Cement Price Increase: ಕಚ್ಚಾವಸ್ತುಗಳ ದರ ಏರಿಕೆ : ಸಿಮೆಂಟ್‌ ಬೆಲೆ ಹೆಚ್ಚಳ!

Published : Dec 03, 2021, 08:24 AM IST
Cement Price Increase: ಕಚ್ಚಾವಸ್ತುಗಳ ದರ ಏರಿಕೆ : ಸಿಮೆಂಟ್‌ ಬೆಲೆ ಹೆಚ್ಚಳ!

ಸಾರಾಂಶ

*ಕಚ್ಚಾವಸ್ತುಗಳ ದರ ಏರಿಕೆ ಹಿನ್ನೆಲೆ *ಸಿಮೆಂಟ್‌ ಬೆಲೆ 20 ರು.ಹೆಚ್ಚಳ:  *50 ಕೇಜಿಚೀಲದ ಸಿಮೆಂಟ್‌ ಬೆಲೆ 400 ರು

ಕೋಲ್ಕತ್ತಾ(ಡಿ. 03): ಕಟ್ಟಡ ನಿರ್ಮಾಣ ಚಟುವಟಿಕೆಯ (Construction Activities) ಪ್ರಮುಖ ಕಚ್ಚಾವಸ್ತುವಾದ ಸಿಮೆಂಟ್‌ ಬೆಲೆ (Cement Rate) ಇನ್ನು ಕೆಲ ತಿಂಗಳಲ್ಲಿ ಮತ್ತಷ್ಟುಏರಿಕೆಯಾಗಲಿದೆ. ಪ್ರತಿ ಚೀಲ ಸಿಮೆಂಟ್‌ ಬೆಲೆ 15-20 ರು. ಹೆಚ್ಚಳದ ಸಾಧ್ಯತೆ ಇದೆ ಎಂದು ರೇಟಿಂಗ್‌ ಏಜೆನ್ಸಿ ಕ್ರಿಸಿಲ್‌ (Crisil) ಗುರುವಾರ ತಿಳಿಸಿದೆ. ಸಿಮೆಂಟ್‌ ತಯಾರಿಕೆಗೆ ಅಗತ್ಯದ ಕಚ್ಚಾವಸ್ತುಗಳ ಬೆಲೆ ಏರಿಯಿಂದಾಗಿ ಸಿಮೆಂಟ್‌ ದರ ಏರಿಕೆಗೆ ಕಾಣವಾಗಲಿದೆ̤ ಹೀಗಾಗಿ 50 ಕೇಜಿ ಇರುವ ಪ್ರತಿ ಚೀಲದ ಸಿಮೆಂಟ್‌ ಬೆಲೆ 400 ರು. ಮುಟ್ಟಲಿದೆ. ಈ ಮೂಲಕ ಸಿಮೆಂಟ್‌ ದರ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಲಿದೆ ಎಂದು ವರದಿ ಹೇಳಿದೆ.

2020ರ ವೇಳೆ ಕೊರೋನಾ (Corona Crisis) ಕಾರಣಕ್ಕೆ ಸಿಮೆಂಟ್‌ ಬೇಡಿಕೆಯಲ್ಲಿ ಕುಸಿತವಾಗಿತ್ತು. ಆದರೆ ಈ ಆರ್ಥಿಕ ವರ್ಷದಲ್ಲಿ (Fiscal Year) ಸಿಮೆಂಟ್‌ ಬೇಡಿಕೆ ಪ್ರಮಾಣ ಶೇ.11-13ರಷ್ಟುಏರಿಕೆಯಾಗಲಿದೆ. ವಿದೇಶದಿಂದ ತರಿಸಲಾದ ಕಲ್ಲಿದ್ದಲು (Coal) ಶೇ.120ಕ್ಕಿಂತ ಹೆಚ್ಚು ಮತ್ತು ಪೆಟ್‌ಕೋಕ್‌ (pet Coke) ದರದ ಶೇ.80ರಷ್ಟುಏರಿದೆ. ಇದರಿಂದ ವಿದ್ಯುತ್‌ ಮತ್ತು ಇಂಧನ ಬೆಲೆಗಳು ಪ್ರತೀ ಟನ್‌ಗೆ 350-400 ರು.ಗೆ ಜಿಗಿದಿತ್ತು.

