CAG report: ನಷ್ಟದಲ್ಲಿದೆ ಬೆಸ್ಕಾಂ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 54 ಸರ್ಕಾರಿ ಉದ್ಯಮಗಳು!

By Santosh NaikFirst Published Jul 12, 2023, 6:36 PM IST
Highlights


CAG Report Of Karnataka: 2022ರ ಮಾರ್ಚ್‌ 31ಕ್ಕೆ ಕೊನೆಗೊಳ್ಳುವಂತೆ  ರಾಜ್ಯ ಹಣಕಾಸುಗಳ ದೇಶದ ಉನ್ನತ ಆಡಿಟ್ ವಾಚ್‌ಡಾಗ್‌ ಆಗಿರುವ ಸಿಎಜಿ, ರಾಜ್ಯದ ಸಾರ್ವಜನಿಕ ಉದ್ಯಮಗಳು ತಮ್ಮ ಮೌಲ್ಯಕ್ಕಿಂತ ಹೆಚ್ಚಿನ ಸಾಲವನ್ನು ಹೊಂದಿವೆ ಎಂದು ಹೇಳಿದೆ.
 

ಬೆಂಗಳೂರು (ಜು.12): ಕರ್ನಾಟಕ ರಾಜ್ಯದ ಕಳೆದ ಆರ್ಥಿಕ ವರ್ಷದ ಮಹಾಲೇಖಪಾಲರ ವರದಿ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಈಗಾಗಾಲೇ ನಷ್ಟದಲ್ಲಿರುವ  ಹಾಗೂ ನಿಷ್ಕ್ರೀಯವಾಗಿರುವ ಕೆಲವೊಂದು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುವಂತೆ ಶಿಫಾರಸು ಮಾಡಿದೆ. ರಾಜ್ಯದ ಆರ್ಥಿಕತೆಗೆ ಒಂಚೂರು ಸಹಾಯ ಮಾಡದ, ಆದಾಯಕ್ಕಿತ ಸಾಲವೇ ಹಚ್ಚಾಗಿರುವರಾಜ್ಯ ಸಾರ್ವಜನಿಕ ಉದ್ದಿಮೆ ಕಂಪನಿಗಳನ್ನು ಮುಚ್ಚುವಂತೆ ತಿಳಿಸಿದೆ. ಈ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. 119 ಸರ್ಕಾರಿ ಕಂಪನಿಗಳು ಮತ್ತು ಆರು ನಿಗಮಗಳು ಸೇರಿದಂತೆ 125 ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಎಸ್‌ಪಿಎಸ್‌ಇ) 54 ಎಸ್‌ಪಿಎಸ್‌ಇಗಳು ಭಾರಿ ನಷ್ಟದಲ್ಲಿವೆ ಎಂದು ಹೇಳಿದೆ.2022ರ ಮಾರ್ಚ್ 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿರಾಜ್ಯದಲ್ಲಿನ 54 ಸಾರ್ವಜನಿಕ ಉದ್ದಿಮೆಗಳು 37,893.24 ಕೋಟಿ ರೂ.ಗಳಷ್ಟು ಒಟ್ಟಾರೆ ನಷ್ಟ ಅನುಭವಿಸಿದೆ. ಈ ಪೈಕಿ 39 ಉದ್ದಿಮೆಗಳು 11,378 ಕೋಟಿ ರೂ. ನಷ್ಟಕ್ಕೆ ಸಿಲುಕಿವೆ. ದರಲ್ಲೂ 54 ಉದ್ದಿಮೆಗಳ ಪೈಕಿ 34 ಉದ್ದಿಮೆಗಳ ಆಸ್ತಿ ಮೌಲ್ಯವು ಸಾಲದ ಮೊತ್ತಕ್ಕೆ ಸಮನಾಗಿದೆ ಎಂದು ಹೇಳಿದೆ.

"34 ರಾಜ್ಯ ಸರ್ಕಾರಿ ಕಂಪನಿಗಳ ನಿವ್ವಳ ಮೌಲ್ಯವು ಸಂಚಿತ ನಷ್ಟಗಳಿಂದ ಸಂಪೂರ್ಣವಾಗಿ ಮುಕ್ತಾಯವಾಗಿದೆ ಮತ್ತು ಅವುಗಳ ನಿವ್ವಳ ಮೌಲ್ಯವು ಶೂನ್ಯ ಅಥವಾ ಋಣಾತ್ಮಕವಾಗಿದೆ" ಎಂದು ಆಡಿಟ್ ವರದಿ ಹೇಳಿದೆ. 119 ಸರ್ಕಾರಿ ಕಂಪನಿಗಳ ಪಕಿ 13 ಕಂಪನಿಗಳು ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ವರದಿ ಹೇಳಿದೆ. ಈ ಎಸ್‌ಪಿಎಸ್‌ಇಗಳು 97,053.87 ಕೋಟಿ ಬಂಡವಾಳ ಹೂಡಿಕೆ ಮತ್ತು ರೂ 93,885.59 ಕೋಟಿ ದೀರ್ಘಾವಧಿ ಸಾಲವನ್ನು ಹೊಂದಿವೆ. ನಿಷ್ಕ್ರಿಯ ಎಸ್‌ಪಿಎಸ್‌ಇಗಳಲ್ಲಿ ಸರ್ಕಾರದ ಹೂಡಿಕೆ 607.78 ಕೋಟಿ ಆಗಿದೆ. ಇದರಲ್ಲಿ ಬಂಡವಾಳ ಹೂಡಿಕೆಯಾಗಿ 160.21 ಕೋಟಿ ರೂಪಾಯಿ ಇದ್ದರೆ, ದೀರ್ಘಕಾಲದ ಸಾಲದ ಮೊತ್ತ 447.57 ಕೋಟಿ ರೂಪಾಯಿ ಆಗಿದೆ. "ನಿಷ್ಕ್ರಿಯ ಪಿಎಸ್‌ಯುಗಳಲ್ಲಿನ ಹೂಡಿಕೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡದ ಕಾರಣ ಇದು ಪ್ರಮುಖ ವಿಚಾರವಾಗಿದೆ" ಎಂದು ಆಡಿಟ್ ವರದಿ ಹೇಳಿದೆ.

