Cryptocurrency:ಕೇಂದ್ರೀಯ ಮಂಡಳಿ ಸಭೆಯಲ್ಲಿ ಕ್ರಿಪ್ಟೋ ಸಂಪೂರ್ಣ ನಿಷೇಧಕ್ಕೆ RBI ಆಗ್ರಹ

By Suvarna News  |  First Published Dec 18, 2021, 2:41 PM IST

*ಕ್ರಿಪ್ಟೋ ಕರೆನ್ಸಿ ಮೇಲೆ ಭಾಗಶಃ ನಿಷೇಧ ಹೇರಿದ್ರೆ ಪ್ರಯೋಜನವಿಲ್ಲ
*ಕ್ರಿಪ್ಟೋ ಕುರಿತ ಅನೇಕ ವಿಷಯಗಳ ಬಗ್ಗೆ ಚರ್ಚೆ
*ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿ  ನಿಯಂತ್ರಣ ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸುತ್ತಿರೋ ಹಿನ್ನೆಲೆಯಲ್ಲಿ ಚರ್ಚೆ


ಮುಂಬೈ (ಡಿ.18):  ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು (cryptocurrencies)ಸಂಪೂರ್ಣವಾಗಿ ನಿಷೇಧಿಸಬೇಕು (Ban).ಭಾಗಶಃ(partial) ನಿಷೇಧದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಕೇಂದ್ರೀಯ ಮಂಡಳಿಗೆ (central board)ನೀಡಿರೋ ವಿಷಯ ಪ್ರಸ್ತುತಿಯಲ್ಲಿ (Presentation) ತಿಳಿಸಿದೆ. 

ಈ ಸಭೆಯಲ್ಲಿ ಆರ್ ಬಿಐ ಉನ್ನತಾಧಿಕಾರಿಗಳು ವಹಿವಾಟುಗಳ ಪತ್ತೆ ಹಚ್ಚುವಿಕೆ(trackability of transactions), ಕ್ರಿಪ್ಟೋಗಳ ಮೌಲ್ಯಮಾಪನ(trackability of transactions), ಬೆಲೆಯಲ್ಲಿ ಅತಿಯಾದ  ಚಂಚಲತೆ, ಕಾನೂನಾತ್ಮಕ ವಿಚಾರಗಳು ಹಾಗೂ ಕ್ರಿಪ್ಟೋ ವಹಿವಾಟು ಸರಪಳಿಯಲ್ಲಿನ ವಿವಿಧ ವಿಷಯಗಳ ಪಾತ್ರವನ್ನು ಗುರುತಿಸೋದು ಅತೀಮುಖ್ಯವಾಗಿದೆ ಎಂಬ ಅಂಶಗಳನ್ನು ಎತ್ತಿ ಹಿಡಿದ್ದಾರೆ.  

Tap to resize

Latest Videos

undefined

LPG Connection: ನಾಲ್ಕೇ ನಾಲ್ಕು ಕೆಲಸ ಮಾಡಿದ್ರೆ ಟ್ರಾನ್ಸಫರ್ ಆಗುತ್ತೆ ಗ್ಯಾಸ್ ಕನೆಕ್ಷನ್

ಮಂಡಳಿ ಸದಸ್ಯರಲ್ಲೊಬ್ಬರಾದ ರೇವತಿ ಐಯ್ಯರ್ (ಮಾಜಿ DCAG) 'ಕ್ರಿಪ್ಟೋ ಕರೆನ್ಸಿ ವಿಚಾರದಲ್ಲಿ ಸೂಕ್ತ ಎಚ್ಚರಿಕೆಗಳೊಂದಿಗೆ ಮುಂದುವರಿಯೋದು ಸೂಕ್ತ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಇನ್ನೊಬ್ಬ ಸದಸ್ಯರಾದ ಸಚಿನ್ ಚತುರ್ವೇದಿ (ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಹಾಗೂ ಮಾಹಿತಿ ವ್ಯವಸ್ಥೆ ಮಹಾನಿರ್ದೇಶಕ) ಸರ್ಕಾರ ಈ ವಿಷಯದಲ್ಲಿ ಅತಿರೇಕದ ಹೆಜ್ಜೆಯಿಡಬಾರದು. ಇದ್ರಿಂದ ಜಾಗತಿಕ ಮಟ್ಟದಲ್ಲಿ ಕೂಡ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು. ಹಿಂದೆ ಕೆಲವು ಸಂದರ್ಭಗಳಲ್ಲಿ ಸರ್ಕಾರ ಇಂಥ ನಿರ್ಧಾರಗಳನ್ನು ಕೈಗೊಂಡು ಆ ಬಳಿಕ ಅದ್ರಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಹೇಗೆ ಸೃಷ್ಟಿಯಾಗಿತ್ತು ಎಂಬುದನ್ನು ವಿವರಿಸಿದರು.  ಈ ಸಭೆಯಲ್ಲಿ ಭಾಗವಹಿಸಿದ್ದ ಹಣಕಾಸು ಸೇವೆಗಳ ಇಲಾಖೆ (department of financial services) ಕಾರ್ಯದರ್ಶಿ ಡೆಬಾಶಿಷ್ ಪಾಂಡ (Debasish Panda) ಕ್ರಿಪ್ಟೋ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ. 

