
ಹೆಚ್ಚಿಗೆ ಸಂಬಳ ಬರುವ ಕೆಲಸವನ್ನೇ ಎಲ್ಲರು ಹುಡುಕ್ತಾರೆ. ಸ್ವಲ್ಪ ಅನುಭವವಾದ್ರೆ ಸಾಕು ಕೆಲಸ ಬದಲಿಸ್ತಾರೆ. ಅಲ್ಲಿ ಬಡ್ತಿ ಮತ್ತು ಹೆಚ್ಚಿನ ವೇತನದ ನಿರೀಕ್ಷೆ ಇರುತ್ತದೆ. ಉದ್ಯೋಗಾವಕಾಶ ಹೆಚ್ಚಿರುವ ಹಾಗೂ ಅತ್ಯುತ್ತಮ ಸಂಬಳ ಸಿಗುವ ಕಾರಣಕ್ಕೆ ಜನರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಯಾವುದೇ ಸಮೀಕ್ಷೆ ವರದಿ ನೋಡದೆ, ಅಧಿಕ ಸಂಬಳ ಬರುವ ನಗರಗಳು ಯಾವುವು ಅಂತಾ ನಿಮ್ಮನ್ನು ಕೇಳಿದ್ರೆ ಬೆಂಗಳೂರು, ದೆಹಲಿ, ಮುಂಬೈ ಅಂತಾ ನಾವು ಮೆಟ್ರೋ ನಗರಗಳ ಹೆಸರು ಹೇಳ್ತೇವೆ. ಆದ್ರೆ ನಿಮ್ಮ ಉತ್ತರ ತಪ್ಪು. ನಾವಿಂದು ಭಾರತದ ಯಾವ ನಗರದಲ್ಲಿ ಹೆಚ್ಚು ಸಂಬಳ ಸಿಗುತ್ತೆ ಅಂತಾ ನಿಮಗೆ ಹೇಳ್ತೇವೆ.
ಸರಾಸರಿ ವೇತನ (Salary.) ಹೆಚ್ಚಿರುವ ನಗರ ಯಾವುದು? : ಸರಾಸರಿ ವೇತನ ಸಮೀಕ್ಷೆ (Survey) ಯ ಅಂಕಿಅಂಶಗಳ ಪ್ರಕಾರ, ಬೆಂಗಳೂರು, ದೆಹಲಿಯಲ್ಲ, ಬದಲಾಗಿ ಮಹಾರಾಷ್ಟ್ರ (Maharashtra) ದ ಸೋಲಾಪುರ ನಗರವು ಭಾರತದಲ್ಲಿ ವಾರ್ಷಿಕ ಸರಾಸರಿ ವೇತನದ ವಿಷಯದ ರೇಸ್‌ನಲ್ಲಿ ಮುಂದಿದೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನರಿಗೆ ಅತಿ ಹೆಚ್ಚು ಸಂಬಳ ನೀಡಲಾಗುತ್ತದೆ. ಈ ವೇತನ ಸಮೀಕ್ಷೆಯಲ್ಲಿ ವಿಶ್ವದ 138 ದೇಶಗಳ ಸಾವಿರಾರು ಕಂಪನಿಗಳ ಡೇಟಾವನ್ನು ಪರಿಗಣಿಸಲಾಗಿದೆ. ಭಾರತದಲ್ಲಿ ಒಟ್ಟು 11,570 ಉದ್ಯೋಗಿಗಳ ಮೇಲೆ ಈ ಸಮೀಕ್ಷೆಯನ್ನು ಮಾಡಲಾಗಿದೆ. ಭಾರತದಲ್ಲಿ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಸಂಬಳ ನೀಡಲಾಗುತ್ತಿದೆ ಎಂಬುದು ಕೂಡ ಸಮೀಕ್ಷೆಯಿಂದ ತಿಳಿದಿದೆ.
ಐಟಿಸಿ ಎಂಡಿ ಸಂಜೀವ್ ಪುರಿ ವೇತನ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!
