Income Tax Refund: 1.50 ಲಕ್ಷ ಕೋಟಿ ರೂ. ಆದಾಯ ತೆರಿಗೆ ಮರುಪಾವತಿ; ಐಟಿ ಮರುಪಾವತಿ ಸ್ಟೇಟಸ್ ಚೆಕ್ ಮಾಡೋದು ಹೇಗೆ?

By Suvarna NewsFirst Published Jan 8, 2022, 7:44 PM IST
Highlights

*ತೆರಿಗೆ ಮರುಪಾವತಿ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರೋ ಸಿಬಿಡಿಟಿ
*ಮರುಪಾವತಿ ಹಣ ತೆರಿಗೆದಾರರು ಐಟಿಆರ್ ನಲ್ಲಿ ನಮೂದಿಸಿರೋ ಬ್ಯಾಂಕ್ ಖಾತೆಗೆ ಜಮಾ 
*2,19,913 ಪ್ರಕರಣಗಳಲ್ಲಿ ಒಟ್ಟು 99,213 ಕೋಟಿ ರೂ. ಕಾರ್ಪೋರೇಟ್ ತೆರಿಗೆ ಮರುಪಾವತಿ
 

Business Desk: 2021ರ ಏಪ್ರಿಲ್ ನಿಂದ 2022ರ ಜನವರಿ 3ರ ತನಕ 1.48 ಕೋಟಿಗಿಂತಲೂ ಹೆಚ್ಚು ತೆರಿಗೆ ಪಾವತಿದಾರರಿಗೆ (Taxpayers) 1,50,407 ಕೋಟಿ ರೂ. ಮರುಪಾವತಿ (Refund) ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಟ್ವೀಟ್ (Tweet) ಮೂಲಕ ಮಾಹಿತಿ ನೀಡಿದೆ. '1,46,24,250 ಪ್ರಕರಣಗಳಲ್ಲಿ 51,194 ಕೋಟಿ ರೂ. ಆದಾಯ ತೆರಿಗೆ (Income Tax) ಮರುಪಾವತಿಸಲಾಗಿದೆ. ಹಾಗೆಯೇ 2,19,913 ಪ್ರಕರಣಗಳಲ್ಲಿ ಒಟ್ಟು 99,213 ಕೋಟಿ ರೂ. ಕಾರ್ಪೋರೇಟ್ ತೆರಿಗೆ (corporate tax) ಮರುಪಾವತಿಸಲಾಗಿದೆ. ಇದು 2021-22ನೇ ಆರ್ಥಿಕ ಸಾಲಿಗೆ (Financial Year) ಸಂಬಂಧಿಸಿ 1.1ಕೋಟಿ ರೂ. ಮರುಪಾವತಿಯನ್ನು (Refund)ಕೂಡ ಒಳಗೊಂಡಿದೆ.' ಎಂದು ಟ್ವೀಟ್ ನಲ್ಲಿ ಸಿಬಿಡಿಟಿ ತಿಳಿಸಿದೆ.

ಒಂದು ವೇಳೆ ನೀವು ಈ ಆರ್ಥಿಕ ಸಾಲಿನಲ್ಲಿ ನಿಮ್ಮ ವಾರ್ಷಿಕ ಆದಾಯದ ಮೇಲೆ ವಿಧಿಸಲ್ಪಡೋ ತೆರಿಗೆಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸಿದ್ರೆ ಆದಾಯ ತರಿಗೆ ರಿಟರ್ನ್ (ITR) ಸಲ್ಲಿಕೆ ಮಾಡಿದ ಬಳಿಕ ಆದಾಯ ತೆರಿಗೆ ಮರುಪಾವತಿಯನ್ನು (Refund) ಪಡೆಯಲು ಅರ್ಹರಾಗುತ್ತೀರಿ. ಈ ಬಗ್ಗೆ ನಿಮಗೆ ಆದಾಯ ತೆರಿಗೆ ಕಾಯ್ದೆ (Income Tax Act) 1961ರ ಸೆಕ್ಷನ್ 143 (1) ಅಡಿಯಲ್ಲಿ ನೋಟಿಸ್ (Notice) ಕಳುಹಿಸಲಾಗುತ್ತದೆ. ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಡೆಸುತ್ತದೆ ಹಾಗೂ ಈ ಹಣ ತೆರಿಗೆದಾರರು ಐಟಿಆರ್ ನಲ್ಲಿ ನಮೂದಿಸಿರೋ ಬ್ಯಾಂಕ್ (Bank) ಖಾತೆಗೆ (Account) ಜಮಾ ಮಾಡಲಾಗುತ್ತದೆ.

Belated ITR: ನೀವು ಡಿಸೆಂಬರ್ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಿಲ್ವ? ಹಾಗಾದ್ರೆ ಈಗ ನಿಮ್ಮ ಮುಂದಿರೋ ಆಯ್ಕೆ ಏನು?

