
Business Desk: ಹೊಸ ಕಾರು ಖರೀದಿಸುವಾಗ ಉತ್ತಮ ವಿಮೆಯನ್ನು ಖರೀದಿಸಲಾಗುತ್ತದೆ. ಇದು ಕಾರು ಖರೀದಿ ಪ್ರಕ್ರಿಯೆಯ ಆಂತರಿಕ ಭಾಗವೇ ಆಗಿದೆ. ವಾಹನ ಕೈಗಾರಿಕಾ ವಲಯದಲ್ಲಿ ನಿರಂತರವಾಗಿ ಬೆಲೆಯೇರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿಮೆ ಖರೀದಿಸೋದ್ರಿಂದ ಅನೇಕ ಪ್ರಯೋಜನಗಳಿವೆ. ವಾಹನ ವಿಮೆಗಳು ಸಾಕಷ್ಟು ದುಬಾರಿ ಕೂಡ ಆಗಿವೆ. ಹೀಗಿರುವಾಗ ನೀವು ಈ ಹಿಂದಿನ ಕಾರಿಗೆ ವಿಮೆ ಹೊಂದಿದ್ದರೆ ಹಾಗೂ ಯಾವುದೇ ಕ್ಲೇಮ್ ಮಾಡದಿದ್ರೆ, ಆಗ ನೀವು ಆ ವಿಮೆಯನ್ನು ಹೊಸ ವಿಮೆಯ ವೆಚ್ಚ ತಗ್ಗಿಸಿಕೊಳ್ಳಲು ಬಳಸಬಹುದು. ಹೊಸ ಕಾರಿಗೆ ವಿಮೆ ಖರೀದಿಸುವಾಗ 'ನೋ ಕ್ಲೇಮ್ ಬೋನಸ್ ' ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ನೋ ಕ್ಲೇಮ್ ಬೋನಸ್ ಪ್ರಮಾಣಪತ್ರ ಪಡೆಯಿರಿ
ನೋ ಕ್ಲೇಮ್ ಬೋನಸ್ ಪ್ರಮಾಣಪತ್ರ ಪಡೆಯಲು ನೀವು ನಿಮ್ಮ ಈ ಹಿಂದಿನ ಕಾರ್ ವಿಮಾ ಕಂಪನಿಯನ್ನು ಸಂಪರ್ಕಿಸಬೇಕು. ಒಂದು ವೇಲೆ ನೀವು ನಿಮ್ಮ ಹೊಸ ಕಾರಿಗೆ ಬೇರೆ ಕಂಪನಿಯಿಂದ ವಿಮೆ ಪಡೆಯುತ್ತಿದ್ದರೆ ನಿಮ್ಮ ಮೊದಲಿನ ವಿಮೆ ಕಂಪನಿಯಿಂದ 'ನೋ ಕ್ಲೇಮ್ ಬೋನಸ್ ಟ್ರಾನ್ಸ್ ಫರ್ ಪ್ರಮಾಣಪತ್ರ' ಪಡೆಯಲು ಮರೆಯಬೇಡಿ.
Personal Finance : ಒಂದು ಸ್ಕೂಟಿ ಮೇಲೆ ಶೋ ರೂಂ ಮಾಲೀಕರಿಗೆ ಲಾಭವಿರುತ್ತೆ, ಚೌಕಾಸಿ ಮಾಡ್ಬಹುದು!
ಅಗತ್ಯ ದಾಖಲೆಗಳನ್ನು ಕಲೆ ಹಾಕಿ
ನೋ ಕ್ಲೇಮ್ ಬೋನಸ್ (ಎನ್ ಸಿಬಿ) ಕ್ಲೇಮ್ ಮಾಡಲು ನೀವು ಅಗತ್ಯ ದಾಖಲೆಗಳನ್ನು ನೀಡಬೇಕು. ಈ ದಾಖಲೆಗಳಲ್ಲಿನಿಮ್ಮ ಹಿಂದಿನ ಕಾರ್ ಕಂಪನಿಯ ವಿಮಾ ದಾಖಲೆಗಳು, ನಿಮ್ಮ ಹಳೆಯ ಕಾರ್ ಕಂಪನಿಯ ಎನ್ ಸಿಬಿ ಪ್ರಮಾಣಪತ್ರದ ಪ್ರತಿ ಹಾಗೂ ನಿಮ್ಮ ಹೊಸ ವಾಹನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು ಬೇಕು. ಇನ್ನು ನಿಮ್ಮ ಹೊಸ ಕಾರ್ ದಾಖಲೆಯಲ್ಲಿ ಉತ್ಪಾದನೆಗೊಂಡ ದಿನಾಂಕ ಹಾಗೂ ಅದರ ಮಾಡೆಲ್ ಇರೋದನ್ನು ಖಚಿತಪಡಿಸಿಕೊಳ್ಳಿ.