ಮಾಹಿತಿ ಪ್ರಕಾರ, ಸೊಲ್ಲಾಪುರದ ವಾರ್ಷಿಕ ಸರಾಸರಿ ವೇತನ ವರ್ಷಕ್ಕೆ 28 ಲಕ್ಷ 10 ಸಾವಿರ ರೂಪಾಯಿ. ಸರಾಸರಿ ವೇತನದಲ್ಲಿ ಮುಂಬೈ ನಗರ ಎರಡನೇ ಸ್ಥಾನದಲ್ಲಿದೆ. ಇದರ ವಾರ್ಷಿಕ ಸರಾಸರಿ ವೇತನ ವಾರ್ಷಿಕ 21.17 ಲಕ್ಷ ರೂಪಾಯಿ. ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಇವರ ವಾರ್ಷಿಕ ಸರಾಸರಿ ವೇತನ ವಾರ್ಷಿಕ 21.01 ಲಕ್ಷ ರೂಪಾಯಿ. ಇನ್ನು ನವದೆಹಲಿ ನಾಲ್ಕನೇ ಸ್ಥಾನದಲ್ಲಿದ್ದು ವಾರ್ಷಿಕ 20.43 ಲಕ್ಷ ರೂಪಾಯಿಯಾಗಿದೆ. ಮಹಾರಾಷ್ಟ್ರದ ಸೋಲಾಪುರವನ್ನು ಟೈರ್-2 ನಗರಗಳಲ್ಲಿ ಬರುತ್ತದೆ ಎನ್ನುವುದು ವಿಶೇಷ.
Post Office Schemes: ಪ್ರತಿದಿನ 133 ರೂಪಾಯಿ ಹೂಡಿಕೆ ಮಾಡಿ ಲಕ್ಷಾಧಿಪತಿಗಳಾಗಿ
ಮಹಿಳೆಯರಿಗೆ ಸಿಗುವ ಸರಾಸರಿ ವೇತನ ಎಷ್ಟು? : ಸಮೀಕ್ಷೆಯ ಪ್ರಕಾರ, ಭಾರತದಲ್ಲಿ 19 ಲಕ್ಷ 53 ಸಾವಿರ 55 ರೂಪಾಯಿ ಪುರುಷರ ವಾರ್ಷಿಕ ಸರಾಸರಿ ವೇತನವಾಗಿದೆ. ಇದು ಮಹಿಳೆಯರಿಗೆ 15,16,296 ರೂಪಾಯಿಯಾಗಿದೆ. ನಿರ್ವಹಣೆ ಮತ್ತು ವಾಣಿಜ್ಯ ಉದ್ಯಮದಲ್ಲಿ ಭಾರತೀಯರು ಹೆಚ್ಚು ಸಂಭಾವನೆ ಪಡೆಯುತ್ತಾರೆ. ಈ ಉದ್ಯಮದ ಸರಾಸರಿ ವೇತನ ವಾರ್ಷಿಕ 29.50 ಲಕ್ಷ ರೂಪಾಯಿ. ಕಾನೂನು ವೃತ್ತಿಪರರು ಎರಡನೇ ಸ್ಥಾನದಲ್ಲಿ ಬರ್ತಾರೆ. ಈ ಕ್ಷೇತ್ರದ ಸರಾಸರಿ ವೇತನ 27 ಲಕ್ಷ ರೂಪಾಯಿ.
ಯಾರಿಗೆ ಸಿಗ್ತಿದೆ ಎಷ್ಟೆಷ್ಟು ವೇತನ : ಸಮೀಕ್ಷೆ ಪ್ರಕಾರ, 20 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಜನರ ಸರಾಸರಿ ವಾರ್ಷಿಕ ವೇತನ ವರ್ಷಕ್ಕೆ 38,15,462 ರೂಪಾಯಿಯಾಗಿದೆ. ಅದೇ 16 ರಿಂದ 20 ವರ್ಷಗಳ ಅನುಭವ ಇರುವವರು ವರ್ಷಕ್ಕೆ 36 ಲಕ್ಷ 50 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಡಾಕ್ಟರೇಟ್ ಪದವಿ ಪಡೆದವರ ಸರಾಸರಿ ವಾರ್ಷಿಕ ವೇತನ 27 ಲಕ್ಷ 52 ಸಾವಿರ ರೂಪಾಯಿ.
ಸರಾಸರಿ ಮಾಸಿಕ ವೇತನದಲ್ಲಿ ಇದು ಮುಂದಿದೆ : ಇನ್ನು ಸರಾಸರಿ ಮಾಸಿಕ ವೇತನದ ಬಗ್ಗೆ ಮಾತನಾಡೋದಾದ್ರೆ ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಮುಂದಿದೆ. ಪಶ್ಚಿಮ ಬಂಗಾಳವು ಎರಡನೇ ಸ್ಥಾನದಲ್ಲಿದ್ದರೆ ದೆಹಲಿ ಮೂರನೇ ಸ್ಥಾನದಲ್ಲಿದೆ. ಬೆಂಗಳೂರನ್ನು ಹಿಂದಿಕ್ಕಿ ಬಿಹಾರ ನಾಲ್ಕನೇ ಸ್ಥಾನದಲ್ಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.