ಆದಾಯ ತೆರಿಗೆ ಮರುಪಾವತಿ ಚೆಕ್ ಮಾಡೋದು ಹೇಗೆ?
ನೀವು ಆದಾಯ ತೆರಿಗೆ ಮರುಪಾವತಿ ಸ್ಟೇಟಸ್ ಅನ್ನು ಹೊಸ ಆದಾಯ ತೆರಿಗೆ ಪೋರ್ಟಲ್ (new income tax portal) ಅಥವಾ ಎನ್ ಎಸ್ ಡಿಎಲ್ (NSDL) ವೆಬ್ ಸೈಟ್ ಮೂಲಕ ಪರಿಶೀಲಿಸಬಹುದು. 

ಆದಾಯ ತೆರಿಗೆ ಪೋರ್ಟಲ್ ನಲ್ಲಿ ಪರಿಶೀಲಿಸೋದು ಹೇಗೆ?
ಹಂತ 1: www.incometax.gov.in ಭೇಟಿ ನೀಡಿ.  ನಿಮ್ಮ ಪ್ಯಾನ್ (PAN ) ಸಂಖ್ಯೆ ಹಾಗೂ ಪಾಸ್ ವರ್ಡ್ ( password)ಬಳಸಿ ನಿಮ್ಮ ಖಾತೆಗೆ ಲಾಗಿ ಇನ್ ಆಗಿ.
ಹಂತ 2: e-file ಆಯ್ಕೆ ಆರಿಸಿ. ಆ ಬಳಿಕ  e-file ಆಯ್ಕೆ ಅಡಿಯಲ್ಲಿರೋ 'Income tax returns'ಆಯ್ಕೆ ಮಾಡಿ. ನಂತರ 'View Filed
returns'ಆರಿಸಿ.
ಹಂತ 3: ಆ ಬಳಿಕ ಅಂದಾಜು ವರ್ಷ (AY) ಆಯ್ಕೆ ಮಾಡಬೇಕು. 2020-21ನೇ ಆರ್ಥಿಕ ಸಾಲಿಗೆ ಅಂದಾಜು ವರ್ಷ 2021-22 ಆಗಿರುತ್ತದೆ. 
ಹಂತ 4:  ಆ ನಂತರ 'View Details'ಆಯ್ಕೆ ಮಾಡಿ. ಈಗ ನಿಮಗೆ ನಿಮ್ಮ ಐಟಿಆರ್ ಸ್ಟೇಟಸ್ ಕಾಣಿಸುತ್ತದೆ. 
ಇದ್ರಲ್ಲಿ ನಿಮಗೆ ತೆರಿಗೆ ಮರುಪಾವತಿ ಮಾಡಿರೋ ದಿನಾಂಕ, ಮರುಪಾವತಿ ಮಾಡಿರೋ ಮೊತ್ತ ಮುಂತಾದ ಮಾಹಿತಿಗಳು ಕೂಡ ಸಿಗುತ್ತವೆ.

RBI Guidelines: ಇಂಟರ್ನೆಟ್ ಇಲ್ಲದ ಮೊಬೈಲ್‌ ಬಳಸಿ ದಿನಕ್ಕೆ 2000 ರು. ಕಳಿಸಿ!

NSDL ವೆಬ್ ಸೈಟ್ ನಲ್ಲಿ ಪರಿಶೀಲಿಸೋದು ಹೇಗೆ?
ತೆರಿಗೆ ಅಧಿಕಾರಿಗಳು ಮರುಪಾವತಿ ಆದೇಶವನ್ನು ಸಂಬಂಧಪಟ್ಟ ಬ್ಯಾಂಕಿಗೆ ಕಳುಹಿಸಿದ 10 ದಿನಗಳ ಬಳಿಕವಷ್ಟೇ ತೆರಿಗೆದಾರರಿಗೆ ವೆಬ್ ಸೈಟ್ ನಲ್ಲಿ ಮರುಪಾವತಿ ಸ್ಟೇಟಸ್ ಚೆಕ್ ಮಾಡಲು ಸಾಧ್ಯವಾಗುತ್ತದೆ. 
ಹಂತ 1:  https://tin.tin.nsdl.com/oltas/refundstatuslogin.html ಭೇಟಿ ನೀಡಿ.
ಹಂತ 2:  ಪ್ಯಾನ್ (PAN) ಮಾಹಿತಿಗಳನ್ನು ನಮೂದಿಸಿ.
ಹಂತ 3: ಅಂದಾಜು ವರ್ಷ ಆಯ್ಕೆ ಮಾಡಿ. ಈಗಾಗಲೇ ತಿಳಿಸಿದಂತೆ 2020-21ನೇ ಆರ್ಥಿಕ ಸಾಲಿಗೆ ಅಂದಾಜು ವರ್ಷ 2021-22 ಆಗಿರುತ್ತದೆ. 
ಹಂತ 4: ಕ್ಯಾಪ್ಚ (captcha ) ಕೋಡ್ ( code) ನಮೂದಿಸಿದ ಬಳಿಕ submit ಮೇಲೆ ಕ್ಲಿಕ್ ಮಾಡಿ. ನಿಮ್ಮ ಮರುಪಾವತಿ ಸ್ಟೇಟಸ್ ಆಧಾರದಲ್ಲಿ ಸ್ಕ್ರೀನ್ ಮೇಲೆ ಮೆಸೇಜ್ ಮೂಡುತ್ತದೆ. 

click me!