
ನವದೆಹಲಿ[ಆ.29]: ಕೇಂದ್ರ ಸರ್ಕಾರವು ತನ್ನ ಸ್ವಾಮ್ಯದ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಶೇ.2 ರಷ್ಟು ತುಟ್ಟಿ ಭತ್ಯೆ ಏರಿಸಲು ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಏರಿಸಲು ಅನುಮೋದನೆ ನೀಡಿದ್ದು, ವೇತನವು ಜುಲೈ 1, 2018ರಿಂದ ಅನ್ವಯವಾಗಲಿದೆ.
ಜು.1ರಿಂದ ಹಾಲಿಯಿರುವ ಶೇ.7 ರಷ್ಟು ವೇತನ ಹಾಗೂ ಪಿಂಚಣಿ ವೇತನದೊಂದಿಗೆ ಶೇ.2 ರಷ್ಟು ಏರಿಸಲಾಗುತ್ತದೆ. ಈ ವೇತನವು 7ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಅನ್ವಯವಾಗಲಿದೆ.
ಕೇಂದ್ರ ಸರ್ಕಾರದ 48.41 ಲಕ್ಷ ನೌಕರರು ಹಾಗೂ 62.03 ಲಕ್ಷ ಪಿಂಚಣಿದಾರರು ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರದ ಅನುಕೂಲ ಪಡೆದುಕೊಳ್ಳಲಿದ್ದಾರೆ. ತುಟ್ಟಿಭತ್ಯೆ ಏರಿಕೆಯಿಂದ ಕೇಂದ್ರಕ್ಕೆ ಪ್ರತಿ ವರ್ಷ 6112.20 ಕೋಟಿ ಹಾಗೂ ಪ್ರಸಕ್ತ ಸಾಲಿನಲ್ಲಿ 4074 ಕೋಟಿ ರೂ. ಹೊರೆ ಬೀಳಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.