ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಮ್ಯಾಜಿಕ್‌: 10 ವರ್ಷದಲ್ಲಿ ಆರ್ಥಿಕತೆ ಡಬಲ್‌!

ಕಳೆದ 10 ವರ್ಷಗಳಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ. ಭಾರತದ ಜಿಡಿಪಿಯು 10 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. 

Magic after PM Modi came to power Economy doubled in 10 years gvd

ನವದೆಹಲಿ (ಮಾ.27): ಕಳೆದ 10 ವರ್ಷಗಳಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ. ಭಾರತದ ಜಿಡಿಪಿಯು 10 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. 2015ರಲ್ಲಿ 2.1 ಲಕ್ಷ ಕೋಟಿ ಡಾಲರ್‌ (179 ಲಕ್ಷ ಕೋಟಿ ರು,) ಇದ್ದ ಭಾರತದ ಜಿಡಿಪಿಯು 2025ರ ಅಂತ್ಯದಲ್ಲಿ 4.27 ಲಕ್ಷ ಕೋಟಿ ಡಾಲರ್‌ಗೆ (365 ಲಕ್ಷ ಕೋಟಿ ರು.ಗೆ) ತಲುಪಲಿದೆ. ಈ ಮೂಲಕ ಹತ್ತೇ ವರ್ಷಗಳಲ್ಲಿ ದೇಶದ ಜಿಡಿಪಿ ಶೇ.105 ಪಟ್ಟು ಹೆಚ್ಚಾದಂತಾಗಲಿದೆ. 

ಈ ಮೂಲಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತವು ವಿಶ್ವದ ಪ್ರಮುಖ ಆರ್ಥಿಕತೆಗಳಾದ ಚೀನಾ(ಶೇ.76), ಅಮೆರಿಕ(ಶೇ.66), ಜರ್ಮನಿ(ಶೇ.44), ಫ್ರಾನ್ಸ್‌(ಶೇ.38) ಮತ್ತು ಬ್ರಿಟನ್‌(ಶೇ.28) ಅನ್ನು ಹಿಂದಿಕ್ಕಿದೆ’ ಎಂದು ಐಎಂಎಫ್‌ ಹೇಳಿದೆ. ’ಇದರ ಜತೆಗೆ ಭಾರತದ ನೈಜ ಜಿಡಿಪಿ ಬೆಳವಣಿಗೆಯು ಈ ವರ್ಷ ಶೇ.6.5ರಷ್ಟಿರಲಿದೆ. ಈ ಮೂಲಕ ದೇಶದ ಆರ್ಥಿಕ ಬೆಳವಣಿಗೆಯು ಬಲಿಷ್ಠವಾಗಿರಲಿದೆ ಎಂದೂ ಅದು ಅಂದಾಜಿಸಿದೆ. ಆರ್ಥಿಕ ಪರಿಸ್ಥಿತಿಯ ಮೇಲೆ ಹಣದುಬ್ಬರವು ಮಹತ್ವದ ಪರಿಣಾಮ ಬೀರುತ್ತದೆ. ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಈ ವರ್ಷ ಹಣದುಬ್ಬರವು ಶೇ.4.1ಕ್ಕೆ ಸೀಮಿತವಾಗರಲಿದೆ. ಇನ್ನು ಜಿಡಿಪಿ ತಲಾ ಆದಾಯವು 10.22 ಲಕ್ಷದಷ್ಟಿರಲಿದೆ. ಇದು ಕಳೆದ ಹಲವು ವರ್ಷಗಳಿಂದ ಜನರ ಬದುಕಿನ ಮಟ್ಟ ಸುಧಾರಣೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Latest Videos

ಸಾಲದ ಬಗ್ಗೆ ಕಳವಳ: ಆದರೆ, ಸರ್ಕಾರದ ಒಟ್ಟಾರೆ ಸಾಲವು ಜಿಡಿಪಿಯ ಶೇ.82.6ರಷ್ಟಿದೆ. ಅಂದರೆ ದೇಶದ ಆರ್ಥಿಕ ಉತ್ಪಾದನೆಗಿಂತ ಸಾಲ ಹೆಚ್ಚಿನ ಪ್ರಮಾಣದಲ್ಲಿದೆ. ಸಾಲದ ಪ್ರಮಾಣದಲ್ಲಿನ ಹೆಚ್ಚಳವು ಹಣಕಾಸು ನೀತಿಗಳ ನಿರ್ವಹಣೆಗೆ ಸವಾಲು ಸೃಷ್ಟಿಸಬಹುದು. ಇಷ್ಟಾದರೂ ಭಾರತ ತನ್ನ ಆರ್ಥಿಕ ಬೆಳವಣಿಗೆ ಕಾಯ್ದುಕೊಳ್ಳಲಿದೆ ಮತ್ತು ಸರ್ಕಾರ ತನ್ನ ವಿತ್ತೀಯ ಗುರಿ ಈಡೇಸುತ್ತಾ ಸಾಗಲಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

2015ರಲ್ಲಿ ₹179 ಲಕ್ಷ ಕೋಟಿ ಇದ್ದ ಆರ್ಥಿಕತೆ 2025ರಲ್ಲಿ ₹365 ಲಕ್ಷ ಕೋಟಿಗೆ ಏರಿಕೆ: ಐಎಂಎಫ್‌
ಚೀನಾ, ಅಮೆರಿಕ ದೇಶ ಹಿಂದಿಕ್ಕಿದ ಭಾರತ 
ಪ್ರಧಾನಿ ಮೋದಿ ಅವಧಿಯಲ್ಲಿನ ಸಾಧನೆ ಬಗ್ಗೆ ಐಎಂಎಫ್‌ ಮೆಚ್ಚುಗೆ

ಐಎಂಎಫ್‌ ಹೇಳಿದ್ದೇನು?
-ಕಳೆದ 10 ವರ್ಷದ ಅವಧಿಯಲ್ಲಿ ಭಾರತ ವಿಶ್ವದಲ್ಲೇ ಅತಿವೇಗದಲ್ಲಿ ಆರ್ಥಿಕಾಭಿವೃದ್ಧಿ ದೇಶವಾಗಿ ಹೊರಹೊಮ್ಮಿದೆ
-2015ರ ಬಳಿಕ ಭಾರತದ ಜಿಡಿಪಿ ದಿಗ್ವುಣಗೊಂಡಿದೆ. ₹179 ಲಕ್ಷ ಕೋಟಿ ಆರ್ಥಿಕತೆ ₹365 ಲಕ್ಷ ಕೋಟಿಗೆ ಏರಿದೆ
-ಶೇ.105ರಷ್ಟು ಜಿಡಿಪಿ ಏರಿಕೆಯ ಮೂಲಕ ಚೀನಾ, ಅಮೆರಿಕದ, ಜರ್ಮನಿ, ಫ್ರಾನ್ಸ್‌, ಬ್ರಿಟನ್‌ ದೇಶಗಳ ಹಿಂದಿಕ್ಕಿದೆ
-ಭಾರತದ ಸಾಲದ ಪ್ರಮಾಣ ಹೆಚ್ಚಿದ್ದರೂ ಜಿಡಿಪಿ ಜೊತೆಗೆ ವಿತ್ತೀಯ ಗುರಿ ಈಡೇರಿಸುವ ಭರವಸೆ ಇದೆ: ಐಎಂಎಫ್‌

vuukle one pixel image
click me!