಿಗೆ ಬಂದಿದೆ. ರೋಹಿತ್ ಶರ್ಮಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ರೋಹಿತ್ ಶರ್ಮಾರನ್ನು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ರೋಹಿತ್ ಮೃತಪಟ್ಟು ಕೆಲವು ಗಂಟೆಗಳು ಉರುಳಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

17ನೇ ವಯಸ್ಸಿಗೆ ಚಾಯ್‌ವಾಲಾಝ್ ಉದ್ಯಮ

ರಾಜಸ್ಥಾನದ ದೌಸಾ ಜಿಲ್ಲೆಯ ರೋಹಿತ್ ಶರ್ಮಾ ತಮ್ಮ 17ನೇ ವಯಸ್ಸಿಗೆ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ನರ್ಸಿಂಗ್ ಅಧ್ಯಯನದ ನಡುವೆ ಚಾಯ್‌ವಾಲಾಝ್ ಎಂಬ ಕೆಫೆ ಆರಂಭಿಸಿದ್ದರು. ಸ್ಟಾರ್ಟ್ಅಪ್ ರೀತಿ ಈ ಕೆಫೆ ಆರಂಭಗೊಂಡಿತ್ತು. ಕೆಲವೇ ದಿನಗಳಲ್ಲಿ ಚಾಯ್‌ವಾಲಾಝ್ ಕೆಫೆ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು. ಉದ್ಯಮ ವೇಗವಾಗಿ ಬೆಳೆಯ ತೊಡಗಿತ್ತು. ಹೀಗಾಗಿ ಜೈಪುರ ಸೇರಿದಂತೆ ಹಂತ ಹಂತವಾಗಿ ನಗರಗಳಿಗೆ ವಿಸ್ತರಣೆಗೊಂಡಿತು. ಬರೋಬ್ಬರಿ 7 ಚಾಯ್‌ವಾಲಾ ಔಟ್‌ಲೆಟ್ ಉದ್ಯಮವನ್ನು ವಿಸ್ತರಿಸಿತ್ತು.

ಸತತ ಪರಿಶ್ರಮ, ಹೊಸ ಆಲೋಚನೆ, ಕೆಫೆಗೆ ಸ್ಟಾರ್ಟ್ಅಪ್ ಸ್ಪರ್ಶನ ನೀಡಿ ರೋಹಿತ್ ಶರ್ಮಾ ಉದ್ಯಮದಲ್ಲಿ ಯಶಸ್ಸು ಕಂಡಿದ್ದರು. ಹೀಗಾಗಿ ರೋಹಿತ್ ಶರ್ಮಾ ಮಾಲೀಕತ್ವದ ಚಾಯ್‌ವಾಲಾಝ್ ಉತ್ತಮ ಆದಾಯಗಳಿಕೆ ಉದ್ಯಮವಾಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ತಾವು ಗಳಿಸಿದ ಆದಾಯದ ಒಂದು ಭಾಗವನ್ನು ತಮ್ಮ ಊರು, ಗ್ರಾಮ, ತಾಲೂಕಿನ ಸಮಸ್ಯೆಗಳಿಗೆ, ಶಿಕ್ಷಣಕ್ಕೆ ಸೇರಿದಂತೆ ಹಲವು ರೀತಿಯಲ್ಲಿ ನೆರವಾಗಲು ಮುಂದಾದರು. ಇದರಂತೆ ಹಲವರಿಗೆ ರೋಹಿತ್ ಶರ್ಮಾ ನೆರವಾಗಿದ್ದಾರೆ. ಸಾಮಾಜಿಕ ಸೇವೆಯಲ್ಲೂ ರೋಹಿತ್ ಶರ್ಮಾ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

ಆಧ್ಯಾತ್ಮಿಕದತ್ತ ವಾಲಿದ ರೋಹಿತ್ ಶರ್ಮಾ

ಉದ್ಯಮ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಂತೆ, ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ರೋಹಿತ್ ಶರ್ಮಾ ನೇರವಾಗಿ ಆಧ್ಯಾತ್ಮದತ್ತ ವಾಲಿದ್ದರು. ಸಂಪೂರ್ಣವಾಗಿ ಆಧ್ಯಾತ್ಮದತ್ತ ಗಮನ ಕೇಂದ್ರೀಕರಿಸಿದ್ದರು. ಚಾಯ್‌ವಾಲಾಝ್ ಕಫೆ ಬದಲು ಆಧ್ಯಾತ್ಮದಲ್ಲೇ ಕಾಲಕಳೆಯುತ್ತಿದ್ದ ರೋಹಿತ್ ಶರ್ಮಾಗೆ ಸಂಕಷ್ಟಗಳು ಎದುರಾಯಿತು. ಚಾಯ್‌ವಾಲಾಝ್ ಆಡಳಿತ ಅಸ್ತವ್ಯಸ್ತಗೊಂಡಿತ್ತು. ಇದರ ಪರಿಣಾಮ ಒಂದು ತಿಂಗಳ ಹಿಂದೆ ತನ್ನ 7 ಚಾಯ್‌ವಾಲಾಝ್ ಕೆಫೆಗಳನ್ನು ಮುಚ್ಚಿಲಾಗಿತ್ತು.

ಕೆಫೆ ಕ್ಲೋಸ್ ಮಾಡಿದ ರೋಹಿತ್ ಶರ್ಮಾ ಆಧ್ಯಾತ್ಮದಲ್ಲೇ ಮುಂದುವರಿದಿದ್ದು. ಇತ್ತ ಕುಟುಂಬಸ್ಥರು ರೋಹಿತ್ ಶರ್ಮಾ ವಿಚಾರದಲ್ಲಿ ಚಿಂತಿತರಾಗಿದ್ದರು. ನಿಧನವಾಗಿ ರೋಹಿತ್ ಶರ್ಮಾ ಸಮಸ್ಯೆಗಳನ್ನು ಅರಿತುಕೊಳ್ಳಲು ಯತ್ನಿಸಿದ್ದರು. ಇದರ ನಡುವೆ ರೋಹಿತ್ ಶರ್ಮಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

40 ಲಕ್ಷ ಸಾಲ ತೀರಿಸಲು ಕಾಲೇಜು ಬಿಟ್ಟ ರೈತನ ಮಗ; ಇಂದು ವರ್ಷಕ್ಕೆ 80 ಲಕ್ಷ ಸಂಪಾದನೆ
ನೀನೊಬ್ಬ ಮೂರ್ಖ, ಇಷ್ಟೊಂದು ಮುಕ್ತವಾಗಿ ಓಡಾಡಬೇಡ! ಬಂಧನಕ್ಕೂ ಮುನ್ನ ನೀರವ್ ಮೋದಿಗೆ ಎಚ್ಚರಿಸಿದ್ದ ವಿಜಯ್ ಮಲ್ಯ!