
ಫ್ಲೈ ದುಬೈ ವಿಮಾನದಲ್ಲಿ (FZ1073) 174 ಜನರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಶೌರ್ಯಕ್ಕೆ ಮಾದರಿಯಾಗಿದ್ದಾರೆ. ಕಠಿಣ ಸಂದರ್ಭದಲ್ಲಿ ವಿಮಾನ ನಿರ್ವಹಿಸಿದ ಸ್ಮಿತ್ ಈಗ ಪ್ರೀತಿ ಮತ್ತು ಗೌರವದ ಜತೆಗೆ ಲಕ್ಷಾಂತರ ರೂಪಾಯಿ ಬಹುಮಾನಗಳನ್ನು ಪಡೆಯುತ್ತಿದ್ದಾರೆ. ಸ್ಮಿತ್ ಧೈರ್ಯ, ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತಿದೆ. ಮ್ಯಾನ್‌ಕೈಂಡ್ ಫಾರ್ಮಾದಿಂದ ಗುಜರಾತ್ ಸರ್ಕಾರ ಮತ್ತು ರಾಜ್ಯಸಭಾ ಸಂಸದರವರೆಗೆ ಎಲ್ಲರೂ ಅವರಿಗೆ ನಗದು ಬಹುಮಾನಗಳನ್ನು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಯಾರ್ಯಾರು ಎಷ್ಟೆಷ್ಟು ಕೊಟ್ಟಿದ್ದಾರೆ ಎನ್ನುವುದನ್ನು ನೋಡೊಣ ಬನ್ನಿ.
ಮ್ಯಾನ್‌ಕೈಂಡ್ ಫಾರ್ಮಾ ಸ್ಮಿತ್ ಮಚ್ಚರ್‌ಗೆ ₹1 ಕೋಟಿ (ಸುಮಾರು $10 ಮಿಲಿಯನ್ USD) ನೀಡಿದೆ. ಸ್ಮಿತ್ ತನ್ನ ಸ್ವಂತ ಜೀವವನ್ನು ಲೆಕ್ಕಿಸದೆ ಮಾಡಿದ ಕ್ರಮಗಳು ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿದವು, ಇದು ಪ್ರತಿಯೊಬ್ಬ ಸಿಬ್ಬಂದಿ ಜವಾಬ್ದಾರಿಯನ್ನು ಉದಾಹರಣೆಯಾಗಿ ತೋರಿಸುತ್ತದೆ ಎಂದು ಕಂಪನಿ ಹೇಳಿದೆ. ಸ್ಮಿತ್ ಮೂಲತಃ ಗುಜರಾತ್‌ನವರು. ಅವರ ಧೈರ್ಯವನ್ನು ಗುರುತಿಸಿ, ಗುಜರಾತ್ ಸರ್ಕಾರ ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ ಯನ್ನು ಘೋಷಿಸಿದೆ. ಸರ್ಕಾರವು ₹25,00,000 ನಗದು ಬಹುಮಾನ ಸಹ ಘೋಷಿಸಿದೆ. ಅಕ್ಟೋಬರ್ 1 ರಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇದನ್ನು ಘೋಷಿಸಿದ್ದಾರೆ.
ರಾಜ್ಯಸಭಾ ಸಂಸದರು 25,00,000 ಮಿಲಿಯನ್ ರೂ,ಗಳ ಪ್ರಶಸ್ತಿ ಸಹ ಘೋಷಿಸಿದ್ದಾರೆ. ಇದರ ಜೊತೆಗೆ, ಸನ್ ಫೌಂಡೇಶನ್‌ನ ರಾಜ್ಯಸಭಾ ಸಂಸದ ವಿಕ್ರಮ್‌ಜಿತ್ ಸಿಂಗ್ ಸಾಹ್ನಿ ಅವರು ಸ್ಮಿತ್ ಮಚ್ಚರ್ ಅವರಿಗೆ 25ಲಕ್ಷ ರೂ.,ಗಳ ಹಾಗೂ ಸ್ಮಿತ್ ಮಚ್ಚರ್ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಸ್ಮಿತ್‌ಗೆ ರಾಷ್ಟ್ರೀಯ ಮಟ್ಟದ ಶೌರ್ಯ ಪ್ರಶಸ್ತಿಯನ್ನು ನೀಡಬೇಕೆಂದು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲ, ಭಾರತೀಯ ಪೈಲಟ್‌ಗಳ ಒಕ್ಕೂಟ (ಎಫ್‌ಐಪಿ) ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳು ಪ್ರಧಾನ ಮಂತ್ರಿಯವರನ್ನು ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಅಥವಾ ಅಶೋಕ ಚಕ್ರ ನೀಡುವಂತೆ ವಿನಂತಿಸಿದ್ದಾರೆ.
ಸೆಪ್ಟೆಂಬರ್ 30 ರಂದು, ಫ್ಲೈದುಬೈ ವಿಮಾನ FZ1073 ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿತ್ತು. ವಿಮಾನದಲ್ಲಿ 174 ಜನರಿದ್ದರು. ಹಾರಾಟದ ಸಮಯದಲ್ಲಿ, ಸಹ-ಪೈಲಟ್ ಕಾಕ್‌ಪಿಟ್‌ನಲ್ಲಿ ಸ್ಮಿತ್ ಮಚ್ಚರ್ ಮೇಲೆ ದಾಳಿ ಮಾಡಿದರು. ಸ್ಮಿತ್ ಗಂಭೀರವಾಗಿ ಗಾಯಗೊಂಡರು. ಪರಿಸ್ಥಿತಿ ಹದಗೆಡುತ್ತಿದ್ದರೂ, ಅವರು ವಿಮಾನದ ನಿಯಂತ್ರಣವನ್ನು ಕಾಯ್ದುಕೊಂಡರು. ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು ಮತ್ತು ಸುರಕ್ಷಿತವಾಗಿ ಇಳಿಸಲಾಯಿತು, ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲಾ 174 ಪ್ರಯಾಣಿಕರ ಜೀವಗಳು ಉಳಿದವು. ಘಟನೆಯ ತನಿಖೆ ಮುಂದುವರೆದಿದೆ.
ಸ್ಮಿತ್ ಮಚ್ಚರ್ ಪ್ರಸ್ತುತ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಧೈರ್ಯವನ್ನು ಪರಿಗಣಿಸಿ, ಅವರಿಗೆ ರಾಷ್ಟ್ರಮಟ್ಟದಲ್ಲಿ ಶೌರ್ಯ ಪ್ರಶಸ್ತಿ ನೀಡಬೇಕೆಂಬ ಬೇಡಿಕೆಗಳು ಕೇಳಿಬರುತ್ತಿವೆ. ಭಾರತೀಯ ಪೈಲಟ್‌ಗಳ ಸಂಘವು ಅವರಿಗೆ ಶೌರ್ಯ ಪ್ರಶಸ್ತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.