ತೆರಿಗೆ ಉಳಿಸಲು ಪಿಎಫ್‌ ಖಾತೆ ವಿಭಜಿಸಿ: ಸಿಬಿಡಿಐ ಸಲಹೆ

By Kannadaprabha NewsFirst Published Sep 3, 2021, 10:23 AM IST
Highlights
  •  ಕಾರ್ಮಿಕರ ಭವಿಷ್ಯ ನಿಧಿ ಮಂಡಳಿಯ ಹೂಡಿಕೆದಾರರ ಆದಾಯದ ಮೇಲೆ ತೆರಿಗೆ ವಿಧಿಸುವ ಹೊಸ ಕಾನೂನಿನ ಕುರಿತು ಅಧಿಸೂಚನೆ
  • ಹೊಸ ನಿಯಮದ ಅನ್ವಯ 2021ರ ಮಾ.31ರ ಬಳಿಕ ವಾರ್ಷಿಕ 2.5 ಲಕ್ಷ ರು.ಗಿಂತ ಹೆಚ್ಚಿನ ಹೂಡಿಕೆ ಮಾಡುವವರು ತೆರಿಗೆ

ನವದೆಹಲಿ (ಸೆ.03): ಕಾರ್ಮಿಕರ ಭವಿಷ್ಯ ನಿಧಿ ಮಂಡಳಿಯ ಹೂಡಿಕೆದಾರರ ಆದಾಯದ ಮೇಲೆ ತೆರಿಗೆ ವಿಧಿಸುವ ಹೊಸ ಕಾನೂನಿನ ಕುರಿತು ಕೇಂದ್ರೀಯ ನೇರ ತೆರಿಗೆ ಮಂಡಳಿ ಗುರುವಾರ ಅಧಿಸೂಚನೆ ಹೊರಡಿಸಿದೆ. ಈ ಹೊಸ ನಿಯಮದ ಅನ್ವಯ 2021ರ ಮಾ.31ರ ಬಳಿಕ ವಾರ್ಷಿಕ 2.5 ಲಕ್ಷ ರು.ಗಿಂತ ಹೆಚ್ಚಿನ ಹೂಡಿಕೆ ಮಾಡುವವರು ತೆರಿಗೆ ಪಾವತಿಸಬೇಕಾಗುತ್ತದೆ. ಸರ್ಕಾರಿ ನೌಕರರಿಗೆ ಈ ಮಿತಿ 5 ಲಕ್ಷ ರು.ನಷ್ಟಿದೆ.

ಆದರೆ ಈ ತೆರಿಗೆ 2021ರ ಮಾ.31ಕ್ಕೂ ಮುನ್ನ ಎಷ್ಟೇ ಹಣ ಹೂಡಿಕೆ ಮಾಡಿದ್ದರೂ ಅವರಿಗೆ ಅನ್ವಯವಾಗದು. ಈ ಕುರಿತ ಲೆಕ್ಕಾಚಾರದ ಗೊಂದಲವನ್ನು ತಪ್ಪಿಸುವ ನಿಟ್ಟಿನಲ್ಲಿ ಮತ್ತು ತೆರಿಗೆ ಉಳಿಸುವ ನಿಟ್ಟಿನಲ್ಲಿ ಗ್ರಾಹಕರು ತಮ್ಮ ಪಿಎಫ್‌ ಖಾತೆಯೊಳಗೇ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಬಹುದು ಎಂದು ಸಿಬಿಡಿಟಿ ಹೇಳಿದೆ.

ಗುಡ್ ನ್ಯೂಸ್; ಇನ್ಮುಂದೆ ಪಿಎಫ್ ಎರಡೂ ಮೊತ್ತವನ್ನು ಕೇಂದ್ರವೇ ಭರಿಸಲಿದೆ!

ಆದಾಯ ತೆರಿಗೆ ತಿದ್ದುಪಡಿ ನಿಯಮ- 2021ರ ಪ್ರಕಾರ, ನೌಕರರ ಭವಿಷ್ಯ ನಿಧಿಯ ಮೊತ್ತ ವಾರ್ಷಿಕ 2.5 ಲಕ್ಷ ರು. ಮೀರಿದರೆ ಆ ಹಣಕ್ಕೆ ತೆರಿಗೆ ಅನ್ವಯ ಆಗಲಿದೆ. 2021ರ ಏ.1ರಿಂದ ಪಿಎಫ್‌ನಲ್ಲಿ ಹೂಡಿಕೆ ಮಾಡುತ್ತಿರುವ ಹಣಕ್ಕೆ ಈ ನಿಯಮ ಅನ್ವಯಿಸಲಿದೆ.

click me!