ಹೊಸ ವಿಮಾ ಕಂಪನಿಗೆ ಮಾಹಿತಿ ನೀಡಿ
ಹೊಸ ವಿಮಾ ಪಾಲಿಸಿ ಪಡೆಯುವಾಗ ಹೊಸ ವಿಮಾ ಕಂಪನಿಗೆ ನಿಮ್ಮ 'ನೋ ಕ್ಲೇಮ್ ಬೋನಸ್ (ಎನ್ ಸಿಬಿ) ಅರ್ಹತೆ ಬಗ್ಗೆ ಮಾಹಿತಿ ನೀಡಿ. ಪಾಲಿಸಿ ಖರೀದಿಸುವಾಗ ಹಾಗೂ ಯಾವುದೇ ಪಾವತಿಗಳನ್ನು ಮಾಡುವ ಮುನ್ನ ಈ ಬಗ್ಗೆ ಗಮನ ಹರಿಸಿ. ವಿಮಾ ಕಂಪನಿ ಆಗ ಎನ್ ಸಿಬಿ ಪ್ರಮಾಣಪತ್ರ ಹಾಗೂ ನಿಮ್ಮ ಕಾರ್ ಮಾಹಿತಿಗಳನ್ನು ಬಳಸಿಕೊಂಡು ಎನ್ ಸಿಬಿ ಡಿಸ್ಕೌಂಟ್ ಲೆಕ್ಕ ಹಾಕುತ್ತದೆ. ಈ ಡಿಸ್ಕೌಂಟ್ ಗೆ ಅರ್ಜಿ ಸಲ್ಲಿಸಿದ ಬಳಿಕ ವಿಮಾ ಪಾಲಿಸಿಯ ಒಟ್ಟು ವೆಚ್ಚ ತಗ್ಗುತ್ತದೆ.
ಉಳಿದ ಮೊತ್ತ ಪಾವತಿಸಿ
ಎನ್ ಸಿಬಿ ಡಿಸ್ಕೌಂಟ್ ಅಪ್ಲೈ ಮಾಡಿದ ಬಳಿಕ ಉಳಿದ ಪ್ರೀಮಿಯಂ ಮೊತ್ತ ಪಾವತಿಸಿ. ನಿರಂತರ ವಿಮಾ ಕವರೇಜ್ ಗೆ ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡೋದು ಅಗತ್ಯ. ಪ್ರೀಮಿಯಂ ಪಾವತಿಗಳಲ್ಲಿ ವಿಳಂಬ ಮಾಡೋದನ್ನು ತಪ್ಪಿಸಿ.
ಪ್ರಧಾನ ಮಂತ್ರಿ ಸುರಕ್ಷಾ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಬಿತ್ತು ಭರ್ಜರಿ ದಂಡ!
ಕೆವೈಸಿ ಕಡ್ಡಾಯ
ಹೊಸ ಆರೋಗ್ಯ, ವಾಹನ, ಪ್ರಯಾಣ ಹಾಗೂ ಗೃಹ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ನೋ ಯುವರ್ ಕಸ್ಟಮರ್ ಅಥವಾ ಕೆವೈಸಿ ದಾಖಲೆಗಳನ್ನು ಜನವರಿ 1 , 2023ರಿಂದ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಕಡ್ಡಾಯಗೊಳಿಸಿದೆ. ಜೀವ, ಆರೋಗ್ಯ ವಿಮೆ ಸೇರಿದಂತೆ ಎಲ್ಲ ವಿಧದ ವಿಮೆಗಳಿಗೆ ಈ ನಿಯಮ ಅನ್ವಯಿಸುತ್ತದೆ. ಈ ಹಿಂದೆ ಒಂದು ಲಕ್ಷ ರೂ. ಮೇಲ್ಪಟ್ಟ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ಮಾತ್ರ ಕೆವೈಸಿ ದಾಖಲೆಗಳು ಕಡ್ಡಾಯವಾಗಿ ನೀಡಬೇಕಿತ್ತು. ಆದರೆ, ಈಗ ಗ್ರಾಹಕರು ಕ್ಲೈಮ್ ಮಾಡುವ ತನಕ ಕಾಯುವ ಬದಲು ಪಾಲಿಸಿ ಮಾಡಿಸುವಾಗಲೇ ಕೆವೈಸಿ ದಾಖಲೆಗಳನ್ನು ಒದಗಿಸಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.