ನೀವ್ ಕೊಟ್ರಲ್ಲಾ ಹಳೇ ನೋಟು, ಕ್ರಾಸ್ ಆಗಿದೆ ಆರ್‌ಬಿಐ ಗೇಟು!

By Web DeskFirst Published Aug 29, 2018, 1:58 PM IST
Highlights

ಆರ್‌ಬಿಐನಿಂದ ವಾರ್ಷಿಕ ವರದಿ ಪ್ರಕಟ! ಶೇ.99.3 ರಷ್ಟು ಹಳೆ ನೋಟುಗಳು ವಾಪಸ್!  ಹಳೆ ನೋಡುಗಳ ಸಂಸ್ಕರಣೆ ಬಹುತೇಕ ಪೂರ್ಣ! ಜಿಎಸ್‌ಟಿ ಕುರಿತು ಆರ್‌ಬಿಐ ವರದಿಯಲ್ಲಿ ಉಲ್ಲೇಖ
 

ಮುಂಬೈ(ಆ.29): 2017-18 ರ ವಾರ್ಷಿಕ ವರದಿ ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನಿಷೇಧಗೊಂಡಿದ್ದ 500, 1000 ರೂ. ನೋಟುಗಳ ಪೈಕಿ ಶೇ.99.3 ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದೆ. 

ನಿಷೇಧಗೊಂಡಿರುವ 500, 1000 ರೂ. ನೋಟುಗಳ ಸಂಸ್ಕರಣೆ ರಿಸರ್ವ್ ಬ್ಯಾಂಕ್‌ನ ಎಲ್ಲಾ ಕೇಂದ್ರಗಳಲ್ಲಿಯೂ ಬಹುತೇಕ ಪೂರ್ಣಗೊಂಡಿದ್ದು, ಚಲಾವಣೆಯಲ್ಲಿದ್ದ 15,310.73 ಬಿಲಿಯನ್ ನಷ್ಟು  ಎಸ್‌ಬಿಎನ್ ವಾಪಸ್ ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ.
 
2016 ರ ನವೆಂಬರ್ 8 ರಂದು(ನೋಟು ನಿಷೇಧಗೊಂಡ ದಿನ) ಒಟ್ಟು 15,417.93 ಬಿಲಿಯನ್ ನಷ್ಟು ಮೊತ್ತ  ಚಲಾವಣೆಯಲ್ಲಿತ್ತು. ಈಗ 15,310.73 ಬಿಲಿಯನ್ ನಷ್ಟು ಎಸ್‌ಬಿಎನ್ ವಾಪಸ್ ಬಂದಿದೆ ಎಂದು ಆರ್ ಬಿಐ ಹೇಳಿದೆ. 

ಇದೇ ವೇಳೆ ಜಿಎಸ್‌ಟಿ ಬಗ್ಗೆಯೂ ಆರ್‌ಬಿಐ ಉಲ್ಲೇಖಿಸಿದ್ದು, ಜಿಎಸ್ ಟಿ ಜಾರಿ ದೇಶದ ತೆರಿಗೆ ಪದ್ಧತಿಯಲ್ಲಿ ಮಹತ್ತರ ಮೈಲಿಗಲ್ಲಾಗಿದ್ದು, ಅತ್ಯಂತ ಸಮರ್ಥ ತೆರಿಗೆ ಪದ್ಧತಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

click me!