
ನ್ಯೂಯಾರ್ಕ್: ಶರವೇಗದ ಆರ್ಥಿಕಾಭಿವೃದ್ಧಿ ಕಾಣುತ್ತಿರುವ ಭಾರತ 2075ರ ವೇಳೆಗೆ ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಅಮೆರಿಕವನ್ನೂ ಹಿಂದಿಕ್ಕಿ ವಿಶ್ವದ 2ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಭಾರತದ ಜಿಡಿಪಿ 44 ಲಕ್ಷ ಕೋಟಿ ರು.ನಷ್ಟಿದ್ದು, ಅಮೆರಿಕದ್ದು 430 ಲಕ್ಷ ಕೋಟಿ ರು.ನಷ್ಟಿದೆ. 2075ರ ವೇಳೆಗೆ ಭಾರತದ ಜಿಡಿಪಿ 52.5 ಲಕ್ಷ ಕೋಟಿ ಡಾಲರ್ ದಾಟಲಿದೆ ಎಂದು ವರದಿ ಹೇಳಿದೆ.
140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಜಿಡಿಪಿ (ಬೆಳವಣಿಗೆ ದರ) ನಾಟಕೀಯವಾಗಿ ವಿಸ್ತರಣೆಯಾಗಲಿದೆ. ಅಮೆರಿಕದ ಜಿಡಿಪಿಯನ್ನು 2075ಕ್ಕೆ ಹಿಂದಿಕ್ಕಲಿದೆ ಎಂದು ಅಮೆರಿಕ ಮೂಲದ ಬಹುರಾಷ್ಟ್ರೀಯ ಹೂಡಿಕೆ ಕಂಪನಿಯಾಗಿರುವ ಗೋಲ್ಡ್‌ಮನ್ ಸ್ಯಾಕ್ಸ್ ಮುನ್ಸೂಚನೆ ನೀಡಿದೆ. ಭಾರತದ ಜಿಡಿಪಿಯ ನಾಗಾಲೋಟದಲ್ಲಿ ನಾವೀನ್ಯತೆ ಹಾಗೂ ತಂತ್ರಜ್ಞಾನಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಇದಲ್ಲದೆ ಕಾರ್ಮಿಕ ಪಡೆಯ ಸಹಭಾಗಿತ್ವ, ಪ್ರತಿಭಾವಂತರ ಸಮೂಹ, ಔದ್ಯೋಗಿಕ ವಯಸ್ಸಿನವರ ಜನಸಂಖ್ಯಾ ಅನುಪಾತವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದೆ. ಒಂದು ವೇಳೆ, ಕಾರ್ಮಿಕ ಪಡೆಯ ಸಹಭಾಗಿತ್ವದ ಪ್ರಮಾಣ ಏರಿಕೆಯಾಗದಿದ್ದರೆ ಇದು ಸಾಕಾರವಾಗದೆ ಇರಬಹುದು ಎಂಬ ಎಚ್ಚರಿಕೆಯನ್ನೂ ಗೋಲ್ಡ್‌ಮನ್ ಸ್ಯಾಚ್ಸ್ ನೀಡಿದೆ.
ಮೋದಿ ದೂರದೃಷ್ಟಿ ಫಲ ಭಾರತದ ಆರ್ಥಿಕತೆಯಲ್ಲಿ ಕಾಣುತ್ತಿದೆ: ರಷ್ಯಾ ಅಧ್ಯಕ್ಷ
ನೋಟುಗಳ ಹಿಂಪಡೆತಕ್ಕಿದೆ ಸುದೀರ್ಘ ಇತಿಹಾಸ: ಆರ್ಥಿಕತೆ ಮೇಲೆ ಶೂನ್ಯ ಪರಿಣಾಮ: ತಜ್ಞರು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.