ರಾಜ್ಯಕ್ಕೆ GST ಪರಿಹಾರದ 2ನೇ ಕಂತಿನ 6,000 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ!

Published : Nov 02, 2020, 05:23 PM ISTUpdated : Nov 02, 2020, 05:31 PM IST
ರಾಜ್ಯಕ್ಕೆ GST ಪರಿಹಾರದ 2ನೇ ಕಂತಿನ 6,000 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ!

ಸಾರಾಂಶ

ಜಿಎಸ್ ಟಿ ಪರಿಹಾರದ 2 ನೇ ಕಂತು ಹಣ ಬಿಡುಗಡೆ / ಕೇಂದ್ರ ಸರ್ಕಾರ ದಿಂದ ಆರು ಸಾವಿರ ಕೋಟಿ ಬಿಡುಗಡೆ/ ಕರ್ನಾಟಕ ಸೇರಿ 16 ರಾಜ್ಯಗಳಿಗೆ ಪರಿಹಾರದ ಕಂತು ಬಿಡುಗಡೆ

ನವದೆಹಲಿ(ನ.02):   GST ಪರಿಹಾರದ 2ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.  ಭಾರತ ಸರ್ಕಾರದ ಹಣಕಾಸು ಸಚಿವಾಲಯ, GST ಪರಿಹಾರ ಸೆಸ್ ಕೊರತೆಯನ್ನು ಪೂರೈಸಲು ರಾಜ್ಯಗಳಿಗೆ ವಿಶೇಷ ಯೋಜನೆ ಅಡಿಯಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಕ್ಕೆ 6,000 ಕೋಟಿ ರೂಪಾಯಿ ಹಣ ಕೇಂದ್ರ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರಕ್ಕೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್

ಮೊತ್ತವನ್ನು ಸರಾಸರಿ ಸರಾಸರಿ 4.42 ರಷ್ಟು ಇಳುವರಿಯಲ್ಲಿ ಸಂಗ್ರಹಿಸಲಾಗಿದ್ದು, ಅದೇ ಬಡ್ಡಿದರದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ವಲಯಕ್ಕೆ ನೀಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಜಿಎಸ್‌ಟಿ ಪರಿಹಾರ ಹಣದಿಂದ  ರಾಜ್ಯಗಳು  ಹಾಗೂ ಕೇಂದ್ರಾಡಳಿತ ವಲಯಗಳು ಸಾಲ ಪಡೆಯುವ ವೆಚ್ಚಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ರಾಜ್ಯಗಳ ಮೇಲಿನ ಹೆಚ್ಚಿನ ಹೊರೆ ಕಡಿಮೆಯಾಗಲಿದೆ . ಇದುವರೆಗೆ ಕೇಂದ್ರ ಹಣಕಾಸು ಸಚಿವಾಲಯವು 12,000 ಕೋಟಿ ರೂ. ಬಿಡುಗಡೆ ಮಾಡಿದೆ.

ಕೊಳ್ಳುವ ಶಕ್ತಿ ಹೆಚ್ಚಳಕ್ಕೆ ನಿರ್ಮಲಾ 73 000 ಕೋಟಿ ಪ್ಯಾಕೇಜ್, ಕೇಂದ್ರ ನೌಕರರಿಗೆ ಬಂಪರ್!.

 21 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಜಿಎಸ್‌ಟಿ ಪರಿಹಾರದಲ್ಲಿ ಆಯ್ಕೆ I ಆರಿಸಿಕೊಂಡಿದೆ. ಇನ್ನು ಜಿಎಸ್‌ಟಟಿ ಪರಿಹಾರ  ಸೆಸ್ ಬಿಡುಗಡೆಗೆ ಬದಲಾಗಿ ಭಾರತ ಸರ್ಕಾರ ಸಂಗ್ರಹಿಸಿದ  ಸಾಲಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ವಲಯಕ್ಕೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!