ಐಟಿಆರ್ ದಿನಾಂಕ ವಿಸ್ತರಣೆ ಕೊಡಗಿಗೂ ಕೊಡಿ!

Published : Aug 29, 2018, 02:32 PM ISTUpdated : Sep 09, 2018, 09:23 PM IST
ಐಟಿಆರ್ ದಿನಾಂಕ ವಿಸ್ತರಣೆ ಕೊಡಗಿಗೂ ಕೊಡಿ!

ಸಾರಾಂಶ

ಕೇರಳ ಪ್ರವಾಹ ಹಿನ್ನೆಲೆಯಲ್ಲಿ ಐಟಿಆರ್ ಅವಧಿ ವಿಸ್ತರಣೆ! ಆಗಸ್ಟ್ 31 ರ ಬದಲಾಗಿ ಸೆಪಸ್ಟೆಂಬರ್ 15 ಕೊನೆ ದಿನಾಂಕ! ಪ್ರವಾಹದಿಂದ ನಲುಗಿರುವ ಕೇರಳಕ್ಕೆ ಕೇಂದ್ರದ ನೆರವು! ಅವಧಿ ವಿಸ್ತರಣೆ ಕೇವಲ ಕೇರಳ ಜನರಿಗೆ ಮಾತ್ರ! ಕನಾರ್ನಾಟಕದ ಕೊಡಗಿಗೆ ಏಕಿಲ್ಲ ಈ ಸವಲತ್ತು?

ಬೆಂಗಳೂರು(ಆ.29): ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ 15 ದಿನಗಳ ಕಾಲ ಮುಂದೂಡಲಾಗಿದೆ. ಐಟಿಆರ್ ಸಲ್ಲಿಸಲು ಇದೇ ಆಗಸ್ಟ್ 31 ಕೊನೆ ದಿನಾಂಕವಾಗಿತ್ತು. ಆದರೆ ಪ್ರವಾಹದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಈ ಅವಧಿಯನ್ನು ಸೆಪ್ಟೆಂಬರ್ 15 ರ ವರೆಗೆ ವಿಸ್ತರಿಸಿದೆ.

ಆದರೆ ಆದಾಯ ತೆರಿಗೆ ಇಲಾಖೆಯ ಈ ನಿರ್ಧಾರ ಇದೀಗ ವಿವಾದದ ಕಿಡಿ ಹೊತ್ತಿಸಿದೆ. ಕಾರಣ ಕೇರಳ ಮಾದರಿಯಲ್ಲೇ ಕರ್ನಾಟಕದ ಕೊಡಗಿನಲ್ಲೂ ಜಲಪ್ರಳಯವಾಗಿದ್ದು, ಐಟಿಆರ್ ಸಡಿಲಿಕೆ ಕೊಡಗಿಗೆ ಏಕಿಲ್ಲ ಎಂಬ ಪ್ರಶ್ನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಲಪ್ರಳಯಕ್ಕೆ ಇಡೀ ಕೇರಳ ತತ್ತರಿಸಿ ಹೋಗಿರುವುದು ನಿಜ. ಕೇರಳಕ್ಕೆ 15 ದಿನಗಳ ಐಟಿಆರ್ ಅವಧಿ ವಿಸ್ತರಣೆ ಮಾಡಿದ್ದೂ ಒಳ್ಳೆಯ ನಡೆ. ಆದರೆ ಕೊಡಗಿನಲ್ಲೂ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಕೇರಳಿಗರಷ್ಟೇ ಕನ್ನಡಿಗರೂ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೊಡಗು ಜಿಲ್ಲೆಗಷ್ಟೇ ಅನ್ವಯವಾಗುವಂತೆ ಐಟಿಆರ್ ಅವಧಿ ವಿಸ್ತರಣೆ ಮಾಡಬಹುದಿತ್ತು ಎಂಬುದು ಹಲವರ ಅಭಿಪ್ರಾಯ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