Dormant accounts:ಬ್ಯಾಂಕ್ ನಿಷ್ಕ್ರಿಯ ಖಾತೆಗಳಲ್ಲಿ 26,697 ಕೋಟಿ ರೂ.: ನಿರ್ಮಲಾ ಸೀತಾರಾಮನ್

ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (First Half) ಸಿಮೆಂಟ್ ಬೇಡಿಕೆಯು 20 ಪ್ರತಿಶತಕ್ಕಿಂತಲೂ ಹೆಚ್ಚು ದೃಢವಾದ ಬೆಳವಣಿಗೆಯನ್ನು ಕಂಡಿತು, ಆದರೆ ದ್ವಿತೀಯಾರ್ಧದಲ್ಲಿ (second half) 3-5 ಪ್ರತಿಶತ ಬೆಳವಣಿಗೆ ಕಾಣಬಹುದು ಎಂದು ಕ್ರಿಸಿಲ್ ಹೇಳಿದೆ. ಪ್ರಾದೇಶಿಕ ಮಟ್ಟದಲ್ಲಿ (regional level) , ದಕ್ಷಿಣ ಭಾರತದಲ್ಲಿ ಹಿಂದಿನ ತಿಂಗಳಿಗಿಂತ ಅಕ್ಟೋಬರ್‌ನಲ್ಲಿ ಪ್ರತಿ ಚೀಲಕ್ಕೆ 54 ರೂ.ಗಳ ಏರಿಕೆಯಾಗಿತ್ತು. ಮಧ್ಯ ಪ್ರದೇಶದಲ್ಲಿ ಪ್ರತಿ ಚೀಲಕ್ಕೆ 20 ರೂ. ಉತ್ತರದಲ್ಲಿ ಬೇಡಿಕೆಯ ಮೇರೆಗೆ 12 ರೂ.ಗಳ ಏರಿಕೆ ಕಂಡುಬಂದರೆ, ಪಶ್ಚಿಮದಲ್ಲಿ ಪ್ರತಿ ಚೀಲಕ್ಕೆ 10 ರೂ. ಪೂರ್ವದಲ್ಲಿ ಪ್ರತಿ ಚೀಲಕ್ಕೆ 5 ರೂ.ನಂತೆ ಸಾಧಾರಣ ಏರಿಕೆ ಕಂಡಿದೆ.

ಬೆಲೆ ಏರಿಕೆ ಬಿಸಿ, ಗ್ಯಾಸ್‌ ಸಿಲಿಂಡರ್‌ ಬೆಲೆ ಮತ್ತೆ 103.50ರೂ. ಹೆಚ್ಚಳ!

 ಇಂದು ಡಿಸೆಂಬರ್ ತಿಂಗಳ ಮೊದಲ ದಿನವಾಗಿದ್ದು, ತಿಂಗಳ ಮೊದಲ ದಿನ ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ (LPG Gas Cylinder) ಬೆಲೆಯನ್ನು ಹೆಚ್ಚಿಸಿವೆ. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation) 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 103.50 ರೂ.ವರೆಗೆ ಹೆಚ್ಚಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದ ಪ್ರತಿ ಸಿಲಿಂಡರ್ ಗೆ 100.50 ರೂ ಹೆಚ್ಚಳವಾಗಿದೆ. ಈ ಮೂಲಕ ಇಲ್ಲಿ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2101 ರೂ.ಗೆ ಏರಿಕೆಯಾಗಿದೆ.

Earn Money:ಈ 5ರೂ.ನೋಟು ನಿಮ್ಮ ಬಳಿಯಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು!

ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿಲ್ಲ

ಆದರೆ, ತೈಲ ಕಂಪನಿಗಳು ಸಾಮಾನ್ಯ ಜನರ ಗೃಹ ಬಳಕೆಗಾಗಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸದಿರುವುದುಬಹುದೊಡ್ಡ ನೆಮ್ಮದಿಯ ವಿಚಾರವಾಗಿದೆ. ಇದರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 899.50 ರೂ.ನಲ್ಲಿ ಬದಲಾಗದೆ ಉಳಿದಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!