ಒಟ್ಟು 125 ರಾಜ್ಯ ಸರ್ಕಾರಿ ಕಂಪನಿಗಳ ಪೈಕಿ, 50 ಕಂಪನಿಗಳು 2021-22ರಲ್ಲಿ ಆದಾಯವನ್ನು ಘೋಷಣೆ ಮಾಡಿವೆ. ಈ ಅವಧಿಯಲ್ಲಿ ಬಂದ ಒಟ್ಟಾರೆ ಆದಾಯ 2608.22 ಕೋಟಿ ರೂಪಾಯಿ ಆಗಿದ್ದರೆ, ಅದರಲ್ಲಿ ಮೂರು ಎಸ್‌ಪಿಎಸ್‌ಇಗಳ ಪಾಲು ಶೇ. 63ರಷ್ಟಾಗಿದೆ ಎಂದು ವರದಿ ಹೇಳಿದೆ. ಅವುಗಳೆಂದರೆ, ಅವುಗಳೆಂದರೆ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್), ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ಸ್ ಲಿಮಿಟೆಡ್ (ಕೆಎಸ್‌ಎಂಸಿಎಲ್), ಮತ್ತು ಕರ್ನಾಟಕ ರಾಜ್ಯ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ಎಂದು ತಿಳಿಸಿದೆ. ಉಳಿದಂತೆ ಬೆಸ್ಕಾಂ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗಳು ನಷ್ಟದಲ್ಲಿಯೇ ಮುಂದುವರಿಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

"ಕಂಪನಿಯ ಲಾಭದಾಯಕತೆ ಮತ್ತು ಅದರ ಬಂಡವಾಳದ ದಕ್ಷತೆಯನ್ನು ಅಳೆಯುವ ಬಂಡವಾಳದ ಮೇಲಿನ ಆದಾಯವು 2019-20 ರಲ್ಲಿ ಶೇಕಡಾ 3.61 ರಿಂದ 2021-22 ರ ಅವಧಿಯಲ್ಲಿ ಶೇಕಡಾ 1.18 ಕ್ಕೆ ಇಳಿದಿದೆ ಎಂದು ಮಹಾಲೇಖಪಾಲರ ವರದಿ ತಿಳಿಸಿದೆ.

ಇನ್ನು 50 ಲಾಭದಾಯಕ ಕಂಪನಿಗಳಿಂದ  ಬಂದಿರುವ ಒಟ್ಟಾರೆ ಆದಾಯದಲ್ಲೂ ಇಳಿಕೆಯಾಗಿದೆ. 2021-22ರಲ್ಲಿ ಆದಾಯ 2608.22 ಕೋಟಿ ಆಗಿದ್ದರೆ, 2020-21 ರಲ್ಲಿ ಆದಾಯದ ಪ್ರಮಾಣ 2987 ಕೋಟಿ ರೂಪಾಯಿ ಆಗಿತ್ತು. 

ಗೃಹಜ್ಯೋತಿ ಎಫೆಕ್ಟ್: ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ

ಸಿಎಜಿ ನೀಡಿರುವ ಸಲಹೆಗಳು: ನಿರೀಕ್ಷಿತ ಉಳಿತಾಯ ಗುರುತಿಸಲು ಮತ್ತು ನಿಗದಿತ ಕಾಲಮಿತಿಯೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.  ಹಣಕಾಸು ನಿಬಂಧನೆಗಳಿಗೆ ಪುನರ್‌ವಿನಿಯೋಗ ಆದೇಶಗಳನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ. ಹಣವು ಲೋಪವಾಗುವುದನ್ನು ತಪ್ಪಿಸಲು ವರ್ಷದ ಕೊನೆಯಲ್ಲಿ ವೆಚ್ಚ ಮಾಡುವುದನ್ನು ತಪ್ಪಿಸಬೇಕು.  ಅನುದಾನ ಬಳಕೆ ಪ್ರಮಾಣಪತ್ರಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸಲು ಸೂಕ್ತ ಕ್ರಮ ಅಗತ್ಯವಾಗಿದೆ. ಪ್ರಮಾಣಪತ್ರ ಸಲ್ಲಿಸದಿರುವ ನಿಯಂತ್ರಣಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಜಿ ಸಲಹೆ ನೀಡಿದೆ. 

ನಾವೇನು ದರೋಡೆ ಮಾಡಿ ದುಡ್ಡು ಕೊಡೋದಿಲ್ಲ, ಖಜಾನೆಯನ್ನ ಜನ ತುಂಬಿಸಿ ಇಟ್ಟಿದ್ದಾರೆ: ಎಚ್‌ಡಿ ಕುಮಾರಸ್ವಾಮಿ

click me!