ಕೇಂದ್ರ ಮಂಡಳಿಯ 592ನೇ ಸಭೆಯಲ್ಲಿ ಕೇಂದ್ರ ಬ್ಯಾಂಕ್ ನ ಡಿಜಿಟಲ್ ಕರೆನ್ಸಿ(digital currency) ಸ್ಥಿತಿಗತಿಗಳ ಬಗ್ಗೆ ಕೂಡ ಚರ್ಚಿಸಲಾಯಿತು. ಇದರ ಜೊತೆಗೆ ಮಂಡಳಿ ಆರ್ ಬಿಐನ ಅರ್ಧವಾರ್ಷಿಕ ಆದಾಯ ವರದಿ (ಏಪ್ರಿಲ್ ನಿಂದ ಸೆಪ್ಟೆಂಬರ್ 30, 2021ರ ತನಕ)  ಬಗ್ಗೆ ಕೂಡ ಚರ್ಚೆ ನಡೆಸಿತು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿ  ನಿಯಂತ್ರಣ ಮಸೂದೆ(Cryptocurrency and Regulation of Official Digital Currency Bill) 2021  ಮಂಡನೆಗೆ ಸರ್ಕಾರ ಸಿದ್ಧತೆ ನಡೆಸುತ್ತಿರೋ ಹಿನ್ನೆಲೆಯಲ್ಲಿ ಮಂಡಳಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಚರ್ಚೆ ನಡೆಸಿತು. 

Government Stake in PSU Banks: ಬ್ಯಾಂಕಿಂಗ್‌ ಕಾಯ್ದೆ ತಿದ್ದುಪಡಿಗೆ ಮೋದಿ ಪ್ಲಾನ್‌: ಸರ್ಕಾರದ ಪಾಲು 26%?

ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿಗಳ ನಿಯಂತ್ರಣ ಮಸೂದೆಯು( Cryptocurrency and Regulation of Official Digital Currency Bill) ಸಚಿವ ಸಂಪುಟದ ಅಂತಿಮ ಪರಿಶೀಲನೆಯಲ್ಲಿದೆ ಎಂಬ ಮಾಹಿತಿಯನ್ನು ಸರ್ಕಾರ ಇತ್ತೀಚೆಗೆ ನೀಡಿತ್ತು. ಈ ಮಸೂದೆ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ಕ್ರಿಪ್ಟೋ ಕರೆನ್ಸಿಗಳನ್ನು ಬಿಡುಗಡೆ ಮಾಡೋ ಕುರಿತು ಸರ್ಕಾರ ನಿಯಮಗಳನ್ನು ರೂಪಿಸಲಿದೆ. ಸರ್ಕಾರದಿಂದ ಈ ತನಕ ಬಂದಿರೋ ಮಾಹಿತಿಗಳ ಪ್ರಕಾರ ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿಗಳ ನಿಯಂತ್ರಣ ಮಸೂದೆ-2021 ಭಾರತದಲ್ಲಿ ಇತರ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲಿದೆ. ಆದ್ರೆ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ತಂತ್ರಜ್ಞಾನದ ಉತ್ತೇಜನ ಹಾಗೂ ಬಳಕೆಗೆ ಸಂಬಂಧಿಸಿ ಮಾತ್ರ ನಿರ್ದಿಷ್ಟ ವಿನಾಯ್ತಿಗಳನ್ನು ಈ ಮಸೂದೆ ಮೂಲಕ ನೀಡಲಾಗುತ್ತದೆ. ಆದ್ರೆ ಆರ್ ಬಿಐ ಮಾತ್ರ ಕ್ರಿಪ್ಟೋಕರೆನ್ಸಿಗೆ ಪರ್ಯಾಯ ಕರೆನ್ಸಿ ಸ್ಥಾನಮಾನ ನೀಡೋ ಕುರಿತು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.  ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2018ರಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯಬೇಕಾದಂತಹ ಪರಿಸ್ಥಿತಿ ಎದುರಾಗಿದ್ರೂ ಸುಪ್ರೀಂ ಕೋರ್ಟ್ ಮಾತ್ರ ತನ್ನ ನಿರ್ಧಾರ ಬದಲಾಯಿಸಿಲ್ಲ. 
 

click me!